ಕೋವಿಡ್ ಸೋಂಕಿನ ಎರಡನೇ ಅಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಆರೋಗ್ಯ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಉತ್ತಮ, ಮತ್ತು ಅಗತ್ಯವೂ ಕೂಡ ಹೌದು. ಅದರಲ್ಲೂ ಗರ್ಭ ಧರಿಸಿರುವವರು ಅತಿಯಾದ ಆರೋಗ್ಯ ಕಾಳಜಿ ವಹಿಸುವುದು ಬಹು ಮುಖ್ಯವಾಗಿದೆ.
ಯುನಿಸೆಫ್ ಹೇಳುವ ಪ್ರಕಾರ, ಕೋವಿಡ್ ಸೋಂಕು ಮಗುವಿನ ಜನನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ.
ಗರ್ಭಿಣಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಅತಿ ಬೇಗವಾಗಿ ಸೋಂಕು ಹರಡುವ ಸಾಧ್ಯತೆ ಇದೆ ಹಾಗಾಗಿ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಐಸಿಎಂ ಆರ್ ಮಾಹಿತಿ ನೀಡಿದೆ.
ಓದಿ : ಕಠಿಣ ನಿಯಮಗಳ ಜಾರಿಗೆ ವಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕು : ಡಾ.ಕೆ.ಸುಧಾಕರ್
ಐ ಸಿ ಎಂ ಆರ್ ಸಾಕ್ಷ್ಯಗಳ ಪ್ರಕಾರ, ಗರ್ಭಿಣಿಯರಲಲಿ ಸೋಂಕಿನ ಪ್ರಸರಣ ಹೆಚ್ಚಾಗಿ ಆಗುವ ಸಾದ‍್ಯತೆ ಇದೆ ಎಂದು ಹೇಳಿದ್ದು, ಗರ್ಭಧಾರಣೆಯ ಪ್ರಮಾಣದ ಮೇಲೆ ಇದೆಲ್ಲವೂ ಪರಿಣಾಮ ಬೀರುತ್ತದೆ. ಪ್ರಸ್ತುತ ಕೋವಿಡ್ 19, ಯೋನಿ ಸ್ರವಿಸುವಿಕೆ ಅಥವಾ ಎದೆ ಹಾಲನ್ನು ಧನಾತ್ಮಕವಾಗಿ ಪರೀಕ್ಷಿಸಿದ ಯಾವುದೇ ಪ್ರಕರಣಗಳಿಲ್ಲ. ಆದರೂ ಸೋಂಕಿನಿಂದ ಗರ್ಭಿಣಿಯರು ಹೆಚ್ಚು ಜಾಗೃತರಾಗಿರುವುದು ಅಗತ್ಯ ಏಕೆಂದರೆ ಇದು ಮಗುವಿನ ಭವಿಷ್ಯದ ಪ್ರಶ್ನೆಯಾಗಿದೆ.
ಗರ್ಭಿಣಿಯವರು ಅನುಸರಿಸಬೇಕಾದ ಪ್ರಮುಖ ಕೋವಿಡ್ ಕ್ರಮಗಳು :
- ಸಾಧ್ಯವಾದಷ್ಟು ಮನೆಯಲ್ಲೇ ಸುರಕ್ಷಿತವಾಗಿರಿ. ಇತರರೊಂದಿಗೆ ಸಂಪರ್ಕ್ ಹೊಂದಬೇಡಿ.
- ಕನಿಷ್ಠ 1 ಮೀಟರ್ ಅಂತರವನ್ನು ಕಾಪಾಡಿಕೊಳ್ಳಿ
- ಆಗಾಗ ಕೈಗಳನ್ನು ಸೋಪಿನಿಂದ ತೊಳೆಯಿರಿ
- ಕಣ್ಣು, ಮೂಗು ಪದೇ ಪದೇ ಸ್ಪರ್ಶಿಸುವುದನ್ನು ಕಡಿಮೆ ಮಾಡಿ. ಕಣ್ಣು, ಮೂಗು, ಬಾಯಿಯನ್ನು ಸ್ಪರ್ಶಸುವಾಗ ಶುಭ್ರ ಕರವಸ್ತ್ರವನ್ನು ಬಳಸುವುದು ಉತ್ತಮ .
ಇನ್ನು, ಗಮನಾರ್ಹ ವಿಚಾರವೆಂದರೆ 2020ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಗರ್ಭಿಣಿಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೇ ಈ ವರ್ಷ ಜನವರಿ ತಿಂಗಳಿನಿಂದ ಇಲ್ಲಿವರಗೆ ದೇಶದಾದ್ಯಂತ ಗರ್ಭಿಣಿಯರ ಸಂಖ್ಯೆಯಲ್ಲಿ ಶೇಕಡಾ 10ರಿಂದ 20ರಷ್ಟು ಹೆಚ್ಚಳವಾಗಿದೆ. ಐವಿಎಫ್ ಅಥವಾ ಕೃತಕ ಗರ್ಭಧಾರಣೆಯ ಪ್ರಮಾಣದಲ್ಲಿ ಮಾತ್ರ ಶೇಕಡಾ 80ರಿಂದ 90ರಷ್ಟು ಇಳಿಕೆಯಾಗಿದೆ, ನೈಸರ್ಗಿಕ ಗರ್ಭಧಾರಣೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಓದಿ : 2020-21ನೇ ಹಣಕಾಸು ವರ್ಷದಲ್ಲಿ ಚಿನ್ನದ ಆಮದು ಶೇ. 22.58 ಏರಿಕೆ..!