Advertisement

ಜನರಿಕ್‌ ಔಷಧಿಗಳಿಗಿನ್ನೂ ಜನಾಕರ್ಷಣೆಯಿಲ್ಲ

08:54 AM May 21, 2019 | Suhan S |

ಹಾಸನ: ರೋಗಿಗಳಿಗೆ ಸುಲಭ ದರದಲ್ಲಿ ಔಷಧಿ ಸಿಗಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆರಂಭಿಸಿರುವ ಜನರಿಕ್‌ ಔಷಧಿಗಳು ಇನ್ನೂ ಜನಪ್ರಿಯವಾಗಿಲ್ಲ.

Advertisement

ಜನರಿಕ್‌ ಔಷಧಿ ಮಾರಾಟಕ್ಕೆಂದೇ ಆರಂಭವಾದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ಸಂಜೀವಿನಿ ಔಷಧಿ ಕೇಂದ್ರಗಳಲ್ಲಿ ಗುಣಮಟ್ಟದ ಔಷಧಿಗಳಿದ್ದರೂ ಇನ್ನೂ ಜನಾಕರ್ಷಣಿಯವಾಗಿಲ್ಲ.

ವೈದ್ಯರು ಅರಿವು ಮೂಡಿಸುತ್ತಿಲ್ಲ: ಔಷಧಿ ಕಂಪನಿಗಳ ದುಬಾರಿ ದರದ ಔಷಧಿಗಳನ್ನು ಆರ್ಥಿಕ ದುರ್ಬಲವ ವರ್ಗದ ರೋಗಿಗಳು ಖರೀದಿಸಲು ಸಾಧ್ಯವಾಗುವು ದಿಲ್ಲ ಎಂದು, ಜೀವ ರಕ್ಷಕ ಔಷಧಿಗಳು ಸುಲಭ ದರದಲ್ಲಿ ಸಿಗಬೇಕೆಂದು ಜನರಿಕ್‌ ಔಷಧಿಗಳ ಮಾರಾಟಕ್ಕೆ ಸರ್ಕಾರಗಳು ಮುಂದಾದವು. ಆದರೆ ವೈದ್ಯರು ಬರೆದುಕೊಡುವ ಪ್ರಸಿದ್ಧ ಕಂಪನಿಗಳ ಹೆಸರಿನ ಬದಲಾಗಿ, ಆದರೆ ಅದೇ ಗುಣಮಟ್ಟದ ಔಷಧಿಗಳಾದ ಜನರಿಕ್‌ ಔಷಧಿಗಳ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ನಂಬಿಕೆ ಬಂದಿಲ್ಲ. ವೈದ್ಯರೂ ರೋಗಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತಿಲ್ಲ. ವಿಶೇಷವಾಗಿ ಖಾಸಗಿ ವೈದ್ಯರು ತಮ್ಮ ಆಸ್ಪತ್ರೆಯ ಔಷಧಿ ಅಂಗಡಿಗಳಲ್ಲಿ ಮಾತ್ರ ಸಿಗಬಹು ದಾದ ಔಷಧಿಗಳನ್ನು ಮಾತ್ರ ಬರೆದುಕೊಡುವುದರಿಂದ, ಆ ಔಷಧಿ ಹೊರತುಪಡಿಸಿ ಜನರಿಕ್‌ ಔಷಧಿಗಳು ಪರಿಣಾಮಕಾರಿಯಲ್ಲ ಎಂದು ಭಾವನೆಯನ್ನೂ ಮೂಡಿಸುತ್ತಿರುವುದು ಜನರಿಕ್‌ ಔಷಧಿಗಳ ಜನಪ್ರಿಯತೆಗೆ ಹಿನ್ನಡೆಯಾಗಿದೆ.

