Advertisement

ಎಲ್ಲಾ ವಾರ್ಡ್‌ಗಳಲ್ಲೂ ಕೈ ಅಭ್ಯರ್ಥಿ ಗೆಲ್ಲಿಸಿ

02:12 PM May 25, 2019 | Suhan S |

ಹನೂರು: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಜನತೆ ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ 13 ವಾರ್ಡುಗಳ ಪೈಕಿ 13ರಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ನರೇಂದ್ರ ರಾಜುಗೌಡ ಮನವಿ ಮಾಡಿದರು.

Advertisement

ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ 3ನೇ ವಾರ್ಡಿನಲ್ಲಿ ಮನೆ ಮನೆಗೂ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಹರೀಶ್‌ಕುಮಾರ್‌ ಪರ ಮತಯಾಚನೆ ಮಾಡಿದ ಶಾಸಕ ನರೇಂದ್ರ, ಹಿಂದಿನ 5 ವರ್ಷದ ಅವಧಿಯಲ್ಲಿ ಪಟ್ಟಣ ವ್ಯಾಪ್ತಿಯ ಜನತೆಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಗಳನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸಮರ್ಪಕವಾಗಿ ಕಲ್ಪಿಸಲಾಗಿದೆ ಎಂದರು.

ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ: ಅಲ್ಲದೆ ಪಟ್ಟಣದ ಹೊರವಲಯದ ಹುಲುಸುಗುಡ್ಡೆ ಸಮೀಪ ಏಕಲವ್ಯ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಪ್ರಾರಂಭ ಸೇರಿದಂತೆ ಶಿಕ್ಷಣ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪಟ್ಟಣವನ್ನು ನೂತನ ತಾಲೂಕು ಕೇಂದ್ರವಾಗಿ ಘೋಷಣೆ ಮಾಡಿಸಲಾಗಿದೆ. 1.8 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನ ರಾಂ ಸಮುದಾಯ ಭವನ, 60 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್‌ ಸಮುದಾಯ ಭವನದ ಮೇಲಂತಸ್ತು ನಿರ್ಮಾಣ, 2 ಕೋಟಿ ವೆಚ್ಚದಲ್ಲಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.

9 ಕೋಟಿ ರೂ. ವೆಚ್ಚದಲ್ಲಿ ಹುಬ್ಬೇಹುಣಸೇ ಜಲಾಶಯ ಅಭಿವೃದ್ಧಿಪಡಿಸಲಾಗಿದ್ದು, ಕಾವೇರಿ ನದಿಮೂಲದಿಂದ ಹುಬ್ಬೇಹುಣಸೇ ಮತ್ತು ರಾಮನಗುಡ್ಡ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆಗೂ ಮಂಜೂರಾಥಿ ದೊರಕಿಸಿಕೊಟ್ಟು ಟೆಂಡರ್‌ ಹಂತದಲ್ಲಿದೆ ಎಂದರು.

ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ:ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಬೇಕಾಗಿರು ವುದರಿಂದ ಪಟ್ಟಣದ ಜನತೆ ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಕೈ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡ ಬೇಕು ಎಂದು ಮನವಿ ಮಾಡಿದರು.

Advertisement

14 ಸಾವಿರಕ್ಕೂ ಹೆಚ್ಚು ಅಧಿಕ ಮತ ನೀಡಿದ್ದಕ್ಕೆ ಕೃತಜ್ಞತೆ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹನೂರು ಕ್ಷೇತ್ರ ದಿಂದ ಮೈತ್ರಿ ಪಕ್ಷದ ಅಭ್ಯರ್ಥಿ ಧ್ರುವನಾರಾಯಣ್‌ ಪರ ಅತಿ ಹೆಚ್ಚಿನ ಮತಗಳು ಚಲಾವಣೆಯಾಗಿದ್ದು 8 ಕ್ಷೇತ್ರಗಳ ಪೈಕಿ ಅಧಿಕ ಲೀಡ್‌ ತಂದುಕೊಟ್ಟ ಕ್ಷೇತ್ರವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಲು ಕಾರಣಕರ್ತರಾದ ಮತದಾರರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಕಡಿಮೆ ಅಂತರದಲ್ಲಿ ಗೆದ್ದು ಹೆಚ್ಚು ಲೀಡ್‌ ಕೊಟ್ಟಿದ್ದೇನೆ: 2018ರ ವಿಧಾನಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ವಿಜಯಶಾಲಿ ಯಾಗಿರುವ ಕ್ಷೇತ್ರಗಳ ಪೈಕಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಕಡಿಮೆ ಮತ ಚಲಾವಣೆಯಾಗಿದೆ. ಆದರೆ ಹನೂರು ಕ್ಷೇತ್ರದಲ್ಲಿ ಕೇವಲ 2,500 ಮತಗಳ ಅಂತದಿಂದ ವಿಧಾನಸಭಾ ಚುನಾವಣೆ ಗೆದ್ದು ಲೋಕಸಭಾ ಚುನಾವಣೆಯಲ್ಲಿ 14 ಸಾವಿರಕ್ಕೂ ಹೆಚ್ಚು ಲೀಡ್‌ ಕೊಟ್ಟ ಏಕೈಕ ಕ್ಷೇತ್ರ ಹನೂರು ಕ್ಷೇತ್ರವಾಗಿದೆ ಎಂದು ಪ್ರಶಂಸಿದರು.

ಅಭ್ಯರ್ಥಿಗಳಾದ ಬಸವರಾಜು, ಸುದೇಶ್‌, ಹರೀಶ್‌, ಸಂಪತ್‌, ಮಾದೇಶ್‌, ಬ್ಲಾಕ್‌ ಕಾಂ ಗ್ರೆಸ್‌ ಅಧ್ಯಕ್ಷ ಕೆಂಪಯ್ಯ, ಮುಖಂಡರಾದ ವೆಂಕ ಟರಮಣ ನಾಯ್ಡು, ಮಹೇಶ್‌, ರವಿ, ಸತೀಶ್‌, ನಟರಾಜು, ಪಿಯ್ಯಪ್ಪ, ಸೋಮಣ್ಣ, ಕೇಶವ, ರವೀಂದ್ರನಾಯ್ಡು, ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next