Advertisement

ವಿಮಾನ ರಕ್ಷಣೆಗೆ ಬಂದ ಜರ್ಮನಿ ಫೈಟರ್‌ ಜೆಟ್‌

03:45 AM Feb 20, 2017 | |

ನವದೆಹಲಿ: ಜರ್ಮನಿ ವಾಯು ಪ್ರದೇಶದಲ್ಲಿ ಹಾರಾಡುತ್ತಿದ್ದ ಜೆಟ್‌ಏರ್‌ವೆàಸ್‌ಗೆ ಸೇರಿದ ವಿಮಾನವೊಂದು ಸಂಪರ್ಕ ಕಳೆದುಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಅದು ಮುಂಬೈನಿಂದ ಲಂಡನ್‌ಗೆ ಹೋಗುತ್ತಿತ್ತು. ಜರ್ಮನಿ ಭದ್ರತಾ ಪಡೆಗಳು ಅದೊಂದು ವಿಮಾನ ಅಪಹರಣ ಯತ್ನ ಎಂದು ಭಾವಿಸಿ ಅಲ್ಲಿನ 2 ಫೈಟರ್‌ ಜೆಟ್‌ಗಳು ಆಗಸಕ್ಕೆ ಹಾರಿ ಬಂದವು.

Advertisement

ಈ ವೇಳೆಗೆ ವಿಮಾನ ಜರ್ಮನ್‌ನ ಕಲೋನ್‌ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಸಂಪರ್ಕ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಿಕೊಂಡಿತು. ಇದಾದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಕೆಲ ಕಾಲ 330 ಮಂದಿ ಪ್ರಯಾಣಿಕರು ಮತ್ತು 15 ಮಂದಿ ಸಿಬ್ಬಂದಿ ಭೀತಿ ಪಡುವಂತಾಯಿತು ಎಂದು ಮೂಲಗಳು ತಿಳಿಸಿವೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಭಾನುವಾರವಷ್ಟೇ ಅದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಿಮಾನ ಯಾನ ಸಂಸ್ಥೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ನೀಡಿದೆ. ಅದನ್ನು ಆಧರಿಸಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next