ಬೆಂಗಳೂರು: ಐಐಟಿಗಳು, ಏಮ್ಸ್‌ನಂಥ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನ್ನಡ ಅಭ್ಯರ್ಥಿಗಳ ಸಂಖ್ಯೆ ಅತ್ಯಂತ ವಿರಳ. ನೆರೆಯ ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಹೋಲಿಸಿದಲ್ಲಿ ನಾವು ತುಸು ಹಿಂದಿದ್ದೇವೆ.
ಹೀಗಾಗಿ, ಕನ್ನಡದ ವಿಜ್ಞಾನ ವಿದ್ಯಾರ್ಥಿಗಳು “ಗೆಟ್ ಮೈ ಕ್ಲಾಸ್’ನಂಥ ಆ್ಯಪ್ ಅನ್ನು ಸದುಪಯೋಗಪಡಿಸಿಕೊಂಡು, ಕನ್ನಡಿಗರು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಬೇಕು ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮುಖ್ಯಸ್ಥೆ, ಐಪಿಎಸ್ ಅಧಿಕಾರಿ ಡಿ. ರೂಪಾ ಮನವಿ ಮಾಡಿದರು. “ಉದಯವಾಣಿ’ ಕಚೇರಿಯಲ್ಲಿ ಗುರುವಾರ ಮಣಿಪಾಲ್ ಗ್ರೂಪ್‌ನ “ಗೆಟ್ ಮೈ ಕ್ಲಾಸ್’ ಅಪ್ಲಿಕೇಷನ್‌ನನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
“ಗೆಟ್ ಮೈ ಕ್ಲಾಸ್’ ಆ್ಯಪ್ ಅನ್ನು 11, 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಪರೀಕ್ಷೆ ಎದುರಿಸಲು ವಿನೂತನವಾಗಿ ಸಿದ್ಧಪಡಿಸಲಾಗಿದೆ.
ಅತಿ ಕಡಿಮೆ ಬೆಲೆ: ಮಾಸಿಕ ಕೇವಲ 199 ರೂ. ಗಳಿಗೆ ಇಂಥ ಅಮೂಲ್ಯ ಮಾಹಿತಿಯುಳ್ಳ ಆ್ಯಪ್ ಅನ್ನು ಕನ್ನಡಿಗರಿಗೆ ಪರಿಚಯಿಸುತ್ತಿರುವುದು ನನಗೆ ಖುಷಿ ತಂದಿದೆ. ಅತಿ ಕಡಿಮೆ ಬೆಲೆಯಲ್ಲಿ, ಸರಳವಾಗಿ ವಿಜ್ಞಾನವನ್ನು ಪ್ರಸ್ತುತಪಡಿಸಿರುವ “ಗೆಟ್ ಮೈ ಕ್ಲಾಸ್’ ಖಂಡಿತವಾಗಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದ ಪರಿಕರ ಹಾಗೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಅಂತರ ಸರಿದೂಗಿಸಿ, “ಗೆಟ್ ಮೈ ಕ್ಲಾಸ್’ ಆ್ಯಪ್ ಕರ್ನಾಟಕದ ಮೂಲೆ ಮೂಲೆಗೂ ತಲುಪುವಂತಾಗಬೇಕು ಎಂದು ಆಶಿಸಿದರು.
ಈಗಿನವರು ಅದೃಷ್ಟವಂತರು: “ಉದಯವಾಣಿ’ ಪತ್ರಿಕೆಯು ದಶಕಗಳಿಂದಲೂ ಶಿಕ್ಷಣ ಕ್ಷೇತ್ರದ ಕುರಿತು ಹೆಚ್ಚಿನ ಮುತುವರ್ಜಿ ವಹಿಸುತ್ತಲೇ ಬಂದಿದೆ. ನಾವು ಶಿಕ್ಷಣ ಪಡೆಯುವ ಕಾಲಘಟ್ಟದಲ್ಲಿ ಇಂಥ ಆ್ಯಪ್‌ಗ್ಳು ಇರಲಿಲ್ಲ. ಅದು ಸ್ಮಾರ್ಟ್‌ಫೋನ್ ಯುಗವೂ ಆಗಿರಲಿಲ್ಲ. ಆದರೆ, ಇಂದಿನ ಮಕ್ಕಳು ತುಂಬಾ ಅದೃಷ್ಟವಂತರು.
“ಗೆಟ್ ಮೈ ಕ್ಲಾಸ್‘ನಂಥ ಆ್ಯಪ್ ಗಳಿಂದ ಈಗಿನವರಿಗೆ ಯೋಗ್ಯ ಮಾರ್ಗದರ್ಶನ ನೀಡಲು ಸಾಧ್ಯ. “ಉದಯವಾಣಿ’ ಬಳಗದ ಈ ನೂತನ ಪ್ರಯತ್ನಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಮಣಿಪಾಲ್ ಗ್ರೂಪ್‌ನ ಗ್ರೂಪ್ ಸಿಎಚ್‌ಆರ್‌ಒ ಪ್ರಮೋದ್ ಫರ್ನಾಂಡಿಸ್, ಎಂಟಿಎಲ್ ಡಿಜಿಟಲ್ ಸಲೂ ಷನ್ಸ್‌ನ ಉಪಾಧ್ಯಕ್ಷ ಗುರುಪ್ರಸಾದ್ ಕಾಮತ್, “ಉದಯವಾಣಿ’ ಬೆಂಗಳೂರು ಆವೃತ್ತಿಯ ಹಂಗಾಮಿ ಸಂಪಾದಕ ಬಿ.ಕೆ. ಗಣೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಏನಿದು ಗೆಟ್ ಮೈ ಕ್ಲಾಸ್?
11, 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿಗಳಿಗೆ ರೂಪಿಸಲಾದ ಆ್ಯಪ್. ಸಿಇಟಿ, ನೀಟ್, ಜೆಇಇ
ಪರೀಕ್ಷಾ ತಯಾರಿಗೆ ಅಗತ್ಯ ಜ್ಞಾನ ಸರಕುಗಳಿವೆ.
ಎಲ್ಲಿ ಲಭ್ಯ?
ಗೂಗಲ್ ಪ್ಲೇಸ್ಟೋರ್‌ನಲ್ಲಿ GetMiClass ಡೌನ್‌ಲೋಡ್‌ಗೆ ಲಭ್ಯವಿದೆ.
ದರವೆಷ್ಟು?
ಮಾಸಿಕ ಕೇವಲ 199 ರೂ.
ಇದನ್ನೂ ಓದಿ:- ಆರೋಗ್ಯ ಶಿಬಿರದ ಲಾಭ ಪಡೆಯಿರಿ: ಡಾ|ಸಂಧ್ಯಾ