ಮಹಾನಗರ: ದ.ಕ.ಜಿಲ್ಲಾ ಗೃಹರಕ್ಷಕ ದಳದ 200 ಗೃಹರಕ್ಷಕರಿಗೆ ಚುನಾವಣೆ ಪೂರ್ವಸಿದ್ಧತಾ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮ ಗುರುವಾರ ಹಂಪನಕಟ್ಟೆಯ ಪೊಲೀಸ್ ತರಬೇತಿ ಮತ್ತು ಕವಾಯತು ಮೈದಾನದಲ್ಲಿ ನಡೆಯಿತು.
ಚುನಾವಣೆ ಸಂದರ್ಭದಲ್ಲಿ ಗೃಹರಕ್ಷ ಕರಿಗೆ ಮಾಡುವಿಕೆ, ಮಾಡದಿರುವಿಕೆ ಜವಾಬ್ದಾರಿಗಳು ಮತ್ತು ಅವರ ಕಾರ್ಯ ವ್ಯಾಪ್ತಿಗಳ ಬಗ್ಗೆ ಪರಿಪೂರ್ಣ ಮಾಹಿತಿ ನೀಡಲಾಯಿತು. ಮತ ಕೇಂದ್ರಗಳಲ್ಲಿ ಚುನಾವಣಾಧಿಕಾರಿಗಳು ಪೊಲೀಸ್ ಸಿಬಂದಿ ಮತ್ತು ಸಾರ್ವಜನಿಕರ ಜತೆ ಸಮನ್ವಯ ಸಾಧಿಸಿಕೊಂಡು ನ್ಯಾಯ ಯುತ, ಶಾಂತಿಯುತ ಮತದಾನ ನಡೆಯುವಂತೆ ಗೃಹರಕ್ಷಕರು ತಮ್ಮನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಪರಿಪೂರ್ಣ ವಾಗಿ ತೊಡಗಿಸಿಕೊಳ್ಳುವಂತೆ ಸಮಾದೇಷ್ಟ ರಾದ ಡಾ| ಮುರಲೀ ಮೋಹನ ಚೂಂತಾರು ಹೇಳಿದರು.
ಉಪಸಮಾದೇಷ್ಟರಾದ ರಮೇಶ್ ಗೃಹರಕ್ಷಕರ ಪಾತ್ರಗಳು ಮತ್ತು ಇತಿಮಿತಿಗಳ ಬಗ್ಗೆ ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕರಿಗಾಗಿಯೇ ಸಿದ್ಧಪಡಿಸಿದ ಚುನಾವಣೆ ಮಾಹಿತಿ ಕೈಪಿಡಿಯನ್ನು ಸಮಾದೇಷ್ಟರು ಬಿಡುಗಡೆ ಮಾಡಿದರು.
ದ.ಕ. ಜಿಲ್ಲೆಯಲ್ಲಿ ಸುಮಾರು 800 ಮಂದಿ ಈ ಬಾರಿ ಮೊದಲ ಹಂತದ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು 350 ಮಂದಿ ಪುರುಷ ಗೃಹರಕ್ಷಕರು ಕೇರಳದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಇವರೆಲ್ಲರಿಗೂಈ ಕೈಪಿಡಿಯನ್ನು ಉಚಿತವಾಗಿ ನೀಡಲಾ ಯಿತು. ಘಟಕಾಧಿಕಾರಿ ಮಾರ್ಕ್‌ಶೇರ್, ಹಿರಿಯ ಗೃಹರಕ್ಷಕರಾದ ರಮೇಶ್, ಸುರೇಶ್ ಶೇಟ್, ಸುನಿಲ್ ಕುಮಾರ್, ರಾಜಶ್ರೀ, ಅಬ್ದುಲ್ ರೌಪ್ ಮೊದಲಾದವರು ಉಪಸ್ಥಿತರಿದ್ದರು.