Advertisement

ಜನರೇಶನ್‌ ಗ್ಯಾಪ್‌

06:00 AM Dec 29, 2017 | |

ಸುಮಾರು 1990-2000ದ ಪುಟಾಣಿಗಳಾದ ನಾವು ಈಗ ಈ ಸಮಾಜದ ಯುವಪೀಳಿಗೆ ಎಂದು ಕರೆಯಿಸಿಕೊಳ್ಳುತ್ತೇವೆ. ನಮ್ಮ ಬಾಲ್ಯಕ್ಕೂ ಇಂದಿನ ಪುಟಾಣಿಗಳ ಬಾಲ್ಯಕ್ಕೂ ತುಂಬ ಅಂತರಗಳ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈಗ ಸ್ಮಾರ್ಟ್‌ಫೋನುಗಳ ಕಾಲ. ಎಲ್ಲರದ್ದೂ ಸ್ಟಾರ್ಟ್‌ ಲೈಫ್, ಎಲ್ಲವೂ ಕೂಡ ತಂತ್ರಜ್ಞಾನದಿಂದ ಕೂಡಿದೆ.

Advertisement

ನಮ್ಮ ಹಿಂದಿನ ಜನರೇಶನ್‌ ಬಗ್ಗೆ ಹೇಳುವುದಾದರೆ, ಅಂದು ಯಾರೊಬ್ಬರು ತಮ್ಮ ಮಕ್ಕಳಿಗೆ ಶಾಲೆಗೆ ಹೋಗು ಎಂದು ಒತ್ತಾಯ ಮಾಡಿದವರಲ್ಲ. ಅಂದು ಶಿಕ್ಷಣದ ಮೌಲ್ಯವನ್ನು ಅರಿತವರು ಅಷ್ಟಕ್ಕಷ್ಟೆ . ನಮ್ಮ ಬಾಲ್ಯದಲ್ಲಿ ಇದು ಕಂಡುಬಂದಿಲ್ಲ. ನಮ್ಮ ತಂದೆ-ತಾಯಿಗೆ ತಾವು ಶಿಕ್ಷಣ ಪಡೆಯದಿದ್ದರೂ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಸೆಯಿತ್ತು. ಹೀಗಾಗಿ ಕಷ್ಟಪಟ್ಟು ನಮಗೆ ಉನ್ನತ ಶಿಕ್ಷಣವನ್ನು ದೊರಕಿಸಿಕೊಟ್ಟರು.

ನಮ್ಮ ಹಿಂದಿನ ಪೀಳಿಗೆಯವರ ತಂದೆ-ತಾಯಿಗಳಂತೆ ನಮ್ಮ ತಂದೆ-ತಾಯಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಇಲ್ಲದಿದ್ದಲ್ಲಿ ನಮಗೆ ಆ ಶಾಲೆಯ ದೊಡ್ಡ ಚೀಲವನ್ನು ಹೊತ್ತುಕೊಂಡು ಹೋಗುವ ಆವಶ್ಯಕತೆ ಇರುತ್ತಿರಲಿಲ್ಲ. ಹಾಗಾಗಿದ್ದರೆ, ಜೀವನ ತುಂಬಾ ಸುಲಭವಾಗಿರುತ್ತಿತ್ತು ಅನಿಸುತ್ತದೆ. ಎಕ್ಸಾಮ್ಸ್‌ , ರ್‍ಯಾಂಕ್ಸ್‌ , ಕ್ಲಾಸಸ್‌ ಬಗ್ಗೆ ಯಾವುದೇ ಟೆನ್‌ಷನ್‌ ಇರುತ್ತಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಶಿಕ್ಷಣವಿಲ್ಲದೆ ಜೀವನ ನಡೆಸುವುದು ತುಂಬಾ ಕಷ್ಟದ ಕೆಲಸವೇ ಸರಿ. ಎಷ್ಟೇ ಡಿಗ್ರಿಗಳು ಇದ್ದರೂ ಅದು ಕಡಿಮೆಯೆ. ಇನ್ನು ನಮ್ಮ ಬಾಲ್ಯಕ್ಕೂ ಈಗಿನ ಮಕ್ಕಳ ಬಾಲ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿದರೆ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ನಾವು ಹುಟ್ಟಿದಾಗ ಮೊಬೈಲ್‌ ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಆದರೆ ಇಂದು ಕೈಯಲ್ಲಿ ಮೊಬೈಲ್‌ ಇದ್ದರೆ ಮಾತ್ರ ಮಗು ಊಟ ಮಾಡಲು, ತಿಂಡಿ ತಿನ್ನಲು ಕೇಳುತ್ತದೆ. 

