ಭಾಲ್ಕಿ: ಗ್ರಾಮೀಣ ಭಾಗದ ಗರ್ಭಿಣಿಯರು ಮಾತೃಪೂರ್ಣ ಯೋಜನೆಯ ಲಾಭ ಪಡೆಯಬೇಕು ಎಂದು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಅಟ್ಟರ್ಗಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಭಾಲ್ಕಿ ವತಿಯಿಂದ ಆಯೋಜಿಸಿದ್ದ ಮಾತೃಪೂರ್ಣ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಕೊರತೆ ಇರುವುದನ್ನು ಮನಗಂಡ ಕರ್ನಾಟಕ ಸರ್ಕಾರ ಗ್ರಾಮೀಣ ಗರ್ಭಿಣಿಯರಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಕೊಡುವ ನಿಟ್ಟಿನಲ್ಲಿ ಈ
ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಗ್ರಾಮೀಣ ಭಾಗದ ಪ್ರತಿ ಗರ್ಭಿಣಿ ಮಹಿಳೆಗೂ ಸರ್ಕಾರ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ 21 ರೂ. ಖರ್ಚು ಮಾಡುತ್ತಿದೆ.
ಹೀಗಾಗಿ ಗ್ರಾಮೀಣ ಭಾಗದ ಮಹಿಳೆಯರು ಇದರ ಪ್ರಯೋಜನ ಪಡೆದು ಸದೃಢವಾಗಿರಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ, ಜಿಪಂ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಡಾ| ಆರ್. ಸೆಲ್ವಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಐ.ಎಸ್. ಪಾಂಚಾಳ, ಜಿಪಂ ಅಧ್ಯಕ್ಷೆ ಭಾರತಬಾಯಿ ಮಲ್ಲಿನಾಥ, ಜಿಪಂ ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ತಾಪಂ ಅಧ್ಯಕ್ಷೆ ರೇಖಾ ವಿಲಾಸಪಾಟೀಲ, ಗ್ರಾಪಂ ಅಧ್ಯಕ್ಷೆ ಗಂಗೂಬಾಯಿ ದಿಗಂಬರ, ಪ್ರಭಾವತಿ ರಾಮ, ಜಿಪಂ ಸದಸ್ಯ ವಿದ್ಯಾಸಾಗರ ಸಿಂಧೆ, ಅಂಬಾದಾಸ ಕೋರೆ, ರೇಖಾಬಾಯಿ ನೀಲಕಂಠ, ಹಣಮಂತರಾವ್ ಚೌಹಾಣ, ಶಿವರಾಜ ಪಾಟೀಲ, ಶಶಿಧರ ಕೊಸಂಬೆ, ಮಕ್ಕಳ ರಕ್ಷಣಾ ಅಧಿಕಾರಿ ಪ್ರಶಾಂತ ಬಿರಾದಾರ, ಬಲಭೀಮ ಪವಾರ ಇದ್ದರು