Advertisement
ವಿದೇಶಗಳಲ್ಲಿ ಕಾಣಸಿಗುವ ಬಸ್ ನಿಲ್ದಾಣಗಳಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಇದರ ವೈಶಿಷ್ಟ é. ಸಾಮಾನ್ಯವಾಗಿ ಬಸ್ ತಂಗುದಾಣ ಎಂದರೆ ಕಸದ ರಾಶಿ, ಕೊಳೆತ ವಾಸನೆ, ಗಲೀಜು, ಅಲ್ಲಲ್ಲಿ ಅಂಟಿಸಿ ಹರಿದ ಭಿತ್ತಿಪತ್ರಗಳು, ಭಗ್ನ ವಿರಹಿಗಳ ಪ್ರೇಮವಾಕ್ಯದ ಸಾಲುಗಳು ಎಂದು ಅಂದುಕೊಂಡವರನ್ನು ನಾಚಿಸುವಂತಹ ತಂಗುದಾಣ ಇದು.
ಕುಡಿಯಲು ಶುದ್ಧ ತಂಪು ಹಾಗೂ ಬಿಸಿ ನೀರು, ಸಿಸಿಟಿವಿ ವ್ಯವಸ್ಥೆ, ಸೋಲಾರ್ ಬೆಳಕು, ರಾಜ್ಯದ ಮ್ಯಾಪ್, ಈ ದಾರಿಯಲ್ಲಿ ಹಾದು ಹೋಗುವ ಬಸ್‌ಗಳ ವೇಳಾಪಟ್ಟಿ, ದಣಿವಾರಿಸಿಕೊಳ್ಳಲು ಫ್ಯಾನ್, ಸುದ್ದಿ ಮಾಹಿತಿ ಹಾಗೂ ಪದ್ಯಗಳನ್ನು ಆಲಿಸಲು ಎಫ್‌ಎಂ ರೇಡಿಯೋ, ನೋಟಿಸ್ ಬೋರ್ಡ್, ಸಮಯ ತಿಳಿದುಕೊಳ್ಳಲು ಗಡಿಯಾರ, ಎಲ್‌ಇಡಿ ಬೋರ್ಡ್, ಕಸದ ಬುಟ್ಟಿ ಇಲ್ಲಿವೆ. ವಿಶಿಷ್ಟ ವಿನ್ಯಾಸ
ದೂರದಿಂದ ನೋಡುವಾಗ ಬಡಗು ತಿಟ್ಟು ಯಕ್ಷಗಾನದ ಕೇದಗೆ ಮುಂದಲೆಯನ್ನು ಹೋಲುವ ನಿಲ್ದಾಣ ಅಶ್ವತ್ಥ ಎಲೆ ಆಕಾರದ ಛಾವಣಿಯನ್ನು ಹೊಂದಿದೆ. ಛಾವಣಿಗೆ ವಿದೇಶದಿಂದ ತರಿಸಲಾದ ದೀರ್ಘ ಬಾಳಿಕೆಯ ಶೀಟ್ ಅಳವಡಿಸಲಾಗಿದೆ. ಅದರ ಕೆಳಗೆ ಸಿಮೆಂಟ್ ಶೀಟ್, ಅದಕ್ಕೂ ಕೆಳಗೆ ಫೈಬರ್ ಶೀಟ್ ಅಳವಡಿಸಲಾಗಿದೆ. 5,000 ಚದರ ಅಡಿಗೆ ಇಂಟರ್‌ಲಾಕ್ ಹಾಕಲಾಗಿದೆ. 15×15 ಅಳತೆಯ ಈ ತಂಗುದಾಣದ ಪಕ್ಕದಲ್ಲಿ ಮನ ಹಸಿರಾಗಿಸಲು ಪುಟ್ಟ ಉದ್ಯಾನವನವೂ ಇದೆ. ಇಡೀ ತಂಗುದಾಣ ಎರಡೇ ಕಂಬ ಗಳ ಆಧಾರದಲ್ಲಿ ರಚನೆಯಾಗಿದೆ.
