Advertisement
ದೇವಾಲಯಕ್ಕೆ ಹೋದಾಗ ಪ್ರದಕ್ಷಿಣೆ ಹಾಕಿ ನಮಸ್ಕರಿಸುವುದು ಸಂಪ್ರದಾಯ. ಎಲ್ಲಾ ದೇವಾಲಯಗಳಲ್ಲಿಯೂ ಪ್ರದಕ್ಷಿಣಾಪಥ ಇದ್ದೇ ಇರುತ್ತದೆ. ದೇವರ ಬಲಭಾಗದಿಂದ ಮತ್ತು ನಮ್ಮ ಬಲಬದಿಯಿಂದ ದೇವಾಲಯದ ಗರ್ಭಗುಡಿಯ ಸುತ್ತ ಸುತ್ತುವುದು ಕ್ರಮ. ದೇವಾಲಯಗಳಲ್ಲಿ ಗರ್ಭಗುಡಿಗೆ ಸುತ್ತು ಬರುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅನಾದಿ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆದರೆ ಇದು ಒತ್ತಾಯ ಪೂರ್ವಕ ಸಂಪ್ರದಾಯವಲ್ಲ. ಜನರು ಸಮಯಾವಕಾಶವಿದ್ದಾಗ ಅಥವಾ ಮನಸ್ಸಿದ್ದಾಗ ಸುತ್ತು ಬಂದು ನಮಸ್ಕರಿಸುತ್ತಾರೆ. ಆದರೆ ಈ ಪ್ರದಕ್ಷಿ$ಣೆ ಆರಂಭ ಯಾಕಾಗಿರಬಹುದು ಮತ್ತು ಅದರಿಂದಾಗುವ ಪ್ರಯೋಜನವಾದರೂ ಏನು? ಎಂಬುದನ್ನು ಚಿಂತಿಸುತ್ತ ಹೋದರೆ ಸರಳ ಉತ್ತರ ಸಿಗುತ್ತದೆ.
Related Articles
Advertisement
ಏಕಾಗ್ರತೆ ಸಾಧನೆಗೆ ಸರಳ ಮಾರ್ಗ ಪ್ರದಕ್ಷಿಣೆ ಎಂಬುದಕ್ಕೆ ಕಲಾತ್ಮಕವಾಗಿ ಸುತ್ತು ಬರುವುದು ಎಂಬರ್ಥವಿದೆ. ಈ ಪ್ರದಕ್ಷಿ$ಣೆಯೂ ನಮ್ಮ ಮನಸ್ಸನ್ನು ಹಿಡಿದಿಡುವ ಸೂತ್ರವೇ. ದೇವಾಲಗಳಲ್ಲಿ¨ªಾಗ ನಮ್ಮ ಮನಸ್ಸು ಚಂಚಲವಾಗಿ ಹೊರಜಗತ್ತಿನತ್ತ ಅಂದರೆ ಅಲೌಕಿಕ ಸಂಗತಿಗಳ ಬಗ್ಗೆ ಗಮನ ಹರಿಸದೇ ದೇವರತ್ತ ಚಿತ್ತವಿರಿಸಿ, ಏಕಾಗ್ರತೆಯನ್ನು ಸಾಧಿಸಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಒಂದು ಉತ್ತಮ ಮಾರ್ಗವೂ ಹೌದು. ಪುರಾಣ ಕತೆಗಳನ್ನು ಓದುತ್ತ ತಿಳಿಯತ್ತ, ಶ್ಲೋಕಗಳನ್ನು ಪಠಿಸುತ್ತ ಆ ಮೂಲಕ ನಮ್ಮ ಚಿಂತನಾಕ್ರಮವನ್ನು ಧನಾತ್ಮಕವಾಗಿ ಬೆಳಸಿಕೊಳ್ಳಲು ಇದರಿಂದ ಸಹಾಯಕವಾಗಿದೆ. ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿಚ|
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ||
ಎಂಬ ಶ್ಲೋಕವನ್ನು ಸುತ್ತು ಬರುವಾಗ ಸಾಮಾನ್ಯವಾಗಿ ಪಠಿಸಲಾಗುತ್ತದೆ. ಈ ಸುತ್ತು ಬರುವುದು ಜಗತ್ತಿನ ನಿಯಮವೂ ಹೌದು. ಭೂಮಿ ತನ್ನನ್ನು ಸುತ್ತುತ್ತಾ ಸೂರ್ಯನನ್ನು ಸುತ್ತುತ್ತಿದೆ. ಜಗತ್ತಿನ ಆಗುಹೋಗುಗಳಿಗೆಲ್ಲ ಕಾರಣವೇ ಈ ಸುತ್ತುವಿಕೆ. ಅಂದರೆ ಜನಜೀವನದ ಮೂಲತಣ್ತೀ ನಿಂತಲ್ಲಿ ನಿಲ್ಲದೆ ಸುತ್ತುತ್ತಲೇ ಇ¨ªಾಗ ಮಾತ್ರ ಜೀವನ ಮುನ್ನಡೆಯುತ್ತದೆಂಬ ಸೂಚಕವೂ ಇದಾಗಿದೆ.
ಪ್ರದಕ್ಷಿಣೆಯ ಅರಿಕೆ: ದೇವರನ್ನು ಸುತ್ತುತ್ತಾ ತನ್ನಲ್ಲಿರುವ ತಪ್ಪುನಡೆಗಳನ್ನು ತೊಡೆದು ಹಾಕಲು ತೆರೆದುಕೊಳ್ಳುವ ಅವಕಾಶವೇ ಈ ಪ್ರದಕ್ಷಿಣೆ. ವಿಷ್ಣು ಭಟ್ಟ ಹೊಸ್ಮನೆ