ಬರ್ಲಿನ್/ಹೊಸದಿಲ್ಲಿ: ಜರ್ಮನಿ ಸಂಸತ್‌ಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹಾಲಿ ಛಾನ್ಸಲರ್ ಆ್ಯಂಜೆಲಾ ಮರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಯೂನಿಯನ್ ಆಫ್ ಜರ್ಮನಿ ಪಕ್ಷಕ್ಕೆ ಅಲ್ಪ ಮತಗಳ ಅಂತರದಲ್ಲಿ ಸೋಲಾಗಿದೆ. ಅವರ ಪಕ್ಷ ಒಟ್ಟು 196 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಹೀಗಾಗಿ 2005 ನ.22ರಿಂದ ಅಧಿಕಾರದಲ್ಲಿದ್ದ ಮರ್ಕೆಲ್ ಅವರ ಅವಧಿ ಮುಕ್ತಾಯಗೊಂಡಿದೆ. ಒಲಾಫ್ ಶೋಲ್ಸ್ ನೇತೃತ್ವದ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಜರ್ಮನಿಗೆ 206 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ. ಮರ್ಕೆಲ್‌ರ ಪಕ್ಷಕ್ಕೆ ಶೇ.24.1, ಶೋಲ್ಸ್ ಅವರ ಪಕ್ಷಕ್ಕೆ ಶೇ.25.7 ಮತಗಳು ಪ್ರಾಪ್ತಿಯಾಗಿವೆ ಎಂದು ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ಒಟ್ಟು 299 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದವು.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ
ಒಲಾಫ್ ಶೋಲ್ಸ್ ಪ್ರತಿಕ್ರಿಯೆ ನೀಡಿ ಫಲಿತಾಂಶ ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ. ಶೋಲ್ಸ್ ಅವರ ಪಕ್ಷಕ್ಕೆ ಸರಕಾರ ರಚಿಸುವಷ್ಟು ಮತಗಳು ಬಂದಿಲ್ಲ. ಹೀಗಾಗಿ ಸಣ್ಣ ಪಕ್ಷಗಳ ಬೆಂಬಲ ಯಾಚನೆ ಅನಿವಾರ್ಯ.