ರಿಯಾಯಿತಿ ದರದಲ್ಲಿ ಔಷಧಿ: ಖಾಸಗಿ ವೈದ್ಯರು ಬರೆದುಕೊಡುವ ಜನಪ್ರಿಯ ಔಷಧಿ ಕಂಪನಿಗಳ ಔಷಧಿಗಳ ದರಕ್ಕೆ ಹೋಲಿಸಿದರೆ ಕೆಲವು ಜನರಿಕ್‌ ಔಷಧಿಗಳ ದರ ಶೇ.70ರಿಂದ 90ರಷ್ಟು ಕಡಿಮೆಯಿ ರುತ್ತದೆ. ಇಷ್ಟು ಕಡಿಮೆ ಮೌಲ್ಯದ ಔಷಧಿಗಳು ಪರಿಣಾಮಕಾರಿಯಾಗಿರುವುದಿಲ್ಲ ಎಂಬ ಕಲ್ಪನೆ ರೋಗಿಗಳಲ್ಲೂ ಮೂಡುತ್ತಿದೆ. ಅದೂ ಕೂಡ ಜನರಿಕ್‌ ಔಷಧಿಗಳ ಜನಾರ್ಕಷಣೆಯಾಗದಿರಲು ಕಾರಣ.

ಬೇಡಿಕೆ ಕುಸಿತ: ಜನರಿಕ್‌ ಔಷಧಿಗಳು ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿಯೇ ಆರಂಭ ವಾಗಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧಿಯನ್ನು ಸರಬರಾಜು ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವ ರೋಗಿಗಳಿಗೆ ಸರ್ಕಾರದಿಂದಲೇ ಆಸ್ಪತ್ರೆಗೆ ಪೂರೈಕೆಯಾಗುವ ಆರ್ಥಿಕ ದುರ್ಬಲವ ವರ್ಗದ ರೋಗಿಗಳಿಗೆ ಔಷಧಿ ಗಳನ್ನು ವಿತರಿಸುವುದರಿಂದಲೂ ಜನರಿಕ್‌ ಔಷಧಿಗಳಿಗೆ ಬೇಡಿಕೆ ಕುಸಿಯಲು ಕಾರಣವಿರಬಹುದು.

Advertisement

ಹಾಸನ ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಮತ್ತು ಪ್ರಮುಖ ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿಯೇ ಜನ ಸಂಜೀವಿನಿ ಅಥವಾ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರಗಳಿವೆ. ಪ್ರಮುಖ ಪಟ್ಟಣಗಳಲ್ಲಿ ಆಸ್ಪತ್ರೆಯಿಂದ ದೂರದಲ್ಲಿ ಜನ ನಿಬಿಡ ಪ್ರದೇಶದಲ್ಲಿಯೂ ಜನರಿಕ್‌ ಔಷಧಿ ಮಾರಾಟದ ಜನ ಸಂಜೀವಿನಿ ಅಥವಾ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರಗಳಿವೆ. ಆದರೆ ಖಾಸಗಿ ಔಷಧಿ ಅಂಗಡಿಗಳಲ್ಲಿ ನಡೆಯುವ ಶೇ.25 ರಷ್ಟು ವಹಿವಾಟೂ ಈ ಔಷಧಿ ಅಂಗಡಿಗಳಲ್ಲಿ ನಡೆಯುವುದಿಲ್ಲ.

ಹಾಸನದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬಿಎಸ್‌ಎನ್‌ಎಲ್ನ ಟೆಲಿಫೋನ್‌ ಎಕ್ಸ್‌ಚೇಂಜ್‌ ಕೇಂದ್ರದ ಎದುರು ಇದ್ದ ಜನರಿಕ್‌ ಔಷಧಿ ಮಳಿಗೆಯನ್ನು ಈಗ ಒಡೆದು ಹಾಕಲಾಗಿದೆ. ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆಯ ಕಟ್ಟಡ ಒಡೆಯುತ್ತಿರು ವುದರಿಂದ ಜನರಿಕ್‌ ಔಷಧಿ ಮಳಿಗೆಯನ್ನೂ ಒಡೆದು ಹಾಕಿದ್ದು, ಪರ್ಯಾಯ ವ್ಯವಸ್ಥೆಯನ್ನೂ ಇನ್ನೂ ಮಾಡಿಲ್ಲ. ಇನ್ನು ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರ ನಗರದ ಸಾಲಗಾಮೆ ರಸ್ತೆ ಅರಳಿಕಟ್ಟೆಯ ಸರ್ಕಲ್ನಲ್ಲಿದೆ. 22 ತಿಂಗಳ ಹಿಂದೆ ಆರಂಭವಾದ ಈ ಜನೌಷಧ ಕೇಂದ್ರದಲ್ಲಿ ಇತ್ತೀಚೆಗೆ ಔಷಧಿ ವ್ಯಾಪಾರ ಸುಧಾರಿಸಿದೆ. ಕೆಲವು ಕಾಯಂ ಗ್ರಾಹಕರನ್ನೂ ಈ ಕೇಂದ್ರ ಹೊಂದಿದೆ. ಇದರರ್ಥ ಜನರು ಜನರಿಕ್‌ ಔಷಧ ಖರೀದಿಸಲು ಆಸಕ್ತಿಯಿದ್ದರೂ ಜನ ಸಾಮಾನ್ಯರಿಗೆ ಈ ಬಗ್ಗೆ ಅರಿವು ಮಾತ್ರ ಇಲ್ಲ.

ಜಿಲ್ಲೆಯಲ್ಲಿ ಈಗ 13 ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರಗಳಿವೆ. ಅರಸೀಕೆರೆ ಪಟ್ಟಣದಲ್ಲಿ 2, ಬಾಣಾವರದಲ್ಲಿ ಒಂದು, ಚನ್ನರಾಯಪಟ್ಟಣದಲ್ಲಿ 2, ಶ್ರವಣಬೆಳಗೊಳದಲ್ಲಿ ಒಂದು, ಬೇಲೂರಿನಲ್ಲಿ 2, ಇನ್ನು ಉಳಿದ 5 ತಾಲೂಕು ಕೇಂದ್ರಗಳಲ್ಲಿ ಒಂದೊಂದು ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರಗಳಿವೆ. ಹಾಸನ ನಗರದ ಅರಳಿಕಟ್ಟೆ ಸರ್ಕಲ್ನಲ್ಲಿ ಮಾತ್ರ ಓಂದು ಪ್ರಧಾನಮಂತ್ರಿ ಭಾರ ತೀಯ ಜನ ಔಷಧ ಕೇಂದ್ರವಿದೆ. ಕೆಲವು ಆಸ್ಪತ್ರೆ ಆವರಣದಲ್ಲಿ ಜನ ಸಂಜೀವಿನಿ ಔಷಧಿ ಕೇಂದ್ರಗಳೂ ಇವೆ. ಆದರೆ ಖಾಸಗಿ ಔಷಧಿ ಅಂಗಡಿಗಳಲ್ಲಿ ಮಾರಾಟವಾಗುವಷ್ಟು ಔಷಧಿಗಳು ಈ ಔಷಧಿ ಕೇಂದ್ರಗಳಲ್ಲಿ ಆಗುತ್ತಿಲ್ಲ.

