Advertisement

“ಕಾರ್ಯಕರ್ತರ ಅಭಿಪ್ರಾಯ ಪಡೆದು ಟಿಕೆಟ್‌ ನೀಡಿ’

11:52 AM Apr 17, 2018 | Team Udayavani |

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮತ್ತೂಮ್ಮೆ ಅವಲೋಕನ ಮಾಡಬೇಕು. ಎರಡು ದಿನಗಳ ಒಳಗಾಗಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಉದಯ ಕುಮಾರ್‌ ಶೆಟ್ಟಿ ಅವರಿಗೆ ನೀಡುವ ನಿರ್ಧಾರ ಕೈಗೊಳ್ಳಬೇಕು. ತಪ್ಪಿದಲ್ಲಿ ಕಾರ್ಯಕರ್ತರ ಮುಂದಿನ ನಡೆಗೆ ಡಾ| ಎಂ. ವೀರಪ್ಪ ಮೊಲಿ ಅವರೇ ನೇರ ಕಾರಣರಾಗುತ್ತಾರೆ ಎಂದು ಕಾಂಗ್ರೆಸ್‌ ಪ್ರಮುಖರಾದ ತಾರಾನಾಥ ಕೋಟ್ಯಾನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಕಾರ್ಯಕರ್ತರು ಉದಯ ಕುಮಾರ್‌ ಶೆಟ್ಟಿ ಅವರು ಅಭ್ಯರ್ಥಿ ಎಂದು ನಿರೀಕ್ಷಿಸಿದ್ದು, ಎಲ್ಲರಿಗೂ ನಿರಾಸೆಯಾಗಿದೆ. ಜಿಲ್ಲಾ ಉಪಾಧ್ಯಕ್ಷರಾದ ಅನಂತರ ಮುನಿಯಾಲ್‌ ಉದಯ ಕುಮಾರ್‌ ಶೆಟ್ಟಿ ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಿದ್ದರು. ನಿಷ್ಕ್ರಿಯ ಸ್ಥಿತಿಯಲ್ಲಿದ್ದ ಕಾಂಗ್ರೆಸನ್ನು ಬೆಳಸುವ ಕಾರ್ಯವನ್ನು ಅವರ ನೇತೃತ್ವದಲ್ಲಿ ಮಾಡಲಾಗಿದೆ ಎಂದರು.

ಈ ಬಾರಿಯ ಚುನಾವಣೆಗೆ ಮುನಿಯಾಲ್‌ ಅವರೇ ಅಭ್ಯರ್ಥಿ ಆಗಬೇಕು ಎಂದು ವೀಕ್ಷಕರಾಗಿ ಉಡುಪಿಗೆ ಬಂದಿದ್ದ ಉಗ್ರಪ್ಪ ಅವರಲ್ಲಿಯೂ ಮನವಿ ಮಾಡಿದ್ದೆವು. ಗೆಲ್ಲುವ ಅಭ್ಯರ್ಥಿ ಅವರೇ ಎಂದು ತಿಳಿಸಿದ್ದೆವು. ಆದರೆ ಕಾರ್ಯ
ಕರ್ತರ ಮನವಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ತನಗೆ ಟಿಕೆಟ್‌ ಬೇಡ ಎಂದಿರುವುದು ಎಲ್ಲರಿಗೂ ತಿಳಿದಿತ್ತು. ಅನಂತರ ವೀರಪ್ಪ ಮೊಲಿ ತನ್ನ ಮಗನಿಗೆ ಇಲ್ಲಿ ಅವಕಾಶ ಅಪೇಕ್ಷಿಸಿದ್ದರು. ಅವರ ಮಗ ಸ್ಪರ್ಧಿಸುವುದಿಲ್ಲ ಎಂದಾದ
ಮೇಲೆ ಉದಯ ಕುಮಾರ್‌ ಶೆಟ್ಟಿ ಮಾತ್ರ ಆಕಾಂಕ್ಷಿಯಾಗಿದ್ದರು. ಆದರೆ ಮೊಲಿ ಒತ್ತಡದ ಮೇರೆಗೆ ಭಂಡಾರಿ
ಸ್ಪರ್ಧಿಸುತ್ತಿದ್ದಾರೆ. ಒಂದು ವೇಳೆ ಅವರೇ ಅಭ್ಯರ್ಥಿಯಾದರೆ ಕಾರ್ಯಕರ್ತರು ಕೆಲಸ ಮಾಡುವುದಿಲ್ಲ. ಮೊಲಿ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಲು ಕಾರ್ಕಳದ ಕಾರ್ಯಕರ್ತರು ಕಾರಣ. ಆದರೆ ಅವರು ಉಂಡ ಮನೆಗೆ ದ್ರೋಹ ಬಗೆದಿದ್ದಾರೆ ಎಂದರು.

ಕಾಂಗ್ರೆಸ್‌ ಗೆಲುವು ಸಾಧಿಸದಿದ್ದರೆ ಕಾರ್ಯಕರ್ತರು, ಪದಾಧಿಕಾರಿಗಳು ವಿಪಕ್ಷಗಳ ದೌರ್ಜನ್ಯಕ್ಕೆ ಒಳಗಾಗುತ್ತೇವೆ. ಅದಕ್ಕೆ ಅವಕಾಶ ಕೊಡಬಾರದು. ಉದಯ ಕುಮಾರ್‌ ಶೆಟ್ಟಿ ಅವರನ್ನು ಗೆಲ್ಲಿಸಲು ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಬೇರೆ ಪಕ್ಷದಿಂದಲೂ ಕಾಂಗ್ರೆಸ್‌ಗೆ ಬರುವವರಿದ್ದಾರೆ. ಹೀಗಾಗಿ ಇಲ್ಲಿ ಆಂತರಿಕ ಚುನಾವಣೆ
ನಡೆಸಿಯಾದರೂ ಮುನಿಯಾಲ್‌ಗೆ ಟಿಕೆಟ್‌ ನೀಡಬೇಕು ಎಂದರು. ಗೋಷ್ಠಿಯಲ್ಲಿ ನೇಮಿರಾಜ್‌ ರೈ, ಸುಧಾಕರ ಶೆಟ್ಟಿ, ಶಬ್ಬೀರ್‌ ಮಿಯ್ನಾರು, ನವೀನ್‌ ಅಡ್ಯಂತಾಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next