Advertisement

Tyler Christopher: ಹೃದಯ ಸ್ತಂಭನದಿಂದ ಖ್ಯಾತ ನಟ ಟೈಲರ್ ಕ್ರಿಸ್ಟೋಫರ್ ನಿಧನ

12:00 PM Nov 01, 2023 | Team Udayavani |

ನವದೆಹಲಿ: ಹೃದಯ ಸ್ತಂಭನವಾಗಿ ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್(50) ನಿಧನರಾಗಿದ್ದಾರೆ ಎಂದು ನಟ ಮಾರಿಸ್ ಬೆನಾರ್ಡ್ ಅವರು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

Advertisement

ಸ್ಯಾನ್ ಡಿಯಾಗೋ ಅಪಾರ್ಟ್ಮೆಂಟ್ ನಲ್ಲಿ  ಟೈಲರ್ ಕ್ರಿಸ್ಟೋಫರ್‌ ನಿಧನರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

“ಟೈಲರ್ ಕ್ರಿಸ್ಟೋಫರ್ ಅವರ ನಿಧನದ ಸುದ್ದಿಯನ್ನು ನಾವು ಬಹಳ ದುಃಖದಿಂದ ಹಂಚಿಕೊಳ್ಳುತ್ತೇನೆ. ಟೈಲರ್ (ಅ.31 ರಂದು, ಮಂಗಳವಾರ) ಬೆಳಿಗ್ಗೆ ಅವರ ಸ್ಯಾನ್ ಡಿಯಾಗೋ ಅಪಾರ್ಟ್ಮೆಂಟ್ ನಲ್ಲಿ ಹೃದಯ ಸ್ತಂಭನವಾಗಿ ನಿಧನರಾದರು. ಟೈಲರ್ ಯೊಬ್ಬ ಪ್ರತಿಭಾವಂತ ವ್ಯಕ್ತಿಯಾಗಿದ್ದು, ಅವರು ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಮಿಂಚಿದರು. ಅವರು ನಟನೆಯಿಂದ ಅಭಿಮಾನಿಗಳಲ್ಲಿ ಸಂತೋಷವನ್ನು ತರುತ್ತಿದ್ದರು. ಟೈಲರ್ ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಒಳಗಾಗಬೇಕಿತ್ತು. ಅವರು ಬೈಪೋಲಾರ್ ಖಿನ್ನತೆ ಮತ್ತು ಮದ್ಯಚಟದಿಂದಾದ ಕಷ್ಟದ ಬಹಿರಂಗವಾಗಿ ಮಾತನಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಮಾರಿಸ್ ಬೆನಾರ್ಡ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಜನರಲ್ ಹಾಸ್ಪೆಟಲ್‌ʼ ಮೂಲಕ ಖ್ಯಾತಿಗಳಿಸಿದ್ದ ಟೈಲರ್ ಕ್ರಿಸ್ಟೋಫರ್ ʼ ನಿಕೋಲಸ್ ಕ್ಯಾಸಡೈನ್ (1996 ರಿಂದ 2016) ಕಾನರ್ ಬಿಷಪ್ (2004 to 2005) ಪಾತ್ರದ ಮೂಲಕ ಜನಪ್ರಿಯರಾಗಿದ್ದರು. ‘ಡೇಸ್ ಆಫ್ ಅವರ್ ಲೈವ್ಸ್’ ನಲ್ಲಿ ಸ್ಟೀಫನ್ ಡಿಮೆರಾ ಅವರ ಪಾತ್ರವನ್ನು ಅನೇಕರು ಮೆಚ್ಚಿಕೊಂಡಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next