Advertisement

ಭಾರತ-ತೈವಾನ್‌ ವಾಣಿಜ್ಯದಲ್ಲಿ ಭೂ-ರಾಜಕಾರಣ ಇಲ್ಲ : ಹುವಾಂಗ್‌

03:37 PM Apr 10, 2018 | Team Udayavani |

ತೈಪೆ : ಭಾರತದೊಂದಿಗೆ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಹೊಂದುವ ತೈವಾನ್‌ ನೀತಿಯು ಯಾವುದೇ ರೀತಿಯ ಭೂ-ರಾಜಕಾರಣದ ಉದ್ದೇಶ ಹೊಂದಿರುವುದಿಲ್ಲ ಮತ್ತು ಚೀನದ ಅಭಿಮತದಿಂದ ಯಾವುದೇ ರೀತಿಯಲ್ಲಿ ಪ್ರಭಾವಿತವಾಗಿರುವುದಿಲ್ಲ ಎಂದು ತೈವಾನ್‌ನ ಬಾಹ್ಯ ವಾಣಿಜ್ಯ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಾಗಿರುವ ಜೇಮ್ಸ್‌ ಹುವಾಂಗ್‌ ಹೇಳಿದ್ದಾರೆ. 

Advertisement

ಭಾರತದೊಂದಿಗೆ ತೈವಾನ್‌ ಇನ್ನೂ ಹೆಚ್ಚಿನ ದ್ವಿಪಕ್ಷೀಯ ಹೂಡಿಕೆ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಹೊಂದಲು ಬಯಸುತ್ತದೆ ಎಂದವರು ಹೇಳಿದರು. 

ತೈವಾನ್‌ ಚೀನದ ಅತೀ ಸೂಕ್ಷ್ಮ ವಿಷಯವಾಗಿದ್ದು  ಈ ನಗದು ಸಿರಿವಂತ ದ್ವೀಪವು “ಒನ್‌ ಚೈನಾ’ ದ ಭಾಗವೆಂದು ಚೀನ ಹೇಳಿಕೊಳ್ಳುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next