Advertisement

ಪಾಕ್‌ ಮಹಾ ಚುನಾವಣೆ: ಸಯೀದ್‌ ಸ್ಪರ್ಧೆ ಇಲ್ಲ; 200 ಅಭ್ಯರ್ಥಿ ಕಣಕ್ಕೆ

11:34 AM Jun 09, 2018 | udayavani editorial |

ಲಾಹೋರ್‌ : ಮುಂದಿನ ತಿಂಗಳು ಜುಲೈ 25ರಂದು ಪಾಕಿಸ್ಥಾನದಲ್ಲಿ ನಡೆಯುವ ಮಹಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಸೀಟುಗಳಿಗಾಗಿ ಮುಂಬಯಿ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಹಾಫೀಜ್‌ ಸಯೀದ್‌ ತನ್ನ 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾನೆ.

Advertisement

ಆದರೆ ಸ್ವತಃ ತಾನು ಸಂಸತ್‌ ಚುನಾವಣಾ ಕಣಕ್ಕೆ ಅಭ್ಯರ್ಥಿಯಾಗಿ ಇಳಿಯುವುದಿಲ್ಲ ಎಂದು ಸಯೀದ್‌ ಹೇಳಿದ್ದಾನೆ. 

ಹಾಗಿದ್ದರೂ ಸಯೀದ್‌ ನ ಅಭ್ಯರ್ಥಿಗಳು ಸ್ಪರ್ಧಿಸುವುದು ಹೆಚ್ಚಿನವರಿಗೆ ತಿಳಿದೇ ಇಲ್ಲದ ಅಲ್ಲಾಹು ಅಕ್‌ಬರ್‌ ತೆಹರೀಕ್‌ (ಎಎಟಿ) ಎಂಬ ರಾಜಕೀಯ ಪಕ್ಷದ ಮೂಲಕ. ಏಕೆಂದರೆ ಸಯೀದ್‌ ಈಚೆಗೆ ಸ್ಥಾಪಿಸಿದ್ದ ಮಿಲ್ಲಿ ಮುಸ್ಲಿಂ ಲೀಗ್‌ (ಎಂಎಂಎಲ್‌) ಪಕ್ಷ ಈಗಿನ್ನೂ  ಪಾಕ್‌ ಚುನಾವಣಾ ಆಯೋಗದೊಂದಿಗೆ ನೋಂದಾಯಿಸಲ್ಪಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next