Advertisement
ಉಬರಡ್ಕದಿಂದ ತರಲಾದ ಬಿಂಬ ಮರಕ್ಕೆ ಶನಿವಾರ ಸುಳ್ಯದಲ್ಲಿ ಸ್ವಾಗತ ಕೋರಲಾಗಿತ್ತು. ಕೊಳ್ತಿಗೆ ಗ್ರಾಮದಿಂದ ಕೊಡಿಮರವನ್ನು ತಂದು ರವಿವಾರ ಬೆಳಗ್ಗೆ ಅಮಿನಡ್ಕದಿಂದ ಎರಡೂ ಮರಗಳ ಮೆರವಣಿಗೆ ನಡೆಯಿತು. ಕೌಡಿಚ್ಚಾರಿನಲ್ಲಿ ಸಿಂಗಾರಿ ಮೇಳ, ಪೂರ್ಣಕುಂಭ ಸ್ವಾಗತ ಕೋರಿ ಪಟ್ಟೆ ಮಾರ್ಗವಾಗಿ ಗೆಜ್ಜೆಗಿರಿ ಕ್ಷೇತ್ರಕ್ಕೆ ತರಲಾಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಕೌಡಿಚ್ಚಾರಿನಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಗೆಜ್ಜೆಗಿರಿ ನಂದನ ಬಿತ್ತಿಲ್‌ನ ಯಜಮಾನ ಶ್ರೀಧರ ಪೂಜಾರಿ, ಪ್ರಮುಖರಾದ ರಾಜಶೇಖರ ಕೋಟ್ಯಾನ್, ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಸ್., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪಡುಮಲೆ ಕೂವೆಶಾಸ್ತಾರ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪಿ. ಸಂಜೀವ ರೈ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಕರ್ಕೇರ, ಮೋಹನದಾಸ್ ಕಾವೂರು, ಪೀತಾಂಬರ ಹೇರಾಜೆ, ಸಂಜೀವ ಪೂಜಾರಿ, ಶೈಲೇಂದ್ರ ಪೂಜಾರಿ, ಚಂದ್ರಶೇಖರ, ರವಿ ಪೂಜಾರಿ, ಚಂದ್ರಹಾಸ ಉಚ್ಚಿಲ, ಎಂಜಿನಿಯರ್ ಸಂತೋಷ್, ಉದಯ ಭಟ್, ನವೀನ್ ಸುವರ್ಣ, ದೀಪಕ್ ಕೋಟ್ಯಾನ್, ಉಲ್ಲಾಸ ಕೋಟ್ಯಾನ್, ದೇವೇಂದ್ರ ಪೂಜಾರಿ, ನವೀನ ಸುವರ್ಣ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸ್ವಾಗತಿಸಿ, ಸುಧಾಕರ ಸುವರ್ಣ ತಿಂಗಳಾಡಿ ಪ್ರಸ್ತಾವನೆಗೈದರು. ಶಶಿಧರ ಕಿನ್ನಿಮಜಲು ನಿರ್ವಹಿಸಿದರು. ಕೊಡಿಮರ, ಬಿಂಬಮರ
ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಹಾಗೂ ಕೋಟಿ – ಚೆನ್ನಯರ ಮೂರ್ತಿಯನ್ನು ಒಂದೇ ಮರದಲ್ಲಿ ನಿರ್ಮಿಸಲಾಗುತ್ತದೆ. ಬಿಂಬ ಮರವನ್ನು ಸುಳ್ಯದ ಉಬರಡ್ಕ ಗ್ರಾಮದ ನೈಯೋಣಿಯ ಶಶಿಧರ ಭಟ್ ಅವರ ಜಾಗದಿಂದ, ಕೊಡಿಮರವನ್ನು ಕೊಳ್ತಿಗೆ ಗ್ರಾಮದ ಚಿಮುಲಗುಂಡಿ ಓರ್ಕೊಡು ಸುದರ್ಶನ ಅವರ ಜಾಗದಿಂದ ತರಲಾಗಿದೆ. ಇವು ಕೋಟಿ-ಚೆನ್ನಯರ ಐತಿಹಾಸಿಕ ಹಿನ್ನೆಲೆಯಲ್ಲಿ ಬರುವ ಜಾಗಗಳಾಗಿವೆ.