ವೇಣೂರು: ವಿದ್ಯಾರ್ಥಿ ಜೀವನದ ಪರಿಪೂರ್ಣತೆಗೆ ಕ್ರೀಡೆಯೂ ಆವಶ್ಯಕ. ಪಠ್ಯ-ಪಠ್ಯೇತರ ಚಟುವಟಿಕೆಯಲ್ಲೂ ಸಾಧನೆಗೈಯಲು ವಿದ್ಯಾರ್ಥಿಗಳು ಮುಂದಾಗಬೇಕು. ಶಾಲಾ – ಕಾಲೇಜುಗಳೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸ. ಸಂಘದ ಅಧ್ಯಕ್ಷ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಂದರ ಹೆಗ್ಡೆ ಬಿಇ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸ.ಪ.ಪೂ. ಕಾಲೇಜು ವೇಣೂರು ಆಶ್ರಯದಲ್ಲಿ ಕಾಲೇಜು ಕ್ರೀಡಾಂಗಣದಲ್ಲಿ ಶುಕ್ರವಾರ ಜರಗಿದ ಪದವಿಪೂರ್ವ ವಿಭಾಗದ ಬೆಳ್ತಂಗಡಿ ತಾ| ಮಟ್ಟದ ಖೋ ಖೋ ಕ್ರೀಡಾಕೂಟದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವೇಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಗಂಗಾಧರ್ ಮಾತನಾಡಿ, ಕ್ರೀಡೆ ಸೋಲಲು ಕಲಿಸುತ್ತದೆ ಮತ್ತು ಸೋಲು ಜೀವನಕ್ಕೆ ಪಾಠ ಆಗಲಿದೆ. ಸೋಲು ಜೀವನದಲ್ಲಿ ಛಲವನ್ನು ಹೆಚ್ಚಿಸಿ ನಮ್ಮನ್ನು ಉತ್ತುಂಗಕ್ಕೇರಿಸಲು ಸಹಕಾರಿ ಆಗುತ್ತದೆ ಎಂದರು.
ವೇಣೂರು ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯ ವೆಂಕಟೇಶ್ ಎಸ್. ತುಳುಪುಳೆ, ಪ.ಪೂ. ಶಿಕ್ಷಣ ಇಲಾಖೆಯ ತಾ| ಕ್ರೀಡಾ ಸಂಯೋಜಕ ಡೆನ್ನಿಸ್ ಫೆರ್ನಾಂಡಿಸ್, ಪ್ರಾಯೋಜಕರಾದ ನಾಗಭೂಷಣ್, ಹೇಮಂತ್, ಉಪನ್ಯಾಸಕ ಸುಧಾಕರ ಪೂಜಾರಿ, ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ತಾರಾಮತಿ ಶೆಟ್ಟಿ ಸ್ವಾಗತಿಸಿ, ಸೆಲಿನಾ ಪಿ.ಜೆ. ನಿರೂಪಿಸಿ, ವಂದಿಸಿದರು. ವೇಣೂರು ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.
ಉತ್ತುಂಗಕ್ಕೇರಲು ಸಹಕಾರಿ
ಅಧ್ಯಕ್ಷತೆ ವಹಿಸಿದ್ದ ವೇಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಗಂಗಾಧರ್ ಮಾತನಾಡಿ, ಕ್ರೀಡೆ ಸೋಲಲು ಕಲಿಸುತ್ತದೆ ಮತ್ತು ಸೋಲು ಜೀವನಕ್ಕೆ ಪಾಠ ಆಗಲಿದೆ. ಸೋಲು ಜೀವನದಲ್ಲಿ ಛಲವನ್ನು ಹೆಚ್ಚಿಸಿ ನಮ್ಮನ್ನು ಉತ್ತುಂಗಕ್ಕೇರಿಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.