ಬರ್ಲಿನ್: ಯುರೋಪಿನಾದ್ಯಂತ ಲಾಕ್‌ಡೌನ್ ಗಣನೀಯವಾಗಿ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಜರ್ಮನಿ ಯುರೋಪ್ ಪ್ರವಾಸಿಗರಿಗಿದ್ದ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ. ಪಶ್ಚಿಮ ಯುರೋಪಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವುದರಿಂದ ಪ್ರಯಾಣ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತಿದೆ ಎಂದು ಸರಕಾರ ಹೇಳಿಕೊಂಡಿದೆ.
ಇದೇ ವೇಳೆ ಫ್ರಾನ್ಸ್‌ನಲ್ಲೂ ಬಹಳಷ್ಟು ಸಡಿಲಿಕೆ ಮಾಡಲಾಗಿದೆ. ಕೆಫೆಗಳು ಮತ್ತು ಬಾರ್‌ಗಳು ತೆರೆದಿದ್ದು ಕೆಲವು ನಿಯಮಗಳೊಂದಿಗೆ ವ್ಯಾಪಾರ ಪ್ರಾರಂಭವಾಗಿದೆ.
ಯುರೋಪೇತರ ದೇಶಗಳ ಪ್ರಯಾಣಕ್ಕೆ ಸರಕಾರ ಸಂಪೂರ್ಣಅನುಮತಿ ನೀಡಿಲ್ಲ. ವಿದೇಶಗಳಿಗೆ ಹೋಗುವವರಿಗೆ ಸರಕಾರ ಕೆಲವೊಂದು ಎಚ್ಚರಿಕೆಗಳನ್ನು ನೀಡಲಿದೆ ಎಂದು ಜರ್ಮನಿಯ ವಿದೇಶಾಂಗ ಸಚಿವ ಹೈಕೊ ಮಾಸ್ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ಕೆಫೆ ಮತ್ತು ಬಾರ್‌ಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರಚಿಸಲಾಗಿದೆ. ಫುಟ್‌ಪಾತ್‌ನಲ್ಲಿ ಟೇಬಲ್ ಹಾಕಲು ಸರಕಾರ ಅನುಮತಿ ನೀಡಿದೆ. ಆದರೆ ಈ ಟೇಬಲ್‌ಗಳು ಒಂದು ಮೀಟರ್ ಅಂತರದಲ್ಲಿರಬೇಕು. ಫ್ರಾನ್ಸ್‌ನ ಉಳಿದೆಡೆ ಬಾರ್ ಮತ್ತು ಹೊಟೇಲುಗಳ ಒಳಗಡೆಯೇ ಗ್ರಾಹಕರಿಗೆ ಸೇವೆ ನೀಡಬಹುದು.
ಬರ್ಲಿನ್‌ನಲ್ಲಿ ಜಿಮ್‌ಗಳ ಒಳಗೆ ಕನಿಷ್ಠ 3 ಮೀಟರ್ ಅಂತರ ಇರಬೇಕು. ಬಾರ್‌ಗಳಲ್ಲಿ ಕೌಂಟರ್‌ನಲ್ಲಿ ಸರ್ವ್ ಮಾಡಬಾರದು. ಟೇಬಲ್‌ಗಳಿಗೆ ಮಾತ್ರ ಅನುಮತಿಯಿದೆ. ಗ್ರಾಹಕರು ಮತ್ತು ಹೆಸರು ಮತ್ತು ಫೋನ್ ನಂಬರ್ ನಮೂದಿಸಬೇಕು. ಫ್ರಾನ್ಸ್‌ನಲ್ಲಿ ಎಲ್ಲ ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಬೀಚ್‌ಗಳಲ್ಲಿ ಸೂರ್ಯಸ್ನಾನಕ್ಕೆ ಅನುಮತಿ ನೀಡಲಾಗಿದೆ. ಫ್ರಾನ್ಸ್‌ನ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚುವ ಖಠಿಟಟಇಟvಜಿಛ ಆ್ಯಪ್ ತಾಂತ್ರಿಕ ದೋಷಗಳು ಕಾಣಿಸಿಕೊಂಡ ಕಾರಣ ಇನ್ನೂ ಬಿಡುಗಡೆಯಾಗಿಲ್ಲ.
ಆ್ಯಪಲ್ ಮತ್ತು ಗೂಗಲ್ ಅಭಿವೃದ್ಧಿಪಡಿಸಿರುವ ಈ ಆ್ಯಪ್ ಕೋವಿಡ್ ಸೋಂಕು ದೃಢಪಟ್ಟವರು ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬುದನ್ನು ತಿಳಿಸುತ್ತದೆ. ಹಿಂದಿನ ಎರಡು ವಾರಗಳ ಭೇಟಿಯ ಪೂರ್ಣ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ. ತಾಂತ್ರಿಕ ದೋಷ ಸರಿಯಾದ ಕೂಡಲೇ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಫ್ರಾನ್ಸ್ ಸರಕಾರ ಹೇಳಿದೆ.