Advertisement

ಜಿಯೊನೀ ಎಫ್‌205, ಎಸ್‌11 ಲೈಟ್‌ ಫೋನ್‌ ಬಿಡುಗಡೆ

11:38 AM Apr 28, 2018 | |

ನವದೆಹಲಿ: ಆರ್ಥಿಕ ವರ್ಷ ಆರಂಭದ ಮಾಸದಲ್ಲಿ ಜಿಯೋನಿ ಇಂಡಿಯಾ ಎಫ್‌205 ಮತ್ತು ಎಸ್‌11 ಲೈಟ್‌ ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅತ್ಯಾಧುನಿಕ ಕ್ಯಾಮೆರಾ ಮತ್ತು ಫುಲ್‌ ವ್ಯೂ ಡಿಸ್‌ಪ್ಲೇವುಳ್ಳ ಸೆಲ್ಫಿ ಮ್ಯಾಜಿಕ್‌ ಇರುವ ಈ ಫೋನ್‌ಗಳನ್ನು ಸಂಸ್ಥೆಯ ರಾಷ್ಟ್ರೀಯ ಮಾರಾಟ ವಿಭಾಗದ ನಿರ್ದೇಶಕ ಅಲೋಕ್‌ ಶ್ರೀವಾಸ್ತವ ಆವರು ಗುರುವಾರ ಅನಾವರಣಗೊಳಿಸಿದರು.

Advertisement

ನಂತರ ಮಾತನಾಡಿದ ಅವರು, ಗ್ರಾಹಕರ ಬೇಡಿಕೆಗನುಸಾರ ಇಂದು 15ಕೆ ವರ್ಗದಲ್ಲಿ ಅತ್ಯುತ್ತಮ ಫೋನ್‌ಗಳನ್ನು ಪರಿಚರಿಸಿದ್ದೇವೆ. ಈ ಫೋನ್‌ಗಳಲ್ಲಿ ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್‌ ಷಟರ್‌, ಹಿಂಬದಿಯ ಬೆಳಕಿನೊಂದಿಗೆ ಬ್ರೋಕನ್‌ ಮತ್ತು ಗ್ರೂಪ್‌ ಸೆಲ್ಫಿ , ಫುಲ್‌ ವ್ಯೂ ಡಿಸ್‌ಪ್ಲೇ ಮುಂತಾದ ಆಧುನಿಕ ವೈಶಿಷ್ಟಗಳಿವೆ.

13ಎಂಪಿ ಪ್ಲಸ್‌ 2ಎಂಪಿ ಡ್ನೂಯಲ್‌ ರಿಯರ್‌ ಕ್ಯಾಮೆರಾ, 4ಜಿಬಿ ರ್ಯಾಮ್‌, 1.4ಜಿಎಚ್‌ಜಡ್‌ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ ಆಕ್ಟಾ ಕೋರ್‌ ಪ್ರೊಸೆಸ್ಸರ್‌, 7.95ಎಂಎಂ ದಪ್ಪ ಹಾಗೂ 135.6 ಗ್ರಾಂ ತೂಕವುಳ್ಳ 2.5ಡಿ ಆರ್ಕ್‌ ಎಡ್ಜ್ ಸೀನ್‌ನೊಂದಿಗೆ ಕೊರಿಂಗ್‌ ಗೊರಿಲ್ಲ ಗ್ಲಾಸ್‌, ಸ್ಕಾಚ್‌ ಪ್ರೂಫ್‌ ಹಾಗೂ 2670 ಎಂಎಚ್‌ ಬ್ಯಾಟರಿವುಳ್ಳ ಎಫ್‌205 ಹಾಗೂ ಎಸ್‌11 ಲೈಟ್‌ ಮಾರುಕಟ್ಟೆ  ದರ ಕ್ರಮವಾಗಿ 8,999 ಮತ್ತು 13,999 ರೂ. ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next