ಬ್ರಹ್ಮಾವರ: ಕರಾವಳಿ ತೀರದ ಗಂಡು ಕಲೆಯಾದ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಚಿಕ್ಕ ಮಕ್ಕಳಿಗೆ ಯಕ್ಷಗಾನದ ತಿಳಿವಳಿಕೆ, ತರಬೇತಿ ನೀಡುವ ಅಗತ್ಯವಿದೆ ಎಂದು ಶ್ರೀ ರಟ್ಟೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಆರ್. ನವೀನ್‌ಚಂದ್ರ ಶೆಟ್ಟಿ ಹೇಳಿದರು.
ಅವರು ಬಳ್ಮನೆ ಶ್ರೀ ಚಿತ್ತೇರಿ ಚತುರ್ಮುಖ ಬ್ರಹ್ಮ ಹಾಗೂ ಪರಿವಾರ ದೇವಸ್ಥಾನದಲ್ಲಿ ಡ್ಯುಯಲ್ ಸ್ಟಾರ್ ರೂರಲ್ ಎಜುಕೇಶನ್ ಟ್ರಸ್ಟ್‌ನ ಆಡಳಿತಕ್ಕೆ ಒಳಪಟ್ಟ ಡ್ಯುಯಲ್ ಸ್ಟಾರ್ ಶಾಲೆಯ ಗೆಜ್ಜೆನಾದ ಯಕ್ಷ ಕಲಾ ರಂಗ ಉದ್ಘಾಟಿಸಿ ಮಾತನಾಡಿದರು.
ಆಸಕ್ತಿ ಹಾಗೂ ತರಬೇತಿಯಿಂದ ಯಕ್ಷಗಾನ ಕಲೆಯು ಇನ್ನಷ್ಟು ಎತ್ತರಕ್ಕೆ ಎರುವುದರಲ್ಲಿ ಸಂಶಯವಿಲ್ಲ ಎಂದರು.
ಡ್ಯುಯಲ್ ಸ್ಟಾರ್‌ನ ನಿಯೋಜಿತ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ವಡ್ಡರ್ಸೆ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷ ಸಚ್ಚಿದಾನಂದ ಅಡಿಗ ವಡ್ಡರ್ಸೆ, ಸಂಚಾಲಕ ಶಶಿಧರ್ ದೇವಾಡಿಗ ವಡ್ಡರ್ಸೆ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರುಣಾಕರ್ ಶೆಟ್ಟಿಗಾರ್, ಶಾಲೆಯ ಟ್ರಸ್ಟಿಗಳಾದ ಅನಿತಾ ಹೆಗ್ಡೆ, ಸುಜಯ್ ಆರ್. ಹೆಗ್ಡೆ, ಅಶೋಕ ಆಚಾರ್ಯ ಮತ್ತು ಪಿ.ಟಿ.ಎ. ಅಧ್ಯಕ್ಷ ಸುಧಾಕರ್ ಶೇಟ್ ಉಪಸ್ಥಿತರಿದ್ದರು.
ಶಿಕ್ಷಕ ಮತ್ತು ಯಕ್ಷ ಗುರು ವಿಘ್ನೇಶ್ ಜಿ.ಎಲ್. ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸಂಯೋಜಿಸಿದರು.
ಅನಂತರ ಶಾಲೆಯ ವಿದ್ಯಾರ್ಥಿಗಳಿಂದ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನ ನಡೆಯಿತು.