Advertisement

ಪ್ರಾಥಮಿಕ ಆರೋಗ್ಯ ಕೇಂದ್ರ ದತ್ತು ಪಡೆಯಿರಿ

01:15 PM Jun 29, 2021 | Team Udayavani |

ಕೋಲಾರ: ಜಿಲ್ಲೆಯ ಯಾವುದಾದರೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದತ್ತು ಪಡೆದುಕೊಂಡು ಮಾದರಿ ಆಗಿ ರೂಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಹೇಳಿದರು.

Advertisement

ನಗರದಜಿಲ್ಲಾಆರೋಗ್ಯಇಲಾಖೆಸಭಾಂಗಣದಲ್ಲಿ ಸೋಮವಾರ ಕೋಲಾರ ರೋಟರಿ ಸಂಸ್ಥೆಯಿಂದ ನೀಡಲ್ಪಟ್ಟ 15 ಲಕ್ಷ ರೂ. ಮೌಲ್ಯದ 12 ಆಮ್ಲಜನಕ ಸಾಂದ್ರಕ ಸೇರಿ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣದಲ್ಲಿ ರೋಟರಿ ಸೇರಿ ಇನ್ನಿತರ ಸಂಘ ಸಂಸ್ಥೆಗಳು, ದಾನಿಗಳು ಜಿಲ್ಲಾಡಳಿತದೊಂದಿಗೆಕೈಜೋಡಿಸುತ್ತಿರುವುದು ಉತ್ತಮಕಾರ್ಯವಾಗಿದೆ ಎಂದು ಶ್ಲಾ ಸಿದ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆಯಾದ್ಯಂತ ಕೋವಿಡ್‌ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದುಕೋರಿದರು.

ಸಹಕಾರ ಅತ್ಯಗತ್ಯ: ಕೋಲಾರ ಜಿಲ್ಲೆಯಲ್ಲಿ 12.50 ಲಕ್ಷ ರೂ. ಜನರಿಗೆ ಕೋವಿಡ್‌ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 5.50 ಲಕ್ಷ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಜಿಲ್ಲಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವಂತಾಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಯೋಜನೆ ಮಾರ್ಪಾಡು: ಅಂತಾರಾಷ್ಟ್ರೀಯ ರೋಟರಿ ಯೋಜನಾ ಸಂಯೋಜಕ ಟಿ.ಎಸ್‌.ರಾಮ ಚಂದ್ರಗೌಡ ಮಾತನಾಡಿ, ಜಿಲ್ಲಾದ್ಯಂತ 200ಕ್ಕೂ ಹೆಚ್ಚು ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ ವಿತರಿಸುವ ಗುರಿ ಹೊಂದಲಾಗಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ, ಆದ್ದರಿಂದ ಈ ಯೋಜನೆ ಮಾರ್ಪಡಿಸಿ ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಅಗತ್ಯ ವಿರುವ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.

Advertisement

ರೋಟರಿ ಅಧ್ಯಕ್ಷ ಸೋಮಶೇಖರ್‌ ಮಾತನಾಡಿ, 15ಲಕ್ಷರೂ.ಮೌಲ್ಯದ12ಆಮ್ಲಜನಕಸಾಂದ್ರಕಗಳು, 500 ಪಿಪಿಇ ಕಿಟ್‌ಗಳು, 2 ಸಾವಿರ ಒಮ್ಮೆ ಬಳಕೆಯ ಬೆಡ್‌ ಶೀಟ್‌ಗಳು, 500 ಲೀಟರ್‌ ಸ್ಯಾನಿಟೈಜರ್‌ ಗಳನ್ನು ವಿತರಿಸಲಾಗುತ್ತಿದೆಯೆಂದು ವಿವರಿಸಿದರು.

ಕಿಟ್‌ಗಳ ವಿತರಣೆ: ಮುಂದಿನ ದಿನಗಳಲ್ಲಿ ಕೋಲಾರ ರೋಟರಿ ಸಂಸ್ಥೆಯಿಂದ ಕೊರೊನಾ ಫ್ರಂಟ್‌ ಲೈನ್‌ವಾರಿಯರ್ಸ್‌ಗಳಿಗೆ ದಿನಸಿ ಕಿಟ್‌ಗಳು, ಅಗತ್ಯವಿರು ವರಿಗೆ ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್‌ ಮಾತನಾಡಿ, ರೋಟರಿ ಸಂಸ್ಥೆಯು ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ವಿತರಿಸುತ್ತಿರುವುದು ಪ್ರಯೋಜನಕಾರಿಯಾಗಿದೆ ಎಂದರು.

ನಿಯೋಜಿತ ಅಧ್ಯಕ್ಷ ರಾಮನಾಥ್‌, ರೋಟರಿ ಪದಾಧಿಕಾರಿಗಳಾದ ದೇವರಾಜ್‌, ವೆಂಕಟರವಣಪ್ಪ,ರಾಘವೇಂದ್ರ ಬಾಲಾಜಿ, ನಾಗಶೇಖರ್‌, ಶಿವಕುಮಾರ್‌, ಸಿ.ಆರ್‌.ಅಶೋಕ್‌, ಜನಾರ್ಧನ್‌, ಎನ್‌.ನಾಗರಾಜು, ರೋಟ್ರಾಕ್ಟ್ ರಾಹುಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next