Advertisement

ವಿಶ್ವಾಸಮತ ಸಾಬೀತಿಗೆ ಗೆಹ್ಲೋಟ್ ನಿರ್ಧಾರ

11:39 PM Aug 12, 2020 | mahesh |

ಜೈಪುರ: ಸಚಿನ್‌ ಪೈಲಟ್‌ ಸೇರಿದಂತೆ ಬಂಡಾಯವೆದ್ದು ಹೋಗಿದ್ದ ಶಾಸಕರು ಕಾಂಗ್ರೆಸ್‌ಗೆ ವಾಪಸಾಗಿ ರಾಜಕೀಯ ಬಿಕ್ಕಟ್ಟು ಶಮನವಾದರೂ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಮಾತ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಶುಕ್ರವಾರದಿಂದ ರಾಜಸ್ಥಾನ ವಿಧಾನಸಭೆಯ ಅಧಿ ವೇಶನ ಆರಂಭವಾಗಲಿದ್ದು, ಶಾಸಕರನ್ನು ಶಾಶ್ವತವಾಗಿ ಹೋಟೆಲ್‌ನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ವಿಶ್ವಾಸಮತ ಪ್ರಕ್ರಿಯೆ ಮುಗಿಸಿದರೆ ಮುಂದಿನ 6 ತಿಂಗಳ ಕಾಲ ಸರಕಾರ ಭದ್ರವಾಗಿದ್ದು, ಎಲ್ಲವನ್ನೂ ಸರಿದಾರಿಗೆ ತರಲು ನೆರವಾಗುತ್ತದೆ ಎನ್ನುವುದು ಗೆಹ್ಲೋಟ್‌ ಅವರ ಅಭಿಪ್ರಾಯ ಎಂದು ಹೇಳಲಾಗಿದೆ. ಪಕ್ಷದ ಇಬ್ಬರು ವೀಕ್ಷಕರಾದ ರಣದೀಪ್‌ ಸಿಂಗ್‌ ಸುಜೇವಾಲ ಮತ್ತು ಅಜಯ್‌ ಮಾಕನ್‌ ಜುಲೈ 12ರಿಂದಲೂ ರಾಜ್ಯದಲ್ಲೇ ಬೀಡುಬಿಟ್ಟಿದ್ದಾರೆ. ಈಗ 19 ಶಾಸಕರ ಬಂಡಾಯ ತಣ್ಣಗಾಗಿರುವ ಕಾರಣ, ಕಾಂಗ್ರೆಸ್‌ಗೆ 200 ಸದಸ್ಯರ ಸ್ಪಷ್ಟ ಬಹುಮತವಿದೆ.

ಶಾಸಕರಿಗೆ ಅಸಮಾಧಾನ: ಇದೇ ವೇಳೆ, ಜೈಸಲ್ಮೇರ್‌ನ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ಬಣದ ಕೆಲವು ಶಾಸಕರು ಹೈಕಮಾಂಡ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಬಂಡಾಯ ಶಾಸಕರೊಂದಿಗೆ ಸಂಧಾನ ಮಾತುಕತೆ ನಡೆಸಿರುವುದು ಮತ್ತು ಅವರನ್ನು ವಾಪಸ್‌ ಪಕ್ಷದಲ್ಲಿಯೇ ಮುಂದುವರಿಸಲು ಒಪ್ಪಿರು ವುದು ಕೆಲವು ಶಾಸಕರ ಅತೃಪ್ತಿಗೆ ಕಾರಣವಾಗಿದೆ. ಸರಕಾರವನ್ನೇ ಪತನಗೊಳಿಸಲು ಮುಂದಾದವರನ್ನು ಹೇಗೆ ಹೈಕಮಾಂಡ್‌ ಮರಳಿ ಸೇರಿಸಿಕೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮರೆಯೋಣ, ಕ್ಷಮಿಸೋಣ: ಶಾಸಕರಲ್ಲಿನ ಅಸಮಾ ಧಾನವನ್ನು ಶಮನಗೊಳಿಸಲು ಸಿಎಂ ಅಶೋಕ್‌ ಗೆಹೊÉàಟ್‌ ಯತ್ನಿಸಿದ್ದು, ಎಲ್ಲವನ್ನೂ ಮರೆತು, ಕ್ಷಮಿಸಿ ರಾಜ್ಯದ ಅಭಿವೃದ್ಧಿಗಾಗಿ ಮುಂದೆ ಸಾಗೋಣ ಎಂದು ಕರೆ ನೀಡಿದ್ದಾರೆ. ಕೆಲವು ಶಾಸಕರು ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಆದರೆ, ದೇಶ, ರಾಜ್ಯ ಹಾಗೂ ಜನರ ಹಿತಾಸಕ್ತಿಗಾಗಿ, ಪ್ರಜಾಸತ್ತೆಯ ಉಳಿವಿ ಗಾಗಿ ನಾವು ಕೆಲವೊಂದನ್ನು ಸಹಿಸಿಕೊಳ್ಳಬೇಕಾ ಗುತ್ತದೆ ಎಂದು ಹೇಳಿದ್ದೇನೆ. ಬಂಡಾಯವೆದ್ದವರು ಮರಳಿ ಬಂದಿದ್ದಾರೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಿ, ನಮ್ಮೊಳಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಗೆಹ್ಲೋಟ್.

ಸದ್ಯದ ಮಟ್ಟಿಗೆ ರಾಜಸ್ಥಾನದ ಕಾಂಗ್ರೆಸ್‌ ಸರಕಾರ ಸುರಕ್ಷಿತವಾದಂತೆ ಭಾಸವಾಗುತ್ತಿದೆ. ಆದರೆ, ಈ ರಾಜಕೀಯ ಡ್ರಾಮಾ ಮತ್ತೆ ಯಾವಾಗ ಶುರುವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಮಾಯಾವತಿ, ಬಿಎಸ್‌ಪಿ ನಾಯಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next