ಇಂದಿನ ಮಕ್ಕಳನ್ನು ಪಾಪ ಹುಟ್ಟಿದ ಕೆಲವೇ ಸಮಯದಲ್ಲಿ ಪ್ರೀಸ್ಕೂಲ್‌ಗೆ ಕಳುಹಿಸುತ್ತಾರೆ. ನಾವಂತೂ ಇದರಿಂದ ತಪ್ಪಿಸಿಕೊಂಡಿದ್ದೇವೆ. ಇನ್ನು ಮುಂದೆ ಮಗು ಹುಟ್ಟುವ ಮುಂಚೆಯೇ ತಂದೆ-ತಾಯಿ ಮಗುವಿನ ಅಡ್ಮಿಷನ್‌ ಮಾಡುವ ಸಿಸ್ಟಮ್‌ ಬಂದರೂ ಆಶ್ಚರ್ಯಪಡಬೇಕಾಗಿಲ್ಲ.ನಮ್ಮ ಹಿರಿಯರು ಮರಕೋತಿ, ಚೆನ್ನೆಮಣೆ ಆಟವಾಡಿ ಸಮಯ ಕಳೆದರು. ನಾವು ಹಾವು-ಏಣಿ ಆಟ, ಕಣ್ಣಾಮುಚ್ಚಾಲೆ ಆಟ ಆಡಿದರೆ ಇಂದಿನ ಮಕ್ಕಳು ಕೇವಲ ಮೊಬೈಲ್‌ ಗೇಮ್‌ನಲ್ಲಿ ತೊಡಗಿರುತ್ತಾರೆ.

ಪರಿಸರದ ಬಗ್ಗೆ ಹೇಳುವುದಾದರೆ, ನಮ್ಮ ಪೂರ್ವಜರ ಕಾಲದಲ್ಲಿ ಎಲ್ಲವೂ ಹಸಿರಾಗಿತ್ತು. ಆದರೆ ಇಂದು ಬೆಳೆಯುತ್ತಿರುವ ತಂತ್ರಜ್ಞಾನದ ಪರಿಣಾಮದಿಂದಾಗಿ ಪರಿಸರ ಏನಿದ್ದರೂ ಅಷ್ಟಕ್ಕಷ್ಟೇ. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆಯೋ ಎಂದು ಹೇಳಲಾಗದು. ಮುಂದಿನ ಪೀಳಿಗೆಗೆ ಮರ, ಗಿಡ, ಪಕ್ಷಿ, ಪ್ರಾಣಿಗಳನ್ನು ಭಾವಚಿತ್ರಗಳಲ್ಲಿ ನೋಡುವಂತಾಗಬಹುದೇನೋ?

Advertisement

– ಸುಶ್ಮಿತಾ ಶಿವ
ದ್ವಿತಿಯ ಎಂ.ಕಾಂ.
ಡಾ| ಜಿ. ಶಂಕರ್‌ ಮಹಿಳಾ ಕಾಲೇಜು, ಅಜ್ಜರಕಾಡು

Advertisement

Udayavani is now on Telegram. Click here to join our channel and stay updated with the latest news.

Next