Advertisement

ಜರ್ಮನಿ: ಗೇಮ್‌ಗಳಲ್ಲಿ ನಾಜಿ ಚಿತ್ರ ನಿಷೇಧ ತೆರವು

06:00 AM Aug 12, 2018 | |

ಬರ್ಲಿನ್‌: ಜರ್ಮನಿಯಲ್ಲಿ ನಾಜಿ ಸೇರಿದಂತೆ ಯಾವುದೇ ತೀವ್ರಗಾಮಿ ಸಂಘಟನೆಗಳ ಚಿಹ್ನೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಸಿನಿಮಾಗಳು ಅಥವಾ ಗೇಮ್‌ಗಳಲ್ಲಿ ಇಂತಹ ಚಿಹ್ನೆಗಳು ಹಾಗೂ ಹಿಟ್ಲರ್‌ನ ಚಿತ್ರಣವನ್ನು ಬಳಸುವಂತಿರಲಿಲ್ಲ. ಆದರೆ ಇದೀಗ ಈ ನಿಯಮವನ್ನು ಸಡಿಲಿಸಲಾಗಿದ್ದು, ಗೇಮ್‌ಗಳಲ್ಲಿ ನಾಜಿ ಚಿಹ್ನೆಗಳನ್ನು ಬಳಸ ಬಹುದಾಗಿದೆ. ಅಷ್ಟೇ ಅಲ್ಲ, ಹಿಟ್ಲರ್‌ನ ವ್ಯಕ್ತಿಚಿತ್ರವನ್ನೂ ಬಳಸಿಕೊಳ್ಳಬಹುದಾಗಿದೆ. ಆದರೆ ಆತನನ್ನು ವೈಭವೀಕರಿಸುವಂತಿಲ್ಲ.

Advertisement

ಸಾಮಾನ್ಯವಾಗಿ ವೋಲ್ಫೆನ್‌ಸ್ಟೀನ್‌ನಂಥ ಗೇಮ್‌ಗಳ ಜರ್ಮನ್‌ ಆವೃತ್ತಿಯಲ್ಲಿ ನಾಜಿಯ ಸ್ವಸ್ತಿಕ್‌ ಚಿಹ್ನೆಗಳ ಬದಲಿಗೆ ಬೇರೆ ಚಿಹ್ನೆಗಳನ್ನು ಬಳಸಲಾಗುತ್ತಿತ್ತು. ಅಷ್ಟೇ ಅಲ್ಲ, ಅದರಲ್ಲಿರುವ ಹಿಟ್ಲರ್‌ನ ಮೀಸೆಯನ್ನು ತೆಗೆದುಹಾಕಿ, ಆತನ ಹೆಸರನ್ನೂ ಬದಲಿಸಲಾಗುತ್ತಿತ್ತು. ಹಿಟ್ಲರ್‌ ನೀತಿಗೆ ವಿರುದ್ಧವಾಗಿ ಗೇಮ್‌ ಇದ್ದರೆ ಸಾಕು. ಜರ್ಮನಿ ನಿಯಂತ್ರಕರು ಅನುಮೋದಿ ಸುತ್ತಾರೆ. ಹಿಟ್ಲರ್‌ನನ್ನು ವೈಭವೀಕರಿಸಿದರೆ ಅಥವಾ ವಿಪರೀತ ಹಿಂಸೆ ಗೇಮ್‌ಗಳಲ್ಲಿದ್ದರೆ ಬಿಡುಗಡೆಗೆ ಅನುಮೋದನೆ ನೀಡುವುದಿಲ್ಲ. ಅಂದರೆ ಗೇಮ್‌ನಲ್ಲಿ ಆಟಗಾರರು ಹಿಟ್ಲರ್‌ನನ್ನು ಹುಡುಕಿಕೊಂಡು ಹೋಗಿ ಕೊಲ್ಲುವಂತೆ ಇರಬೇಕು. ಈ ನಿಷೇಧ 1990ರಿಂದಲೇ ಜಾರಿಯಲ್ಲಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next