Advertisement
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎ.ಗೋವಿಂದ ಪ್ರಭು, ಆರೋಗ್ಯ ನಿರೀಕ್ಷಕರು ಬರೆದಿಟ್ಟ ಡೆತ್ ನೋಟ್ ಮಾಧ್ಯಮಕ್ಕೆ ಹೋಗಿ ಪುರ ಸಭೆಯ ಮರ್ಯಾದೆ ಹರಾಜು ಆಗಿದೆ. ಅದನ್ನು ಮಾಧ್ಯಮಕ್ಕೆ ನೀಡಿದವರು ಯಾರು? ಅದರ ತನಿಖೆ ಯಾವ ಹಂತಕ್ಕೆ ಬಂದಿದೆ ಎಂದು ಪ್ರಶ್ನಿಸಿದರು.
Related Articles
Advertisement
ಪ್ರಧಾನಮಂತ್ರಿ ಅವಾಸ್ ಯೋಜನೆ ಯಲ್ಲಿ ಮನೆ ಅಂತಿಮ ಹಂತಕ್ಕೆ ಬಂದಿದ್ದರೂ, ಹಣ ಬಿಡುಗಡೆಯಾಗಿಲ್ಲ ಎಂದು ಸದಸ್ಯ ಗಂಗಾಧರ ಪೂಜಾರಿ ತಿಳಿಸಿದರು. ಈ ಕುರಿತು ಶಾಸಕರು, ಜಿಲ್ಲಾಧಿಕಾರಿಗಳು, ರಾಜೀವ ಗಾಂಧಿ ವಸತಿ ನಿಗಮಕ್ಕೂ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ರಿಜೆಕ್ಟ್ ಮಾಡಲು ಸಾಧ್ಯವಿಲ್ಲ :
ಹಿಂದೊಮ್ಮೆ ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿ ತೆರಳಿರುವ ಗುತ್ತಿಗೆದಾರರೊಬ್ಬರು ಈಗ ಮತ್ತೆ ಮತ್ತೂಂದು ಕಾಮಗಾರಿಗೆ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ್ದಾರೆ ಎಂದು ಎಂಜಿನಿಯರ್ ಸಭೆಗೆ ತಿಳಿಸಿದಾಗ, ಅವರನ್ನು ಬ್ಲಾÂಕ್ ಲಿಸ್ಟ್‌ಗೆ ಹಾಕದೆ ಅವರ ಟೆಂಡರ್ ರಿಜೆಕ್ಟ್ ಮಾಡಲು ಸಾಧ್ಯವಿಲ್ಲ ಎಂದು ಸದಸ್ಯ ಲುಕಾ¾ನ್ ಆಗ್ರಹಿಸಿದರು. ಅವರ ಬಳಿ ಹಿಂದಿನ ಕಾಮಗಾರಿಯನ್ನೂ ಮಾಡಿಸಿ ಎಂದು ಸದಸ್ಯ ವಾಸು ಪೂಜಾರಿ ಆಗ್ರಹಿಸಿದರು.
ಪುರಸಭೆಯಲ್ಲಿ ಪ್ರಸ್ತುತ ಎಷ್ಟು ಮಂದಿ ಪೌರ ಕಾರ್ಮಿಕರಿದ್ದಾರೆ, ಅವರು ಸಮರ್ಪಕವಾಗಿ ಕೆಲಸಕ್ಕೆಬರುತ್ತಿದ್ದಾರೆಯೇ, ನಾವು ಅವರ ಬಳಿ ಕೆಲಸ ಹೇಳಿದರೆ ಬೇರೆ ಬೇರೆ ಕಾರಣ ಕೊಟ್ಟು ತಪ್ಪಿಸುತ್ತಿದ್ದಾರೆ ಎಂದು ಸದಸ್ಯ ಮೊಹಮ್ಮದ್ ನಂದರಬೆಟ್ಟು ತಿಳಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ಕಸದ ರಾಶಿಗಳು ಕಂಡುಬರುತ್ತಿದೆ ಎಂದು ಸದಸ್ಯರಾದ ರಾಮಕೃಷ್ಣ ಆಳ್ವ, ಮುನೀಶ್ ಆಲಿ, ವಾಸು ಪೂಜಾರಿ ತಿಳಿಸಿದರು. ಜತೆಗೆ ಕಸ ವಿಲೇವಾರಿ ವಾಹನ ಬರುವ ವಿಚಾರ ಏನಾಯಿತು ಎಂದು ಸದಸ್ಯರು ಪ್ರಶ್ನಿಸಿದಾಗ, ಅದಕ್ಕೆ ತಾಂತ್ರಿಕ ಮಂಜೂರಾತಿ ಸಿಕ್ಕಿಲ್ಲ ಎಂದು ಎಂಜಿನಿಯರ್ ತಿಳಿಸಿದಾಗ ಮುಖ್ಯಾಧಿಕಾರಿಗಳು ಈ ಕುರಿತು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಮನೆ ಮನೆ ಕಸ ಸಂಗ್ರಹಿಸುವವರೆಗೆ ತೆರಿಗೆ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಸದಸ್ಯರು ಆಗ್ರಹಿಸಿದಾಗ, ಅದನ್ನು ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಅಧ್ಯಕ್ಷರು ತಿಳಿಸಿದರು.
