Advertisement

ಜೆನೆರಿಕ್‌ ಔಷಧಿ ಅತಿದೊಡ್ಡ  ಕೊಡುಗೆ

05:07 PM Jun 23, 2018 | |

ಹಾರೂಗೇರಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಆರೋಗ್ಯ ರಕ್ಷಣೆಗಾಗಿ ಕಡಿಮೆ ದರದಲ್ಲಿ ಜೆನೆರಿಕ್‌ ಔಷಧಗಳನ್ನು ಸಿಗುವಂತೆ ಮಾಡಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸ್ವಸ್ಥ ಸಮಾಜಕ್ಕಾಗಿ ಜೆನೆರಿಕ್‌ ಔಷಧಗಳನ್ನು ಬಳಸಬೇಕೆಂದು ಕುಡಚಿ ಶಾಸಕ ಪಿ.ರಾಜೀವ್‌ ಹೇಳಿದರು.

Advertisement

ಪಟ್ಟಣದ ಅಥಣಿ-ಗೋಕಾಕ ಮುಖ್ಯ ರಸ್ತೆಯಲ್ಲಿ ಜನಶ್ರೀ ಸ್ವಸ್ಥ ಔಷಧ ಸೇವಾಕೇಂದ್ರ ಜೆನೆರಿಕ್‌ ಔಷಧ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದುಡ್ಡಿದ್ದರೆ ಮಾತ್ರ ಆರೋಗ್ಯ ಎನ್ನುವಂತಾಗಿದೆ. ಔಷಧ ಕಂಪನಿಗಳು ಔಷಧಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಬಡವರಿಗೆ ಔಷಧಗಳು ಕೈಗೆಟುಕುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದ ಜೆನೆರಿಕ್‌ ಔಷಧಗಳು ಮಾರುಕಟ್ಟೆ ದರಕ್ಕಿಂತ ಪ್ರತಿಶತ 30 ರಿಂದ 70ರಷ್ಟು ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಜೆನೆರಿಕ್‌ ಕಾರ್ಟ್‌ ಜಿಲ್ಲಾ ಮುಖ್ಯಸ್ಥ ಶಿವಕುಮಾರ ಸವಸುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿ, ಔಷಧ ಕಂಪನಿಗಳು ಹೆಚ್ಚು ಬೆಲೆ ಪಡೆಯುವುದರ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡುತ್ತಿವೆ. ಆ ನಿಟ್ಟಿನಲ್ಲಿ ಔಷಧಗಳ ಮಾರಾಟದಲ್ಲಿ ಕಂಪನಿಗಳ ದೊಡ್ಡ ಲೂಟಿ ನಡೆಯುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಇಂಚಲಶ್ರೀ ಶಿವಾನಂದಭಾರತಿ ಸ್ವಾಮೀಜಿ ಮಾತನಾಡಿ, ಗುಣಮಟ್ಟದ ಜೆನೆರಿಕ್‌ ಔಷಧಗಳನ್ನು ಬಳಸಿ, ಆರೋಗ್ಯವಂತರಾಗಿ ಬಾಳಬೇಕು ಎಂದರು. ಗೋಕಾಕ ಕೆಎಲ್‌ ಇಯ ಡಾ|ಡಿ.ಜಿ.ಚೌಗಲಾ, ಸೇವಾಕೇಂದ್ರದ ಮುಖ್ಯವಲಯಾಧಿಕಾರಿ ಪಂಕಜ ಖಡೆಡ, ಅಣ್ಣಾಸಾಹೇಬ ಚೌಗುಲೆ, ಡಾ|ಶಿವಾನಂದ ಪಾಟೀಲ, ಕಲಗೌಡ ಪಾಟೀಲ, ಡಾ|ಸೋಮನಗೌಡ ಪಾಟೀಲ, ಡಾ|ಬಸವರಾಜ ಹೊಸಪೇಟಿ, ಡಾ|ಬಿ. ಎಂ.ಚಿಂಚಲಿಕರ, ಸಿದಗೌಡ ಪಾಟೀಲ, ಪರಗೌಡ ಉಮರಾಣಿ, ಶ್ರೀಕಾಂತ ಠಕ್ಕಣ್ಣವರ, ವಿಶ್ವನಾಥ ಪಾಟೀಲ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next