Advertisement

ಸೋಂಕು ಹತ್ತಿಕ್ಕುವಲ್ಲಿ ಸದ್ಯಕ್ಕೆ ಜರ್ಮನಿ ಮುಂದು

04:41 PM Apr 20, 2020 | sudhir |

ಬರ್ಲಿನ್‌: ಜರ್ಮನಿ ಕೋವಿಡ್‌-19 ಮುಂದೆ ಜಗತ್ತಿನ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಸಂಖ್ಯೆಯ ಸೋಂಕುಗಳು ಪತ್ತೆಯಾಗಿದ್ದರೂ, ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಫ್ರಾನ್ಸ್‌, ಇಟಲಿ ಮತ್ತು ಅಮೆರಿಕಕ್ಕಿಂತ ಕಡಿಮೆ. ಸರಕಾರ ಕೈಗೊಂಡ ವ್ಯಾಪಕ ಪರೀಕ್ಷೆ ಮತ್ತು ಸೋಂಕಿತ ರೋಗಿಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿದ್ದ‌ಕ್ಕಾಗಿ ಬರ್ಲಿನ್‌ಗೆ ಮನ್ನಣೆ ನೀಡಿ¨ªಾರೆ.

Advertisement

60 ವರ್ಷದ ಮಾರ್ಟಿನಾ ಹಮಾಚರ್‌ ಅವರು ಸಾವಿನ ದವಡೆಯಿಂದ ಪಾರಾಗಿ ಬಂದ ನಾನು ಅದೃಷ್ಟಶಾಲಿ ಎಂದು ಬರ್ಲಿನ್‌ ಮಾಧ್ಯಮಗಳ ಮುಂದೆ ಹೇಳಿದ್ದರು.

ಒಂದು ದಿನ, ನಾನು ಸ್ವಲ್ಪ ದೈಹಿಕ ದುರ್ಬಲತೆಯನ್ನು ಅನುಭವಿಸಿದೆ. ನನಗೆ ಜ್ವರ ಬರುತ್ತಿತ್ತು. ಅನಾರೋಗ್ಯವು ತೀವ್ರಗೊಂಡಾಗ, ನಾನು ಎಂದಿಗೂ ಇಂಥದ್ದನ್ನು ಅನುಭವಿಸಿರಲಿಲ್ಲ. ಆ ನೋವು ವಿವರಿಸಲು ಅಸಾಧ್ಯ ಎನ್ನುತ್ತಾರೆ.

ಈ ಹಮಾಚರ್‌ ಆರಂಭದ ದಿನಗಳಲ್ಲಿ ಕಾಣಿಸಿಕೊಂಡ ಕೋವಿಡ್ ವೈರಸ್‌ ರೋಗಿಗಳಲ್ಲಿ ಒಬ್ಬರು. ತೀವ್ರ ನಿಗಾ ಘಟಕಗಳಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದ ಅವರು ಗುಣಮುಖವಾಗಿದ್ದಾರೆ. ವೈದ್ಯರು ಮತ್ತು ದಾದಿಯರ ಕಾರ್ಯಕ್ಕಾಗಿ ನಾನು ತುಂಬಾ ಕೃತಜ್ಞ. ಅವರಿಲ್ಲದಿದ್ದರೆ ನಾನು ಬದುಕುತ್ತಿದ್ದೆ ಎಂದು ಭಾವಿಸಲಾರೆ ಎನ್ನುತ್ತಾರೆ.

ಬದುಕಿಸುವುದು ನಮ್ಮ ಧ್ಯೇಯ
ಇದು ಸಾವು ಮತ್ತು ತಂತ್ರಜ್ಞಾನದ ಪ್ರಶ್ನೆಯಲ್ಲ. ಇದರಲ್ಲಿ ಐಸಿಯುನ ಯಂತ್ರಗಳ ಪಾಲು ಇಲ್ಲ. ಜನರು ಧೈರ್ಯವಾಗಿರಬೇಕು, ಮಾತ್ರವಲ್ಲದೇ ಇಚ್ಛಾಶಕ್ತಿಯನ್ನೂ ಹೊಂದಿರಬೇಕು ಎನ್ನುತ್ತಾರೆ ಐಸಿಯು ನಿರ್ದೇಶಕ ಗೆರ್ನಾಟ್‌ ಮಾರ್ಕ್ಸ್.

Advertisement

ಆರಂಭದಲ್ಲಿ ಜರ್ಮನಿಯಾದ್ಯಂತ ಐಸಿಯು ಬೆಡ್‌ಗಳಿಗೆ ಕೊರತೆಯಾಗಿತ್ತು. ಕೆಲವೇ ದಿನಗಳಲ್ಲಿ ಸರಕಾರ ಹಾಸಿಗೆಗಳನ್ನು ಹೆಚ್ಚಿಸಿತು. ದೇಶವು ಈಗಾಗಲೇ 11 ಸಾವಿರ ಉಚಿತ ತೀವ್ರ ನಿಗಾ ಹಾಸಿಗೆಗಳನ್ನು ಹೊಂದಿದೆ.

ಈಗ ಪ್ರಕರಣ ಕಡಿಮೆ
1.33 ಲಕ್ಷಕ್ಕೂ ಹೆಚ್ಚು ದೃಢಪಟ್ಟ ಸೋಂಕುಗಳಲ್ಲಿ ದುವರೆಗೆ ಜರ್ಮನಿಯಲ್ಲಿ 3,800ಕ್ಕೂ ಹೆಚ್ಚು ಜನರು ಸಾವನ್ನಪ್ಪಿ¨ªಾರೆ. ಇದು ಫ್ರಾನ್ಸ್‌, ಅಥವಾ ಸ್ಪೇನ್‌ನಂತಹ ಇತರ ರಾಷ್ಟ್ರಗಳಿಗಿಂತ ಕಡಿಮೆಯಾಗಿದೆ. ಎಪ್ರಿಲ್‌ 12ರಿಂದ, ಹೊಸ ಸೋಂಕುಗಳು ವರದಿಯಾಗಿರುವುದಕ್ಕಿಂತ ಪ್ರತಿದಿನ ಹೆಚ್ಚಿನ ಜನರನ್ನು ರೋಗ ಮುಕ್ತ ಎಂದು ಘೋಷಿಸಲಾಗುತ್ತಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next