ಮೂರು ನೋಟಿಸ್ ಬಳಿಕ ಕ್ರಮ :
ಪುರಸಭಾ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್(ಎಸ್‌ಟಿಪಿ)ಗಳ ಕುರಿತು ಸದಸ್ಯ ಲುಕಾ¾ನ್ ಸಭೆಯ ಗಮನ ಸೆಳೆದಿದ್ದು, ಎಸ್‌ಟಿಪಿಗಳಿಲ್ಲದೆ ಸಮುಚ್ಚಯಗಳಿಗೆ ಪುರಸಭೆಯಿಂದ ಮೂರು ನೋಟಿಸ್ ಕೊಡುತ್ತೇವೆ. ಅದಕ್ಕೆ ಅವರು ಉತ್ತರಿ ಸದೇ ಇದ್ದಲ್ಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿ ಕ್ರಮಕೈಗೆದುಕೊಳ್ಳಲಾಗುತ್ತದೆ ಎಂದರು.
ಎಲ್ಲರೂ ಕೂಡ ತಮ್ಮ ಕೊಳಚೆಯನ್ನು ನೇರವಾಗಿ ತೋಡಿಗೆ ಬಿಡುತ್ತಿದ್ದಾರೆ ಎಂದು ಸದಸ್ಯರು ಸಭೆ ತಿಳಿಸಿದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ
ಜ. 16ಕ್ಕೆ ಯೋಜನ ನಿರ್ದೇಶಕರ ಭೇಟಿ :
ಪುರಸಭೆಯ ನೀರಿನ ಯೋಜನೆಯ ಅವ್ಯವಸ್ಥೆಯ ಕುರಿತು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದ್ದು, ಲೀಕೇಜ್, ಗೇಟ್‌ವಾಲ್ ದುರಸ್ತಿ ಮಾಡಿದ್ದಾರೆ ಎಂದು ಎಂಜಿನಿಯರ್ ಡೊಮಿನಿಕ್ ಡೆಮೆಲ್ಲೊ ಸಭೆಗೆ ತಿಳಿಸಿದರು. ಅದರ ವರದಿ ನೀಡುವಂತೆ ಗೋವಿಂದ ಪ್ರಭು ಆಗ್ರಹಿಸಿದರು. ಜಿಲ್ಲಾಧಿಕಾರಿಗಳು ಬಂದು ಹೋದ ಬಳಿಕವೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಸದಸ್ಯ ಗಂಗಾಧರ ಪೂಜಾರಿ ಹೇಳಿದರು. ಈ ಎಲ್ಲ ವಿಚಾರಗಳನ್ನು ಜಿಲ್ಲಾ ಯೋಜನ ನಿರ್ದೇಶಕರಿಗೆ ತಿಳಿಸಲಾಗಿದ್ದು, ಅವರು ಜ. 16ರಂದು ಭೇಟಿ ನೀಡಿ ಸಭೆ ನಡೆಸುವ ಕುರಿತು ತಿಳಿಸಿದ್ದಾರೆ ಎಂದು ಅಧ್ಯಕ್ಷರು ವಿವರಿಸಿದರು. ಪೈಪ್ ದುರಸ್ತಿಯ ಕುರಿತು 26 ಸಾವಿರ ರೂ. ಬಿಲ್ ಆಗಿರುವುದಕ್ಕೆ ಸದಸ್ಯ ಮುನೀಶ್ ಆಲಿ ಅಸಮಾಧಾನ ವ್ಯಕ್ತಪಡಿಸಿದರು.