ಖಾಸಗಿ ಆಸ್ಪತ್ರೆಗಳಲ್ಲೂ ಜನರಿಕ್‌ ಔಷಧಿ !: ಕೆಲವು ಖಾಸಗಿ ಔಷಧಿಗಳಲ್ಲೂ ಈಗ ಜನರಿಕ್‌ ಔಷಧಿ ಮಾರಾಟವಾಗುತ್ತಿರುವ ದೂರುಗಳಿವೆ. ಜನರಿಕ್‌ ಔಷಧಿಗಳ ದರ ಬಹಳ ಕಡಿಮೆ ಇರುವುದರಿಂದ ಔಷಧಿ ಪೂರೈಸುವ ಏಜೆಂಟರು ಖಾಸಗಿ ಔಷಧಿ ಅಂಗಡಿಗಳಿಗೆ ಜನರಿಕ್‌ ಔಷಧಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಈ ಔಷಧಿಗಳು ಮಾರಾಟವಾದರೆ ಭಾರೀ ಪ್ರಮಾಣದ ಲಾಭವಾಗುವುದರಿಂದ ಔಷಧಿ ಅಂಗಡಿಗಳ ವ್ಯಾಪಾರಸ್ಥರು ಜನರಿಕ್‌ ಔಷಧಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಜನರಿಕ್‌ ಔಷಧಿ ಮಳಿಗೆಗಳತ್ತ ಜನರು ಔಷಧಿ ಖರೀದಿಗೆ ಬರುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಜನರಿಕ್‌ ಔಷಧಿ ಕೇಂದ್ರದ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಇತ್ತೀಚೆಗೆ ಬೇಡಿಕೆ ಬರುತ್ತಿದೆ: ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರದಲ್ಲಿ ಮಾರಾಟ ವಾಗುವು ಔಷಧಗಳು ಮೂರು ಹಂತದಲ್ಲಿ ಗುಣ ಮಟ್ಟದ ಪರೀಕ್ಷೆಯಾಗಿ ಮಾರಾಟಕ್ಕೆ ಬರುತ್ತವೆ. ಹಾಗಾಗಿ ಖಾಸಗಿ ಕಂಪನಿಗಳ ಔಷಧಿಗಳ ಗುಣ ಮಟ್ಟಕ್ಕೇನೂ ಜನರಿಕ್‌ ಔಷಧಿಗಳು ಕಡಿಮೆಯಿಲ್ಲ. ಪ್ರಾರಂಭದಲ್ಲಿ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಬರುತ್ತಿದ್ದು, ನಮ್ಮ ಔಷಧಿ ಕೇಂದ್ರದಲ್ಲಿ ಖರೀದಿ ಮಾಡಿದವರು ಕಾಯಂ ಆಗಿ ಔಷಧಿ ಖರೀದಿಗೆ ಬರುತ್ತಿದ್ದಾರೆ.

ಜೊತೆಗೆ ಹೊಸಬರನ್ನೂ ಕರೆತರುತ್ತಿ ದ್ದಾರೆ. ಒಂದು ವರ್ಷ ನಷ್ಟವಾದರೂ ಲಾಗ ಲಾಭ ದಾಯವಾಗಿ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರ ನಡೆಯುತ್ತಿದೆ ಎಂದು ಹೇಳುತ್ತಾರೆ ನಗರದ ಸಾಲಗಾಮೆ ರಸ್ತೆ ಅರಳೀಕಟ್ಟೆ ಸರ್ಕಲ್ನಲ್ಲಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧ ಕೇಂದ್ರದ ಮಾಲೀಕ ಬಾಲಸುಬ್ರಹ್ಮಣ್ಯಂ ಅವರು.

ವ್ಯತ್ಯಾಸವೇನೂ ಕಾಣುವುದಿಲ್ಲ: ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಬಹಳ ವರ್ಷಗಳಿಂದ ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧಿ ಖರೀದಿಸುತ್ತಿದ್ದ ನಾನು ಕಳೆ ದೊಂದು ವರ್ಷದಿಂದ ಜನರಿಕ್‌ ಔಷಧಿಗಳನ್ನು ಸೇವಿ ಸುತ್ತಿದ್ದೇನೆ. ಆದರೆ ವ್ಯತ್ಯಾಸವೇನೂ ಕಾಣುತ್ತಿಲ್ಲ. ರಕ್ತ ದೊತ್ತಡ ಮತ್ತು ಮಧುಮೇಹದಲ್ಲಿ ವ್ಯತ್ಯಾಸವೇನೂ ಕಾಣದಿದ್ದರಿಂದ ವೈದ್ಯರೂ ಜನರಿಕ್‌ ಬಳಸಬಹು ದೆಂದು ಹೇಳಿದ್ದಾರೆ ಎನ್ನುತ್ತಾರೆ ಕರಿಯಣ್ಣ .

● ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next