Advertisement

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

01:21 PM Apr 09, 2020 | mahesh |

ಲಂಡನ್‌: ಇಡೀ ವಿಶ್ವವೇ ಕೋವಿಡ್‌-19 ಸೋಂಕು ನಿಯಂತ್ರಣ ಚಿಂತೆಯಲ್ಲಿ ಮುಳುಗಿದೆ. ಆದರೆ ಈಗಾಗಲೇ 1 ಲಕ್ಷದಷ್ಟು ಸೋಂಕಿತರನ್ನು ತೆಕ್ಕೆಯಲ್ಲಿಟ್ಟುಕೊಂಡಿರುವ ಜರ್ಮನಿ ಮಾತ್ರ ಸ್ಥಗಿತಗೊಂಡಿರುವ ತನ್ನ ಆರ್ಥಿಕತೆ ಹೇಗೆ ಪುನರಾಂಭಿಸುವುದೆಂಬುದರ ಚಿಂತನೆಯಲ್ಲಿದೆ.

Advertisement

ಯುರೋಪಿಯನ್‌ ಸರಕಾರಗಳು ಮಾತ್ರ ಕಾರ್ಖಾನೆಗಳನ್ನು, ಕಚೇರಿಗಳನ್ನು ಹಾಗೂ ಶಾಲೆಗಳನ್ನು ಹೇಗೆ ಪುನಃ ತೆರೆಯುವುದು ಎಂಬುದರ ಕುರಿತು ಯೋಜನೆ ರೂಪಿಸುತ್ತಿವೆ. ಈಸ್ಟರ್‌ನಂತರ ಕ್ರಮೇಣ ಅಂಗಡಿ-ಮುಗ್ಗಟ್ಟುಗಳನ್ನು ಮತ್ತೆ ತೆರೆಯಲು ಆಸ್ಟ್ರಿಯಾ ಆದೇಶ ಹೊರಡಿಸಲು ಸಜ್ಜಾಗಿದೆ. ಆ ಮೂಲಕ ವ್ಯಾಪಾರ-ವಹಿವಾಟನ್ನು ಆರಂಭಿಸುತ್ತಿರುವ ಯುರೋಪಿನ ಮೊದಲ ದೇಶವಾಗಲಿದೆ. ಬಹುಶಃ ಆಮೇಲೆ ಉಳಿದ ಕೆಲ ರಾಷ್ಟ್ರಗಳೂ ಇದನ್ನೇ ಪಾಲಿಸಬಹುದು.

ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆರ್ಥಿಕ ವೆಚ್ಚಗಳನ್ನು ನಿಯಂತ್ರಿಸುವ ಜತೆಗೆ, ಮಿತವ್ಯಯಕ್ಕೂ ಆದಾಯವನ್ನು ಹುಡುಕುವ ಕೆಲಸವೂ ಆಗಬೇಕಿದೆ. ವಿವಿಧ ಯೋಜನೆಗಳಿಗೆ ಹಣವನ್ನು ಕ್ರೋಢೀಕರಿಸುವ ಒತ್ತಡವೂ ಇದೆ. ಒಂದುವೇಳೆ ದೇಶದೆಲ್ಲೆಡೆ ಜಾರಿಯಲ್ಲಿರುವ ನಿರ್ಬಂಧಗಳು ಹೆಚ್ಚು ಸಮಯದವರೆಗೆ ಚಾಲ್ತಿಯಲ್ಲಿದ್ದರೆ ಆಹಾರ ಸರಬರಾಜು ಮತ್ತು ಆರೋಗ್ಯ ರಕ್ಷಣೆ ವ್ಯವಸ್ಥೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಭಯ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

