ತುಮಕೂರು: ಕೊರೊನಾ ಸಂಕಷ್ಟದಲ್ಲಿ ಹಲವಾರು ಸಮುದಾಯಗಳು ಸಂಕಷ್ಟದಲ್ಲಿವೆ. ತೀರಾ ಸಂಕಷ್ಟದಲ್ಲಿ ಇರುವ ಇತರೆ ಸಮುದಾಯಗಳ ವಿಶೇಷ ಪ್ಯಾಕೇಜ್‌ಗೆ ಸೇಪೆìಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಕೋವಿಡ್ 19 ಪರಿಣಾಮ ತೊಂದರೆಗೊಳಗಾದ ಸಂಘಟಿತ ವಲಯಗಳಿಗೆ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಘೋಷಣೆ ಮಾಡಿರುವ ಬಗ್ಗೆ ಅಭಿಪ್ರಾಯ ಪಡೆಯಲು ಬಿಜೆಪಿ ಜಿಲ್ಲಾಧ್ಯಕ್ಷರ ಜೊತೆ ವಿಡಿಯೋ ಸಂವಾದವನ್ನು ನಡೆಸಿದರು.
ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮುಖ್ಯಮಂತ್ರಿಗಳ ಜೊತೆ ಮಾತ ನಾಡಿ, ತಾವು ಘೋಷಿಸಿರುವ ಈ ವಿಶೇಷ ಪ್ಯಾಕೇಜ್ ನಿಂದ ಸಾವಿರಾರು ಬಡ ಕುಟುಂಬಗಳಿಗೆ ಪ್ರಯೋಜನ ವಾಗಲಿದ್ದು, ನೋಂದಣಿ ಮಾಡಿಕೊಳ್ಳದೇ ಜಾತಿ ಅಧಾರಿತ ಕಸುಬು ನಡೆಸುತ್ತಿರುವವರ ಹಿತ ಕಾಪಾಡಲು ಮನವಿ ಮಾಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳಲ್ಲಿ ಅರ್ಹರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಈಗ ನೀಡುತ್ತಿರುವ ಸಮುದಾಯಗಳ ಜೊತೆಗೆ ಇನ್ನೂ ಕುಲಕಸಬನ್ನೇ ನಂಬಿರುವ ಮತ್ತಷ್ಟು ಸಮುದಾಯಗಳಿಗೂ ಸಹ ವಿಶೇಷ ಪ್ಯಾಕೇಜ್‌ನಲ್ಲಿ ಅವಕಾಶ ನೀಡಬೇಕು, ಅಕ್ಕಸಾಲಿಗರು, ಹೋಟೇಲ್ ಕಾರ್ಮಿಕರು, ಚಿತ್ರಮಂದಿರ ಕಾರ್ಮಿಕರು ಹಾಗೂ ಛಾಯಗ್ರಾಹಕರನ್ನು ಸಹ ಸೇಪೆìಡೆ ಮಾಡಿಕೊಳ್ಳುವಂತೆ ಮನವಿಯನ್ನು ಮಾಡಿದರು.
ಮುಖ್ಯಮಂತ್ರಿಗಳು ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ರವರ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಮತ್ತಷ್ಟು ಕಾರ್ಮಿಕ ವಲಯಗಳಿಗೆ ಅನುಕೂಲ ಕಲ್ಪಿಸುವ ಮುನ್ಸೂಚನೆ ನೀಡಿದರು.