Advertisement
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಶುಕ್ರ ವಾರ ಸುದ್ದಿಗೋಷ್ಠಿಯಲ್ಲಿ ಕರಡು ಮತ ದಾರರ ಪಟ್ಟಿ ಪ್ರಕಟಿಸಿದ ಬಳಿಕ ಈ ಮಾಹಿತಿ ನೀಡಿದರು. ಭಾರತ ಚುನಾವಣ ಆಯೋ ಗದ ನಿರ್ದೇಶನದಂತೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 2024ರ ನ.1ರ ಅರ್ಹತಾ ದಿನಾಂಕದಂತೆ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪ್ರಗತಿ ಯಲ್ಲಿದೆ. ಈಗ 224 ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಮತ್ತು ವ್ಯಾಪ್ತಿಗೆ ಬರುವ ಎಲ್ಲ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
Related Articles
ಕರಡು ಮತದಾರರ ಪಟ್ಟಿಗೆ ಹಕ್ಕುಗಳು-ಆಕ್ಷೇಪಣೆ ಸಲ್ಲಿಸುವ ಅವಧಿ: ಅ.27 (ಶುಕ್ರವಾರದಿಂದ) ಡಿ.9 (ಶನಿವಾರ)
ವಿಶೇಷ ಅಭಿಯಾನದ ದಿನಾಂಕಗಳು: ನವೆಂಬರ್ 18 ಮತ್ತು 19 (ಶನಿವಾರ-ರವಿವಾರ) ಹಾಗೂ ಡಿಸೆಂಬರ್ 2 ಮತ್ತು3
ಹಕ್ಕುಗಳು ಮತ್ತು ಆಕ್ಷೇಪಣೆಗಳು ವಿಲೇವಾರಿ: ಡಿ.26
ಅಂತಿಮ ಮತದಾರರ ಪಟ್ಟಿ ಪ್ರಕಟ: 2024ರ ಜನವರಿ 5.
Advertisement
ಯಾವುದಕ್ಕೆ ಯಾವ ಅರ್ಜಿ?ಪ್ರತಿ ವಿಧಾನಸಭಾ ಕ್ಷೇತ್ರದ ನೋಂದಣಾಧಿಕಾರಿ/ಸಹಾಯಕ ನೋಂದಣಾಧಿಕಾರಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹೊಸದಾಗಿ ಪಟ್ಟಿಯಲ್ಲಿ ಹೆಸರು ಸೇರಿಸಲು ಫಾರಂ-6
ಸಾಗರೋತ್ತರ ಭಾರತೀಯ ಮತದಾರರು ಹೆಸರು ಸೇರಿಸಲು ಫಾರಂ 6ಎ
ಮತದಾರರ ಪಟ್ಟಿ ವಿವರಗಳ ದೃಢೀಕರಣಕ್ಕಾಗಿ ಆಧಾರ್ 12 ದಾಖಲೆಗಳ ಮಾಹಿತಿಗೆ ಫಾರಂ-6ಬಿ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಕ್ಷೇಪಣೆಗಾಗಿ, ಹೆಸರ ಅಳಿಸಿ ಹಾಕಲು ಫಾರಂ-7.
ವಿಳಾಸ ಬದಲಾವಣೆ, ಹೆಸರು, ವಿಳಾಸ ಇತ್ಯಾದಿಗಳ ತಿದ್ದುಪಡಿ, ಬದಲಿ ಮತದಾರರ ಗುರುತಿನ ಚೀಟಿಗಾಗಿ, ವಿಲಕಚೇತನ ಮತದಾರರನ್ನು ಗುರುತಿಸಲು ಫಾರಂ-8. 3.89 ಲಕ್ಷ ಡಿಲಿಟ್
ಈಗ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಬಳಿಕ ಮರಣ ಹೊಂದಿದ 1,27,703, ಸ್ಥಳಾಂತರಗೊಂಡ 2,38,617, ನಕಲಿ ಮತದಾರರು 21,480 ಸಹಿತ ಒಟ್ಟು 3,89,353 ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಈ ಅವಧಿಯಲ್ಲಿ 6.02 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಯಾಗಿ ದ್ದಾರೆ. ಹೆಸರು, ವಿಳಾಸ, ಫೋಟೋ, ವಯಸ್ಸು, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ ಮತ್ತಿತರ 6.39 ಲಕ್ಷ ತಿದ್ದುಪಡಿಗಳನ್ನು ಮಾಡಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು ಮತದಾರರ ಸೇವಾ ಪೋರ್ಟಲ್ https://voters.eci.gov.in ಅಥವಾ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಪ್ಲಿಕೇಷನ್ ಬಳಸಿ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಸ್ಥಳೀಯ ಚುನಾವಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೂ ಸಲ್ಲಿಸಬಹುದು. ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿದ್ದ ರಾಜಕೀಯ ಪಕ್ಷಗಳ ಏಜೆಂಟರು, ಸಾಮಾಜಿಕ ಸಂಘ-ಸಂಸ್ಥೆಗಳ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು. ಕರಡು ಮತದಾರರ ಪಟ್ಟಿ
ಒಟ್ಟು ಮತದಾರರು: 5,33,77,162 (5.33 ಕೋಟಿ)
ಪುರುಷರು: 2.68 ಕೋಟಿ
ಮಹಿಳೆಯರು: 2.65 ಕೋಟಿ
ಯುವ ಮತದಾರರು: 13.45 ಲಕ್ಷ
80 ವರ್ಷ ಮೇಲ್ಪಟ್ಟವರು: 11.76 ಲಕ್ಷ
ತೃತೀಯ ಲಿಂಗಿಗಳು: 4,896
ಸಾಗರೋತ್ತರ ಮತದಾರರು: 3,055
ಅಂಗವಿಕಲರ ಮತದಾರರು: 5.66 ಲಕ್ಷ
ಅತಿ ಹೆಚ್ಚು ಮತದಾರರು: ಬೆಂಗಳೂರು ದಕ್ಷಿಣ: 5.08 ಲಕ್ಷ
ಅತಿ ಕಡಿಮೆ ಮತದಾರರು: ಶೃಂಗೇರಿ: 1.66 ಲಕ್ಷ
– ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದಾರೆ.