Advertisement
ಶಾಂತಿನಗರದಲ್ಲಿರುವ ಇ.ಡಿ ಕಚೇರಿಯಲ್ಲಿ ತನಿಖಾಧಿಕಾರಿಗಳ ತಂಡ ಜಾರ್ಜ್ ಅವರನ್ನು ನಾಲ್ಕು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದೆ.ಜತೆಗೆ, ಆಸ್ತಿ ವಿವರಗಳಿಗೆ ಸಂಬಂಧಿಸಿದಂತೆ ಸದ್ಯ ನೀಡಿರುವ ದಾಖಲೆಗಳನ್ನು ಪರಿಶೀಲಿಸಿದ್ದು ಅವರ ಸಂಬಂಧಿರ ಆಸ್ತಿ ವಿವರವನ್ನೂ ಪಡೆದುಕೊಂಡಿದ್ದಾರೆ.
Related Articles
ಜಾರ್ಜ್ ಹಾಗೂ ಕುಟುಂಬಸ್ಥರು ಅಮೆರಿಕಾ, ಆಸ್ಟ್ರೇಲಿಯಾದಲ್ಲಿ ಕಂಪೆನಿಗಳನ್ನು ಹೊಂದಿದ್ದು ಶೆಲ್ ಕಂಪೆನಿಗಳು, ಬ್ಯಾಂಕ್‌ಗಳಿಂದ ಹಣ ಪಡೆದು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ದೂರು ನೀಡಿದ್ದರು. ಈ ದೂರಿನ ಅನ್ವಯ ಜಾರ್ಜ್ ಹಾಗೂ ಅವರ ಸಂಬಂಧಿಕರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ( ಫೆಮಾ) ಅಡಿಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
Advertisement
ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ ಜಾರ್ಜ್ ಹಾಗೂ ಸಂಬಂಧಿಕರಿಗೆ ಸಮನ್ಸ್ ನೀಡಿದ್ದ ಅಧಿಕಾರಿಗಳು, ಜಾರ್ಜ್ ಹಾಗೂ ಪತ್ನಿ ಸುಜಾ ಜಾರ್ಜ್, ಪುತ್ರಿ ರಿಟೀನಾ, ಪುತ್ರ ರಾಣಾ ಜಾರ್ಜ್‌ಗೆ ಸೇರಿದ ಪಾನ್‌ಕಾರ್ಡ್, ಆಧಾರ್‌ಕಾರ್ಡ್, ಪಾಸ್‌ಪೋರ್ಟ್ ಮತ್ತು ದೇಶ ಮತ್ತು ವಿದೇಶದಲ್ಲಿ ಕುಟುಂಬ ಸದಸ್ಯರ ಹೆಸರಿನ ಬ್ಯಾಂಕ್ ಖಾತೆ ದಾಖಲೆ, 2005-06ನಿಂದ ಪ್ರಸಕ್ತ ಸಾಲಿನವರೆಗೂ ಆದಾಯ ತೆರಿಗೆ ಪಾವತಿ, ಲೆಕ್ಕ ಪರಿಶೋಧಕ ಪತ್ರ, ದಾಖಲೆಗಳನ್ನು ಸಿಡಿ ಅಥವಾ ಡಿವಿಡಿ ಮೂಲಕ ಹಾಜರುಪಡಿಸಬೇಕು. ದೇಶ, ವಿದೇಶಗಳಲ್ಲಿಹೊಂದಿರುವ ವ್ಯವಹಾರ, ಷೇರು, ಆಸ್ತಿ, ಸಂಸ್ಥೆ ಬಗ್ಗೆಯೂ ದಾಖಲೆ ತರಬೇಕು ಎಂದು ಸೂಚಿಸಿದ್ದರು.
ನ್ಯೂಯಾರ್ಕ್‌ನಲ್ಲಿರುವ ಶಾಸಕ ಜಾರ್ಜ್‌ರ ಪುತ್ರಿ ರೆನಿಟಾ ಅಬ್ರಹಾಂ, ಅಳಿಯ ಕೆವಿನ್ ಅಬ್ರಹಾಂ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಆ ಪೈಕಿ ಒಂದು ಆಸ್ತಿ ಜಾರ್ಜ್, ಅವರ ಪತ್ನಿ ಸುಜಾ ಜಾರ್ಜ್, ಸಹೋದರ ಕೆ.ಜೆ. ಕುರುವಿಲ್ಲಾ ಹೆಸರಿನಲ್ಲಿದೆ. 2014 ಹಾಗೂ 2015ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ನಮೂದಿಸಿದ್ದಾರೆ. ಆದರೆ, 2013 ಹಾಗೂ 2018ರ ಚುನಾವಣಾ ಅಫಿಡವಿಟ್‌ನಲ್ಲಿ ಮರೆಮಾಚಿದ್ದಾರೆ ಎಂಬುದು ದೂರುದಾರರ ಆರೋಪವಾಗಿದೆ.