Related Articles
ಇಷ್ಟೊಂದು ವೆಚ್ಚದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಈ ಪುಟ್ಟ ಊರಿನಲ್ಲಿ ದೊಡ್ಡ ಮಾದರಿಯ ಬಸ್ ನಿಲ್ದಾಣ ರಚನೆಗೆ ಕಾರಣವೇನೆಂದು ನಿರಂಜನ ಅಜ್ರಿ ಅವರನ್ನು “ಉದಯವಾಣಿ’ ಕೇಳಿದಾಗ, ತಮ್ಮ ಪುತ್ರಿ ಪ್ರತೀಕ್ಷಾ, ಅಳಿಯ ಸಮ್ಮೇದ್ ಜರ್ಮನಿ ಯಲ್ಲಿ ದ್ದಾರೆ. ಅವರ ಮನೆಗೆ ಹಾಗೂ ಇನ್ನೂ ಐದಾರು ದೇಶಗಳನ್ನು ಸುತ್ತಾಡಲು ಹೋದಾಗ ಅಲ್ಲಿನ ಸಕಲ ಸೌಲಭ್ಯಗಳಿರುವ ಬಸ್‌ತಂಗುದಾಣ ಕಂಡು ಆಕರ್ಷಿತನಾದೆ. ನಮ್ಮ ಊರಿನಲ್ಲೂ ನನ್ನ ತಂದೆ ತಾಯಿಯ ಹೆಸರಿನಲ್ಲಿ ಇಂತಹ ಶಾಶ್ವತ ನಿರ್ಮಾಣ ಆಗಬೇಕು ಎಂದು ನಿಶ್ಚಯಿಸಿ ಪಂಚಾಯತ್ ಅನುಮತಿ ಕೇಳಿದೆ. ನಾರಾವಿ ಚರ್ಚ್‌ಗೆ ಹೋಗುವ ದಾರಿಯಲ್ಲಿ ಒಂದು ಬದಿ ಮಾತ್ರ ತಂಗುದಾಣ ಇದ್ದು, ಮತ್ತೂಂದು ಬದಿ ಶಾಲೆಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿತ್ತು. ಆದ್ದರಿಂದ ಇದೇ ಜಾಗ ಸೂಕ್ತವೆಂದು ತೀರ್ಮಾ ನಿಸಿದೆವು. ಪಕ್ಕದಲ್ಲಿಯೇ ನನ್ನ ಸಹೋ ದರನ ಅಂಗಡಿ ಇರುವ ಕಾರಣ ನಿರ್ವಹಣೆ ಸುಲಭವಾಗಲಿದೆ. ನಮ್ಮ ಮನೆಯ ಬಾವಿಯಿಂದ ನೀರು ಒದ ಗಿಸು ತ್ತಿದ್ದೇವೆ. ಈಗಲೇ ದಿನಕ್ಕೆ 1,000 ಲೀ. ನೀರು ಖರ್ಚಾಗುತ್ತಿದೆ. ಎಸ್‌ಕೆಎಫ್‌ನವರ ಕುಡಿಯುವ ನೀರಿನ ಫಿಲ್ಟರ್ ಅಳವಡಿಸಿದ ಕಾರಣ ಮಕ್ಕಳು, ಪ್ರಯಾಣಿಕರು ಬಾಟಲಿಯಲ್ಲಿ ತುಂಬಿಸಿ ಕೊಂಡೊಯ್ಯುತ್ತಿದ್ದಾರೆ. ತಂದೆ ತಾಯಿಯ ಫೋಟೋವನ್ನು ಗ್ರಾನೈಟ್‌ನಲ್ಲಿ ಹಾಕಿದ್ದು, ಇತರ ಮಾಹಿತಿ ಫಲಕ, ನಕಾಶೆಯನ್ನು ಹಾಳು ಮಾಡದಂತೆ ಗಾಜಿನ ಫ್ರೇಮ್ ಅಳವಡಿಸಲಾಗಿದೆ ಎಂದರು.
Advertisement
ನಗರಗಳ ಬೃಹತ್ ಬಸ್ ನಿಲ್ದಾಣಗಳಲ್ಲಿ ಇಂತಹ ಸರ್ವ ಸೌಲಭ್ಯಗಳು ಇರುತ್ತವಾದರೂ ಸಣ್ಣ ಊರಿನಲ್ಲಿ ಇಂತಹ ಸೌಲಭ್ಯಗಳಿರುವ ಅತ್ಯಾಧುನಿಕ ಬಸ್ ತಂಗುದಾಣ ಬಹುಶಃ ರಾಜ್ಯದಲ್ಲಿ ಬೇರೆಡೆ ಇಲ್ಲ. ರವಿವಾರ ನಡೆದ ಉದ್ಘಾಟನ ಕಾರ್ಯ ಕ್ರಮದಲ್ಲಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮೊದ ಲಾದವ ರಿದ್ದರು. 25 ವರ್ಷಗಳಿಂದ ಈ ಮಾರ್ಗ ದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಚಾಲಕರನ್ನು ಸಮ್ಮಾನಿಸಲಾಯಿತು.