Advertisement

ಕಂದಾಯ ಅಧಿಕಾರಿಗಳ ವಿಳಂಬ ನೀತಿಗೆ ಸದಸ್ಯರ ಅಸಮಾಧಾನ

11:29 PM Jan 16, 2021 | Team Udayavani |

ಸುಳ್ಯ: ಕಂದಾಯ ಇಲಾಖೆ ಅಧಿಕಾರಿಗಳ ವಿಳಂಬ ನೀತಿಗೆ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾ.ಪಂ.ನ ಸಾಮಾನ್ಯ ಸಭೆಯು ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಐವತ್ತೂಕ್ಲು ಗ್ರಾಮದ ಸರ್ವೇ ನಂಬರ್‌ 6 ಮತ್ತು 7 ರಲ್ಲಿ ಸುಮಾರು 12 ಕುಟುಂಬಗಳು ವಾಸಿಸುತ್ತಿದ್ದು ಸ್ಥಳ ಸರ್ವೇಗೆ ತಹಶೀಲ್ದಾರರು 3 ತಿಂಗಳ ಹಿಂದೆಯೇ ದಿನ ನಿಗದಿ ಪಡಿಸಿದ್ದರು. ಆದರೆ ಈ ಕುರಿತು ಕಂದಾಯ ಆಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರಿಯಲ್ಲ ಎಂದು ತಾ.ಪ.ಂ ಸದಸ್ಯ ಅಬ್ದುಲ್‌ ಗಫೂರ್‌ ಕಲ್ಮಡ್ಕ ತಮ್ಮ ಅಸಮಾಧಾನ ಹೊರಹಾಕಿದರು.

ಚನಿಯ ಕಲ್ತಡ್ಕ ಮಾತನಾಡಿ, 15 ದಿನಗಳೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಇಲಾಖೆಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಅನಿತಾಲಕ್ಷ್ಮೀ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೆಳ್ಳಾರೆಯ ಅಂಬೇಡ್ಕರ್‌ ಭವನದ ಅಡಿ ಸ್ಥಳದ ಜಾಗವನ್ನು ಮಂಜೂರು ಮಾಡಲು ಬೆಳ್ಳಾರೆ ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿಗಳು ಸುಳ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದು ಶೀಘ್ರ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕೆಂದು ಕಲ್ತಡ್ಕ ತಿಳಿಸಿದರು.

Advertisement

 ನಿವೇಶನ ಇಲ್ಲ :  

ನೆರೆಯಿಂದಾಗಿ ಮನೆ ಕಳೆದುಕೊಂಡು ವರ್ಷ ಕಳೆದರೂ ನಿವೇಶನ ಮಂಜೂರಾಗದ ಬಗ್ಗೆ ಆಬ್ದುಲ್‌ ಗಫೂರ್‌ ಆಕ್ರೋಶ ವ್ಯಕ್ತ ಪಡಿಸಿದರು. ದೊಡ್ಡತೋಟ ಬಳಿ ಇರುವ ಹಳೆಯ ಗ್ರಾಮ ಸೇವಕರ ವಸತಿ ಕೇಂದ್ರದ ಜಾಗದಲ್ಲಿ ಆವಶ್ಯಕತೆಯಿರುವ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಧಾಕೃಷ್ಣ ಬೊಳ್ಳೂರು ಆಗ್ರಹಿಸಿದರು. ನದಿ-ಹೊಳೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಮೇಲಕ್ಕೆ ಬಂದಿದ್ದು ಮರಳು ತೆಗೆಯುವ ಕುರಿತ ಅನುಮತಿ ಬಗ್ಗೆ ರಾಧಕೃಷ್ಣ ಬೊಳ್ಳೂರು ಪ್ರಶ್ನಿಸಿದರು. ಜಿಲ್ಲಾಡಳಿತದಿಂದ ಕೂತ್ಪುಂಜ, ಕೊಲ್ಲಮೊಗ್ರ ಮತ್ತು ಉಬರಡ್ಕ ಮಿತ್ತೂರಿನಲ್ಲಿ ಮರಳು ತೆಗೆಯಲು ಅನುಮತಿ ಸಿಕ್ಕಿದೆ. ಆದರೆ ಮೀಸಲು ಜಾಗ, ಕಿಂಡಿ ಅಣೆಕಟ್ಟು, ಸೇತುವೆಗಳಿರುವ ವ್ಯಾಪ್ತಿಗಳ ಅನುಮತಿಯನ್ನು ತಿರಸ್ಕರಿಸಲಾಗಿದೆ ಎಂದು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ ತಿಳಿಸಿದರು.

ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next