ಮಣಿಪಾಲ: ಜರ್ಮನಿಯಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಅನ್ನು ತೆರವುಗೊಳಿಸಲು ಫೆಡರಲ್ ಸರಕಾರ ಮತ್ತು 16 ರಾಜ್ಯಗಳು ಒಪ್ಪಿಕೊಂಡಿವೆ. ಅವುಗಳ ಅಡಿಯಲ್ಲಿ ಕೆಲವು ಕ್ರೀಡೆಗಳು ಪುನರಾರಂಭಗೊಳ್ಳಬಹುದು, ಶಾಲೆಗಳು ಕ್ರಮೇಣ ತೆರೆದುಕೊಳ್ಳಿವೆ. ಇನ್ನುಳಿದಂತೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಜಿಮ್‌ಗಳನ್ನು ತೆರೆಯುವುದು ಆಯಾ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ.
ಕೋವಿಡ್ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ಜರ್ಮನಿ ಮಾರ್ಚ್ ತಿಂಗಳಿನಲ್ಲಿ ಲಾಕ್‌ಡೌನ್‌ಗೆ ಹೋಗಿತ್ತು. ಇತ್ತೀಚಿನ ದಿನಗಳಲ್ಲಿ ಇವುಗಳ ಪ್ರಮಾಣ ಕುಸಿಯುತ್ತಿದೆ. ಈ ಕಾರಣಕ್ಕೆ ನಿರ್ಬಂಧಗಳನ್ನು ಸಡಿಲಿಸುವಂತೆ ಪ್ರಾದೇಶಿಕ ಸರಕಾರಗಳು ಮತ್ತು ವ್ಯಾಪಾರಿಗಳ ಒಕ್ಕೂಟಗಳು ಫೆಡಲರ್ ಸರಕಾರದ ಮೇಲೆ ಒತ್ತಡ ಹೇರಿದ್ದವು.
ಕೆಲವು ದಿನಗಳ ಸೋಂಕಿನ ದಾಖಲೆಗಳ ಪ್ರಮಾಣವನ್ನು ಆಧರಿಸಿ ಆಯಾ ರಾಜ್ಯ ಸರಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಚಟುವಟಿಕೆಗಳಿಗೆ ಮರುಜೀವ ನೀಡಲಿದೆ. ಸಾಮಾಜಿಕ ಅಂತರಗಳು ಮತ್ತು ಇನ್ನಿತರ ಸುರಕ್ಷಾ ಮಾನದಂಡಗಳನ್ನು ಪಾಲಿಸಿ, ವಿಶ್ವವಿದ್ಯಾಲಯಗಳು, ಬಾರ್‌ಗಳು, ವ್ಯಾಪಾರ ಕೇಂದ್ರಗಳು, ಕಾಸೆ¾ಟಿಕ್ ಸ್ಟುಡಿಯೋಗಳು, ವೇಶ್ಯಾಗೃಹಗಳು, ಚಿತ್ರಮಂದಿರಗಳು ಮತ್ತು ಡಾನ್ಸ್ ಗಳಿಗೆ ಕ್ರಮೇಣ ಅನುಮತಿ ನೀಡುವ ನಿರ್ಧಾರಗಳನ್ನು ರಾಜ್ಯಗಳು ತೆಗೆದುಕೊಳ್ಳುತ್ತವೆ ಎಂದು ಸರಕಾರ ಹೇಳಿದೆ.
ಜರ್ಮನಿಯ ಕೆಲವು ಕಡೆಗಳಲ್ಲಿ ಈಗಾಗಲೇ ರೆಸ್ಟೋರೆಂಟ್‌ಗಳು, ಬಾರ್‌ಗಳು ಆರಂಭವಾಗಿವೆ. ಹೊರಾಂಗಣ ಕ್ರೀಡೆಗಳನ್ನು ಪುನರಾರಂಭಿಸಲು ಸರಕಾರ ಹಸಿರು ನಿಶಾನೆ ತೋರಿದ್ದು, ಫುಟ್ಬಾಲ್‌ಗೆ ಸಮ್ಮತಿ ನೀಡಲಾಗಿದೆ. ಲಾಕ್‌ಡೌನ್ ತೆರವಾಗಿದ್ದರೂ ಸಾಮಾಜಿಕ ಅಂತರ ಸೇರಿದಂತೆ ಇತರ ಸುರಕ್ಷಾ ಕ್ರಮಗಳು ಜಾರಿಯಲ್ಲಿರುತ್ತದೆ. ಸಾರ್ವಜನಿಕ ಜೀವನದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಅನಂತರ ಹೊಸ ಸೋಂಕುಗಳ ಸಂಖ್ಯೆ ಮತ್ತೆ ಏರಿಕೆಯಾದರೆ, ಸ್ಥಳೀಯ ನಿರ್ಬಂಧಗಳನ್ನು ಮತ್ತೆ ಪ್ರಾರಂಭಿಸಬೇಕು ಎಂದು ಫೆಡರಲ್ ಸರಕಾರ ಹೇಳಿದೆ.
ವೈರಸ್ ಹರಡುವುದನ್ನು ತಡೆಯಲು ಜರ್ಮನಿ ಸರಕಾರ ಯಶಸ್ವಿಯಾಗಿದೆ. ಇತರ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಜರ್ಮನಿ ಯಶಸ್ವಿಯಾಗಿದೆ.