Advertisement

ಕಾರ್ಕಳ ಸಾಮಾನ್ಯ ಸಭೆ: ಪುರಸಭೆಯ ಕಟ್ಟಡ ಸೋರಿಕೆಗೆ ಆಕ್ರೋಶ

06:00 AM Jul 19, 2018 | |

ಕಾರ್ಕಳ: ಕಾರ್ಕಳ ಪುರಸಭೆಯ ಕಟ್ಟಡದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದು, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಬಾರಿ ಸೋರಿಕೆ ತಪ್ಪಿಸಲು 5 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ. ಆದರೆ ಇದೀಗ ಹೆಚ್ಚು ಸೋರಿಕೆಯಾಗುತ್ತಿದ್ದು, ಈ ರೀತಿಯ ಕಳಪೆ ಕೆಲಸಕ್ಕೆ ಯಾರು ಜವಾಬ್ದಾರರು ಎಂದು ಪುರಸಭೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪುರಸಭೆಯ ಸಭಾಂಗಣದಲ್ಲಿ ಜು. 18ರಂದು ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಯೋಗೀಶ್‌ ವಿಷಯ ಪ್ರಸ್ತಾಪಿಸಿ, ಪುರಸಭೆಯಲ್ಲಿ ವಿವಿಧ ಇಲಾಖೆಗಳ ಸಾಕಷ್ಟು ಕಡತಗಳು, ಅನೇಕ ದಾಖಲೆಗಳಿವೆ. ಆದರೆ ಕಟ್ಟಡ ಅಲ್ಲಲ್ಲಿ ಸೋರಿಕೆಯಾಗುತ್ತಿದ್ದು, ಕಚೇರಿಯೊಳಗಿನ ಕಡತಗಳು ಹಾನಿಗೊಂಡರೆ ಯಾರು ಜವಾಬ್ದಾರರು? ಮುನ್ನೆಚ್ಚರಿಕೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಪ್ರತಿಕ್ರಿಯಿಸಿ, ಕಟ್ಟಡ ಸೋರಿಕೆಗೆ ಸಂಬಂಧಿಸಿದಂತೆ ಕಳೆದ ಬಾರಿ 5 ಲಕ್ಷ ರೂ. ವೆಚ್ಚದಲ್ಲಿ ಕೆಲಸ ನಿರ್ವಹಿಸಲಾಗಿದೆ. ಆದರೆ ಈ ಬಾರಿ ಮತ್ತೆ ಸೋರಿಕೆಯಾಗುತ್ತಿದ್ದು, ಮತ್ತೂಮ್ಮೆ ಕೆಲಸ ನಿರ್ವಹಿಸಲು ಹಣ ಇಡಲಾಗುತ್ತಿದೆ ಎಂದು ತಿಳಿಸಿದರು.

ಸದಸ್ಯರ ಆಕ್ರೋಶ
ಸೋರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಮತ್ತೆ ಮತ್ತೆ ಹಣ ಇಡುವುದು ಸರಿಯೇ? ಒಂದು ಬಾರಿ 5 ಲಕ್ಷ ರೂ. ಖರ್ಚು ಮಾಡಿ ಈ ಬಾರಿ ಮತ್ತೂಮ್ಮೆ ಹಾಳಾಗಿರುವುದಕ್ಕೆ ಯಾರು ಜವಾಬ್ದಾರರು? ಸೋರಿಕೆಯಿಂದಾಗಿ ಒಳಭಾಗಕ್ಕೆ ನೀರು ಬರುತ್ತಿದೆ. ಇದರಿಂದಾಗಿ ವಿದ್ಯುತ್‌ ಶಾಕ್‌ ಎದುರಾಗುವ ಭೀತಿಯಿದ್ದು, ಕಂಪ್ಯೂಟರ್‌ಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಸಾಕಷ್ಟು ಮಂದಿ ಕೆಲಸಗಾರರಿದ್ದಾರೆ. ಸಮಸ್ಯೆಯಾದರೆ ಜವಾಬ್ದಾರಿ ಹೊರುವವರು ಯಾರು ಎಂದು ಸದಸ್ಯರಾದ ಸುಭಿತ್‌ ಕುಮಾರ್‌, ಶರೀಫ್, ನವೀನ್‌ ದೇವಾಡಿಗ, ವಿವೇಕಾನಂದ ಶೆಣೈ ಮೊದಲಾದವರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿ ಡಾಮರು ಶೀಟ್‌ ಹಾಕಿ ತಾತ್ಕಾಲಿಕವಾಗಿ ಸೋರಿಕೆ ತಡೆಯಲಾಗಿತ್ತು. ಎಲ್ಲಾ ಕಡೆ ಕಾಂಕ್ರಿಟ್‌ ಹಾಕಿ ತಡೆಹಿಡಿಯಲು ಸಾಧ್ಯವಿಲ್ಲ. ಡಾಮರು ಶೀಟ್‌ ಕೂಡ ಬಿಸಿಲಿಗೆ ಸಮಸ್ಯೆಯಂಟಾಗು¤ದೆ. ಹೀಗಾಗಿ ಮೇಲ್ಛಾವಣಿಗೆ ಶೀಟ್‌ ಹಾಕಿ ಪರಿಹಾರ ಕಂಡುಕೊಳ್ಳಬಹುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

Advertisement

ವಹಿಸಿಕೊಟ್ಟರೆ ಟರ್ಪಾಲ್‌ ಹಾಕುತ್ತೇನೆ
ಈ ವೇಳೆ ಸದಸ್ಯ ಯೋಗೀಶ್‌ ಮಾತನಾಡಿ, ಶೀಟ್‌ ಹಾಕಲು ಅದರ ವಿಧಾನಗಳನ್ನು ಅನುಸರಿಸುವಾಗ ಮಳೆಗಾಲ ಮುಗಿಯುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ತಾತ್ಕಲಿಕ ಪರಿಹಾರ ಕಂಡುಕೊಳ್ಳವುದು ಅಗತ್ಯವಲ್ಲವೇ ಎಂದ ಅವರು, ನಿಮ್ಮಿಂದ ಸಾಧ್ಯವಾಗದಿದ್ದರೆ ನನಗೆ ವಹಿಸಿಕೊಡಿ ನಾನೇ ಟರ್ಪಾಲ್‌ ಹಾಕಿಸುತ್ತೇನೆ ಎಂದರು.

