Advertisement

ಹೇಗಿದೆ ಗೊತ್ತಾ ಆಡಿ ಕಂಪೆನಿಯ ವಿನೂತನ ಎಲೆಕ್ಟ್ರಿಕ್ ಕಾರು?

09:45 AM Aug 03, 2019 | Hari Prasad |

ಗುರ್ಗಾಂವ್: ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ಆಡಿ ಕಂಪೆನಿಯು ತನ್ನ ಎಲೆಕ್ಟ್ರಾನಿಕ್ ಮಾದರಿಯ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷಾಂತ್ಯದಲ್ಲಿ ಭಾರತದ ರಸ್ತೆಗಳಲ್ಲಿ ಇ-ಟ್ರಾನ್ ಹೆಸರಿನ ಈ ಕಾರು ಓಡಾಟ ನಡೆಸಲಿದೆ. ಇದು ಆಡಿ ಹೊರತರುತ್ತಿರುವ ಸಂಪೂರ್ಣವಾಗಿ ವಿದ್ಯುತ್ ಚಾಲಿತ ಮಾದರಿಯ ಎಸ್.ಯು.ವಿ. ವಾಹನವಾಗಿರಲಿದೆ.

Advertisement

ಹರ್ಯಾಣದ ಗುರ್ಗಾಂವ್ ನಲ್ಲಿ ಸಂಸ್ಥೆಯ ಹೊಸ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಈ ಅತ್ಯಾಕರ್ಷಕ ಕಾರನ್ನು ಅನಾವರಣಗೊಳಿಸಲಾಯಿತು.


ಅಂದ ಹಾಗೆ ಅತ್ಯಾಧುನಿಕ ಮಾದರಿಯ ಈ ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು ಗೊತ್ತಾ? ಈ ಕಾರಿನ ಅಂದಾಜು ಮಾರುಕಟ್ಟೆ ಬೆಲೆ 54 ರಿಂದ 56 ಲಕ್ಷಗಳ ಆಸುಪಾಸಿನಲ್ಲಿರಲಿದೆ. ಆಡಿ ಕ್ಯು5 ಮತ್ತು ಆಡಿ ಕ್ಯು7 ಕಾರುಗಳ ಗಾತ್ರವನ್ನೇ ಇ-ಟ್ರಾನ್ ಹೋಲುತ್ತದೆ.

ಈ ಕಾರಿನಲ್ಲಿ ಎರಡು ವಿದ್ಯುತ್ ಚಾಲಿತ ಯಂತ್ರಗಳಿರುತ್ತವೆ. ಇವುಗಳಲ್ಲಿ ಮುಂಭಾಗದ ಯಂತ್ರವು 125 ಕಿಲೋವ್ಯಾಟ್ ನದ್ದಾಗಿದ್ದರೆ ಹಿಂಭಾಗದ ಮೋಟಾರ್ 140 ಕಿಲೋವ್ಯಾಟ್ ನದ್ದಾಗಿರುತ್ತದೆ. ಹೀಗೆ ಇವುಗಳ ಒಟ್ಟು ಸಾಮರ್ಥ್ಯ 265 ಕಿಲೋ ವ್ಯಾಟ್ ಅಥವಾ 355 ಬ್ರೇಕ್ ಹಾರ್ಸ್ ಪವರ್ ಆಗಿರುತ್ತದೆ. ಇಷ್ಟು ಮಾತ್ರವಲ್ಲದೆ ಈ ಮಾದರಿಯಲ್ಲಿ ಬೂಸ್ಟ್ ಮೋಡ್ ಸಹ ಲಭ್ಯವಿದ್ದು ಇದೆ ಸಾಮರ್ಥ್ಯ 300 ಕಿಲೋ ವ್ಯಾಟ್ ಅಥವಾ 408 ಬಿ.ಹೆಚ್.ಪಿ. ಆಗಿರುತ್ತದೆ.

ಒಂದು ಬಾರಿಗೆ ಚಾರ್ಜ್ ಮಾಡಿದರೆ 400 ಕಿಲೋ ಮೀಟರ್ ತನಕ ಪ್ರಯಾಣಿಸಬಹುದು. ಮತ್ತು ಇದರ ಗರಿಷ್ಠ ವೇಗ ಗಂಟೆಗೆ 200 ಕಿಲೋ ಮೀಟರ್ ಗಳಿಷ್ಟಿರುತ್ತದೆ.


ನಾರ್ಮಲ್ ಮೋಡ್ ನಲ್ಲಿ 0-100 ಕಿಲೋ ಮೀಟರ್ ವೇಗವನ್ನು ದಾಖಲಿಸಲು ಇ-ಟ್ರಾನ್ ಗೆ 6.6 ಸೆಕೆಂಡ್ ಗಳಷ್ಟು ಸಮಯ ಸಾಕಾಗಿದ್ದರೆ, ಬೂಸ್ಟ್ ಮೋಡ್ ನಲ್ಲಿ ಇದಕ್ಕೆ ಕೇವಲ 5.7 ಸೆಕೆಂಡುಗಳಷ್ಟೇ ಸಾಕಾಗಿರುತ್ತದೆ.

Advertisement

ಈ ಕಾರಿನ ಮೇಲ್ಭಾಗದಲ್ಲಿ 36 ಮೋಡ್ಯುಲ್ ಗಳಲ್ಲಿ 432 ವಿದ್ಯುತ್ ಕೋಶಗಳನ್ನು ಅಳವಡಿಸಿರಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next