Advertisement

ಖಾಸಗಿ ಬಸ್‌ ವೇಗಕ್ಕೆ ಬೀಳಲಿ ಕಡಿವಾಣ

05:32 PM Nov 08, 2019 | Suhan S |

ತುಮಕೂರು: ತುಮಕೂರು, ಪಾವಗಡ ರಸ್ತೆ ಪ್ರತಿನಿತ್ಯ ಅಪಘಾತದ ಸ್ಥಳವಾಗಿ ಮಾರ್ಪಟ್ಟಂತಿದೆ. ಹೊಸ ಕೆಶಿಪ್‌ ರಸ್ತೆ ಆಗಿರುವುದರಿಂದ ಚಾಲಕರು ವೇಗವಾಗಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ವೇಗಕ್ಕೆ ಕಡಿವಾಣ ಹಾಕಿ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

Advertisement

ತುಮಕೂರಿನಿಂದ ಮಧುಗಿರಿ ಮತ್ತು ಪಾವಗಡಕ್ಕೆ ಪ್ರತಿ ಐದು ನಿಮಿಷಕ್ಕೊಮ್ಮೆ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಒಂದು ಬಸ್‌ ನಿಲ್ದಾಣದಿಂದ, ಇನ್ನೊಂದು ನಿಲ್ದಾಣಕ್ಕೆ ನಿಗದಿಪಡಿಸಿದ ಅವಧಿಯೊಳಗೆ ತಲುಪಬೇಕು ಎನ್ನುವ ಕಾರಣಕ್ಕೆ ಚಾಲಕರು ವೇಗವಾಗಿ ಬಸ್‌ ಚಲಾಯಿಸುತ್ತಾರೆ. ಮಾರ್ಗಮಧ್ಯೆ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳುವ ವೇಳೆ ತಡವಾದರೆ, ಬಸ್‌ ನಿಲ್ದಾಣದಲ್ಲಿ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ನಿಯಮ ಉಲ್ಲಂಸಿ ವಾಹನ ಓಡಿಸುತ್ತಾರೆ.  ಈ ರೀತಿ ಚಾಲಕರು ವೇಗವಾಗಿ ಬಸ್‌ ಚಲಿಸುವಾಗ ಎದುರುಗಡೆ ಬರುವ ವಾಹನ, ಪ್ರಾಣಿ, ಪಾದಚಾರಿಗಳು ಬಂದಾಗ ಹಠಾತ್‌ ಬ್ರೇಕ್‌ ಹಾಕಿದಾಗ ಅಪಘಾತಗಳು ಸಂಭವಿಸುತ್ತವೆ.

ಅಪಘಾತ ಅಂಕಿ-ಅಂಶ: ತುಮಕೂರಿನಿಂದ ಮಧುಗಿರಿ ಮತ್ತು ಪಾವಗಡ ವ್ಯಾಪ್ತಿ ಯಲ್ಲಿ ಕಳೆದ ಮೂರು ವರ್ಷಗಳಿಂದ ಆಗಿರುವ ಅಪಘಾತ ಅಂಕಿ-ಅಂಶ ನೋಡಿದರೆ ಆತಂಕ ಮೂಡಿಸುವಂತಿದೆ. ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಅಪಘಾತದಲ್ಲಿ 39 ಸಾವು, 77 ಗಾಯ, 2018ರಲ್ಲಿ 45 ಸಾವು, 88 ಗಾಯ, 2019ರಲ್ಲಿ 28 ಸಾವು, 71 ಗಾಯ, ಕೊರಟಗೆರೆ 2017ರಲ್ಲಿ 13 ಸಾವು, 35 ಗಾಯ, 2018ರಲ್ಲಿ 15 ಸಾವು, 83 ಗಾಯ, 2019 11 ಸಾವು, 43 ಗಾಯ, ಮಧುಗಿರಿ 2017ರಲ್ಲಿ 15 ಸಾವು, 70 ಗಾಯ, 2018ರಲ್ಲಿ 22 ಸಾವು, 74 ಗಾಯ, 2019ರಲ್ಲಿ22 ಸಾವು, 57 ಗಾಯ, ಮಿಡಿಗೇಶಿ 2017ರಲ್ಲಿ 20 ಸಾವು, 16 ಗಾಯ, 2018ರಲ್ಲಿ 23 ಸಾವು, 31 ಗಾಯ, 2019 ರಲ್ಲಿ 21 ಸಾವು, 26 ಗಾಯ, ಪಾವಗಡ 2017 ರಲ್ಲಿ 8 ಸಾವು, 6 ಗಾಯ, 2018ರಲ್ಲಿ 16 ಸಾವು, 12 ಗಾಯ, 2019ರಲ್ಲಿ 14 ಸಾವು, 7 ಗಾಯ ಸಂಭವಿಸಿದೆ.ಜನ ಸಂಚಾರ ಪ್ರದೇಶ ಗಳಲ್ಲೂ ನಿಧಾನ ವಾಗಿ ಚಲಿಸದೆ ವೇಗವಾಗಿ ವಾಹನ ಓಡಿಸು ತ್ತಾರೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ನಿಯಂತ್ರಣ ಹಾಕಿ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಾಗರೀಕರು.

 

-ಚಿ.ನಿ. ಪುರುಷೋತ್ತಮ

Advertisement
Advertisement

Udayavani is now on Telegram. Click here to join our channel and stay updated with the latest news.

Next