Advertisement

Germany; ಇರಾನ್‌ ವಿಮಾನಕ್ಕೆ ಬೆದರಿಕೆ: ಹ್ಯಾಂಬರ್ಗ್ ನಿಲ್ದಾಣದಿಂದ ಸಂಚಾರ ಸ್ಥಗಿತ

06:32 PM Oct 09, 2023 | Vishnudas Patil |

ಹ್ಯಾಂಬರ್ಗ್ : ಇರಾನ್‌ ವಿಮಾನಕ್ಕೆ ಇಮೇಲ್ ಮೂಲಕ  ದಾಳಿಯ ಬೆದರಿಕೆ ಬಂದ ಬೆನ್ನಲ್ಲೇ ಜರ್ಮನಿಯ  ಹ್ಯಾಂಬರ್ಗ್ ವಿಮಾನ ನಿಲ್ದಾಣ ಸೋಮವಾರ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಪೊಲೀಸರು ಉತ್ತರ ನಗರಕ್ಕೆ ಟೆಹ್ರಾನ್‌ನಿಂದ ಬಂದಿಳಿದ ವಿಮಾನವನ್ನು ಶೋಧಿಸಿದ್ದಾರೆ ಎಂದು ಫೆಡರಲ್ ಪೊಲೀಸ್ ವಕ್ತಾರರು ರಾಯಿಟರ್ಸ್ ಗೆ ತಿಳಿಸಿದ್ದಾರೆ.

Advertisement

ಪೊಲೀಸ್ ಕ್ರಮಗಳಿಂದಾಗಿ ಯಾವುದೇ ವಿಮಾನಗಳ ಟೇಕ್-ಆಫ್ ಅಥವಾ ಲ್ಯಾಂಡಿಂಗ್‌ಗಳು ನಡೆಯುತ್ತಿಲ್ಲ ಎಂದು ವಿಮಾನ ನಿಲ್ದಾಣವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಜರ್ಮನ್ ಪ್ರೆಸ್ ಏಜೆನ್ಸಿಯು ಬೆದರಿಕೆಗೆ ಪೊಲೀಸ್ ಪ್ರತಿಕ್ರಿಯೆಯ ಬಗ್ಗೆ ಮೊದಲು ವರದಿ ಮಾಡಿದೆ.

ಹ್ಯಾಂಬರ್ಗ್‌ನಲ್ಲಿ ಜರ್ಮನ್ ಮತ್ತು ಫ್ರೆಂಚ್ ಸರಕಾರಗಳ ವಿಶೇಷ ಸಭೆಯ ಮೊದಲ ದಿನದಂದು ಘಟನೆ ನಡೆದಿದೆ. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಬ್ಬರೂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next