ಎಲ್ಲಿ  ಅಭಿವೃದ್ಧಿ ಆಗಿದೆ?
ಸ್ಥಾಯಿ ಸಮಿತಿ ಅಧ್ಯಕ್ಷ ಅಶ½ಕ್‌ ಅಹ್ಮದ್‌ ಮಾತನಾಡಿ, ಪುರೆಸಭೆಯ ವ್ಯಾಪ್ತಿಯಲ್ಲಿ ಕೆಲವು ಭಾಗಗಳಲ್ಲಿ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಾಜ್ಯ ಬೇರೆ ಭಾಗಗಳ ನೆರೆಯನ್ನು ನಾವು ನೋಡುತ್ತೇವೆ. ಆದರೆ ಕಾರ್ಕಳದ ರಸ್ತೆಗಳಲ್ಲಿ ಮಳೆ ಅದೇ ವೇಗದಲ್ಲಿ ನೀರು ಹರಿಯುತ್ತದೆ. ಮಕ್ಕಳು, ಮಹಿಳೆಯರಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ.ರಸ್ತೆಗಳಿಗೆ ಹಾಕಿದ ಡಾಮರು ಒಂದೇ ವರ್ಷದಲ್ಲಿ ಕಿತ್ತುಹೋಗುತ್ತಿದೆ. ನಗರಪ್ರದೇಶ ಎಲ್ಲಿ ಅಭಿವೃದ್ಧಿಯಾಗಿವೆ.  ಹೊಂಡಗುಂಡಿಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದೆಲ್ಲವೂ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.

ಶುಭದಾ ರಾವ್‌ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿ ಹಲವು ಮನೆಗಳಿರುವ ಭಾಗದ ಬೀದಿದೀಪಗಳೇ ಉರಿಯುತ್ತಿಲ್ಲ. ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ನಾಲ್ಕು ದಿನಗಳಿಗೊಮ್ಮೆ ಕಸ ವಿಲೇವಾರಿ ಮಾಡುವವರು ಬರುತ್ತಿದ್ದಾರೆ. ಮಳೆ ನೀರು ಹರಿಯಲು ಎಲ್ಲಿಯೂ ಚರಂಡಿ ವ್ಯವಸ್ಥೆ ಇನ್ನು ಆಗಿಲ್ಲ. ಸಭೆಯಲ್ಲಿ ಚರ್ಚೆ ಮಾತ್ರ ನಡೆಯುತ್ತಿದೆ ಎಂದು ತಿಳಿಸಿದರು.

ಪತ್ತೂಂಜಿಕಟ್ಟೆಯಲ್ಲಿ 25 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆ ಹಕ್ಕುಪತ್ರ ನೀಡಲಾಗಿದೆ. ಆದರೆ ಅಲ್ಲಿ ಮನೆ ನಿರ್ಮಾಣಕ್ಕೆ ಯಾವುದೇ ಮೂಲಭೂತ ಸೌಕರ್ಯವಿಲ್ಲ. ಬಡಕುಟುಂಬಗಳಿಗೆ ಮನೆ ಇಲ್ಲದೇ ಸಮಸ್ಯೆಯುಂಟಾಗಿದೆ ಎಂದು ಸದಸ್ಯೆ ನಳಿನಿ ಆಚಾರ್ಯ ತಿಳಿಸಿದರು.

ಸದಸ್ಯೆ ಪ್ರತಿಮಾ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪುರಸಭೆಯಿಂದ ನೀಡಲಾಗುವ ವಿದ್ಯಾರ್ಥಿವೇತನ ನೀಡಲಾಗಿಲ್ಲ. ಇದರಿಂದ ಆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.
ಪುರಸಭೆಯ ಅಧ್ಯಕ್ಷೆ ಅನಿತಾ ಆರ್‌. ಅಂಚನ್‌ ಅಧ್ಯಕ್ಷತೆ ವಹಿಸಿದ್ದರು.

ವೈಫ‌ಲ್ಯವೆಂದು ತೋರಿಸುವುದೇ?
ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯತ್ತಿದೆ. ಅದೇ ಸಮಸ್ಯೆ  ಮುಂದಿನ ಸಭೆಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಸಮಸ್ಯೆಗಳ ಬಗ್ಗೆ ಪುರಸಭೆಗೆ ಕಂಪ್ಲೇಂಟ್‌ ಕೊಟ್ಟರೂ ಪ್ರಯೋಜನವಿಲ್ಲದಂತಾಗುತ್ತದೆ. ಇದು ಆಡಳಿತ ಪಕ್ಷ ವೈಫ‌ಲ್ಯ ಎಂದು ತೋರಿಸುವುದೇ ಎಂದು ಸದಸ್ಯ ಪ್ರಕಾಶ್‌ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next