750 ಬಿಲಿಯನ್‌ ಆರ್ಥಿಕ ಪರಿಹಾರ ನಿಧಿ
ಜರ್ಮನ್‌ ಸರಕಾರವು ಈಗಾಗಲೇ 750 ಬಿಲಿಯನ್‌ (25 825 ಬಿಲಿಯನ್‌) ಮೌಲ್ಯದ ಆರ್ಥಿಕ ಪರಿಹಾರ ನಿಧಿಯನ್ನು ಘೋಷಿಸಿದೆ. ಇದು ದೇಶದ ವ್ಯವಹಾರ ಚಟುವಟಿ ಕ ೆಗಳಿಗೆ ಸಾಲವನ್ನು ನೀಡುವುದರೊಂದಿಗೆ, ಶೇರು ಮಾರಾಟ ಮತ್ತು ಖರೀದಿಸುವಿಕೆ ಮತ್ತು ದಿನಗೂಲಿ ಕಾರ್ಮಿಕರ ಆದಾಯ ಮಟ್ಟವನ್ನು ಬೆಂಬಲಿಸುವಂತಹ ಯೋಜನೆಗಳನ್ನು ಪ್ರೋತ್ಸಾಹಿಸಲಿದೆ. ಸದ್ಯ ವಿಶ್ವದಲ್ಲಿಯೇ ಅತೀ ದೊಡ್ಡ ಮೊತ್ತದ ಪರಿಹಾರ ನಿಧಿ ಇದಾಗಿದೆ.

ಆರೋಗ್ಯ ರಕ್ಷಣಾ ಉತ್ಪನ್ನಗಳ ಘಟಕ ತೆರವು
ಆರೋಗ್ಯ ರಕ್ಷಣಾ ಉತ್ಪನ್ನಗಳ ತಯಾರಿಕೆ ಘಟಕಗಳನ್ನು ಮತ್ತು ಕಂಪನಿಗಳನ್ನೂ ಶೀಘ್ರವೆ ಪುನಃ ತೆರೆಯಬೇಕೆಂದು ಸರಕಾರ ನಿರ್ಧರಿಸಿದೆ. ಸಾಮಾಜಿಕ ಅಂತರವನ್ನು ಪಾಲಿ ಸುವ ಅನಿ ವಾರ್ಯತೆ ಇರುವ ಕಾರಣ ಹೋಟೆಲ್‌ಗ‌ಳು ಮತ್ತು ರೆಸ್ಟೋ ರೆಂಟ್‌ಗಳನ್ನು ಅತ್ಯಗತ್ಯ ಎಚ್ಚರಿಕೆಯಿಂದ ಮತ್ತು ನಿಯಂತ್ರಿತ ರೀತಿಯಲ್ಲಿ ಕಾರ್ಯಾಚರಿಸಲು ಅನು ಮತಿ ನೀಡ ಲಾಗಿದೆ. ಉಳಿದಂತೆ ಪಬ್‌-ಕ್ಲಬ್‌ಗಳನ್ನು, ಚಿತ್ರ ಮಂದಿ ರಗಳನ್ನು ಹಾಗೂ ಮಾಲ್‌ಗ‌ಳನ್ನು ಸದ್ಯಕ್ಕೆ ಮುಚ್ಚಿರ ಬೇಕು ಎಂದು ವರದಿ ಹೇಳಿದೆ.

Advertisement

ಚೀನ ನೋಡಿ ಕಲಿಯುತ್ತೇವೆ
ಕೋವಿಡ್‌-19ನ ತವರಾದ ಚೀನ 3 ತಿಂಗಳ ನಂತರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಿಟ್ಟಿನಲ್ಲಿ ಚೀನ ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಪಾಲಿಸಿದ ಆಕ್ರಮಣಕಾರಿ ಯೋಜನೆಯನ್ನು ಅನುಕರಿಸಲಿದ್ದು, ಜನ ಜೀವನವನ್ನು ಸಹಜ ಸ್ಥಿತಿಗೆ ತರಲು ಪ್ರೇರೇಪಿಸುವಂಥ ಉತ್ತೇಜನಕಾರಿ ಉಪಕ್ರಮಗಳನ್ನು ಕೈಗೊಳ್ಳಲು ಜರ್ಮನಿ ನಿರ್ಧರಿಸಿದೆ. ಅಷ್ಟೇ ಅಲ್ಲದೇ ದೇಶದ ಕಂಪೆನಿಗಳು ವಿಫಲಗೊಳ್ಳದಂತೆ ಸಾಧ್ಯ ವಾದಷ್ಟು ಅನೇಕ ಪೂರಕ ಪ್ರೋತ್ಸಾಹ ಕ್ರಮಗಳನ್ನು ಜಾರಿಗೊ ಳಿಸುತ್ತಿದೆ. ಈ ಸಂಬಂಧ ಅಭಿಯಾನ ಆರಂಭಿಸುತ್ತಿದೆ.

ಬೀಜಿಂಗ್‌ ವೈದ್ಯಕೀಯ ಸರಬರಾಜು ಮತ್ತು ಚಿಕಿತ್ಸೆಗಾಗಿ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಜತೆಗೆ ಉದ್ಯೋಗ ಸೃಷ್ಟಿಸಲು, ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿದೆ. ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ನಮ್ಮಲ್ಲೂ ಆದೇ ಮಾದರಿಯ ಕ್ರಮಗಳನ್ನು ಜಾರಿ ಮಾಡಲಿದ್ದು, ಆರ್ಥಿಕತೆಯ ಸುಧಾರಣೆಗಾಗಿ ಚೀನವನ್ನು ನೋಡಿ ಕಲಿಯುತ್ತೇವೆ ಎಂದಿದೆ ಜರ್ಮನಿ.

ಪ್ರಜೆಗಳ ಆತಂಕವನ್ನು ದೂರ ಮಾಡಲು ಸರಕಾರ ತನ್ನ ಯೋಜನೆಗಳನ್ನು ಹಂಚಿಕೊಂಡಲ್ಲಿ ಅನುಕೂಲವಾಗಲಿದೆ. ಭವಿಷ್ಯದ ಕುರಿತು ಮತ್ತು ಆರ್ಥಿಕ ಪರಿಸ್ಥಿತಿ ಕುರಿತು ಆಶಾ ಭಾವನೆ ಮೂಡಲಿದೆ. ಆ ಸಂದರ್ಭದಲ್ಲಿ ಲಾಕ್‌ ಡೌನ್‌ಗಳು ವಾರ, ತಿಂಗಳುಗಳು ಮುಂದುವರೆದರೂ, ಸರಕಾರ ಹಂಚಿಕೊಂಡಿರುವ ಮಾಹಿತಿ ಮತ್ತು ಪೂರಕ ಯೋಜನೆಗಳ ವಿವರಗಳು ಜನರಲ್ಲಿ ವಿಶ್ವಾಸ ಮೂಡಿಸಬಹುದು ಎಂಬುದು ಪರಿಣಿತರ ಅಭಿಪ್ರಾಯ.

ಕಾರಣವೇನು ?
ಮುಂದಿನ ದಿನಗಳಲ್ಲಿ ಸಂಭವಿಸಲಿರುವ ಆರ್ಥಿಕ ಹಿಂಜರಿತವನ್ನು ಸ್ವಲ್ಪವಾದರೂ ತಡೆಯುವ ದೃಷ್ಟಿಯಿಂದ ಆರ್ಥಿಕತೆಯ ಪುನರಾರಂಭಕ್ಕೆ ಅಣಿಯಾಗಲೇ ಬೇಕಾದ ಸ್ಥಿತಿ ಈಗ ಎಲ್ಲ ರಾಷ್ಟ್ರಗಳ ಮುಂದಿದೆ. ಕೋವಿಡ್‌-19 ಸೋಂಕಿನಿಂದ ಈಗಾಗಲೇ ದೇಶಗಳಿಗೆ ಸಾಕಷ್ಟು ನಷ್ಟವಾಗಿದೆ. ಇನ್ನೂ ಹೀಗೆಯೇ ಮುಂದುವರಿದರೆ ದೇಶಗಳು ಪಾಪರ್‌ ಆಗುವ ಸ್ಥಿತಿಯೂ ಕೆಲವೆಡೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next