Advertisement

ಇದ್ದಲ್ಲಿಯೇ ಪಡಿತರ ಪಡೆಯಿರಿ: ಜಿಲ್ಲಾಧಿಕಾರಿ

05:36 PM Apr 02, 2020 | Suhan S |

ದಾವಣಗೆರೆ: ಕೋವಿಡ್ 19 ವೈರಸ್‌ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ನಿಂದ ಸಿಲುಕಿಕೊಂಡಿರುವ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಸಾರ್ವಜನಿಕರು ತಮ್ಮ ಬಳಿ ಪಡಿತರ ಚೀಟಿ ಇದ್ದಲ್ಲಿ ತಾವಿರುವಲ್ಲಿಯೇ ಪಡಿತರ ಪಡೆಯಬಹುದು ಎಂದು ಜಿಲ್ಲಾ ಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

Advertisement

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಅಧಿ ಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಯಾವುದೇನಿರಾಶ್ರಿತರು ಹಸಿವಿನಿಂದ ಬಳಲಬಾರದು. ವಿವಿಧ ರಾಜ್ಯಗಳ ಕಾರ್ಮಿಕರು, ಅಲೆಮಾರಿ ಜನಾಂಗದವರು ಇರುವಲ್ಲಿಗೇ ತೆರಳಿ, ಸಿದ್ಧ ಆಹಾರ ಅಥವಾ ಪಡಿತರ ಒದಗಿಸುವ ಮೂಲಕ ಅವರಿಗೆ ನೆರವು ನೀಡಬೇಕೆಂದರು.

ಲೈಂಗಿಕ ಕಾರ್ಯಕರ್ತರು, ಮಂಗಳಮುಖೀಯರಿಗೆ ಆಯಾ ತಾಲೂಕಿನ ತಹಶೀಲ್ದಾರರು ಅಗತ್ಯ ಪಡಿತರ ವಿತರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 156 ಸಫಾಯಿ ಕರ್ಮಚಾರಿ ಕುಟುಂಬಗಳಿದ್ದು, ಅವರಲ್ಲಿ ಕೆಲವರಿಗೆ ಪಡಿತರ ಚೀಟಿ ಇದೆ. ಒಂದು ವೇಳೆ ಇಲ್ಲದವರಿಗೂ ಅಗತ್ಯ ಪಡಿತರ ನೀಡಬೇಕಲ್ಲದೆ, ಬೇಕರಿಗಳು ಕಾರ್ಯಾರಂಭವಾಗಿರುವ ಬಗ್ಗೆ ಖಚಿತಪಡಿಸಿ ಎಂದು ಸೂಚಿಸಿದರು.

ಬಳ್ಳಾರಿ ಜಿಲ್ಲೆ ಹೊಸಪೇಟೆಯ ಕೋವಿಡ್ 19  ಪಾಸಿಟಿವ್‌ ಬಂದಿರುವ ವ್ಯಕ್ತಿ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅವರ ತಪಾಸಣೆ ನಡೆಸಿದ ವೈದ್ಯರನ್ನು ಹೋಮ್‌ ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ. ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ದಾವಣಗೆರೆ ಮತ್ತು ಹರಿಹರ ಹೊರತುಪಡಿಸಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಕೋವಿಡ್ 19  ವೈರಸ್‌ ಸೋಂಕು ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನೂತನ್‌ ಕಾಲೇಜು ರಸ್ತೆಯ ಸವಿತಾ ಹೋಟೆಲ್‌, ವಿದ್ಯಾನಗರದ ಸಿಗಂಧೂರೇಶ್ವರಿ ಹೋಟೆಲ್‌, ಅಜ್ಜಿ ಹೋಟೆಲ್‌, ಆಂಜನೇಯ ಬಡಾವಣೆ ಬಿಐಇಟಿ ರಸ್ತೆಯ ಮಮತಾ ಹೋಟೆಲ್‌, ಹದಡಿ ರಸ್ತೆಯ ಶಿವಸಾಗರ್‌ ಹೋಟೆಲ್‌ಗ‌ಳನ್ನು ತೆರೆಯಲು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಸಿಇಒ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ, ಸ್ಮಾರ್ಟ್‌ಸಿಟಿ ಯೋಜನೆ ಲಿ. ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next