Advertisement

Rajastan: ಸರ್ದಾರಪುರದಲ್ಲಿ ಗೆಹ್ಲೋಟ್‌ ಸೋಲಿಲ್ಲದ ಸರ್ದಾರ

12:58 AM Nov 11, 2023 | Team Udayavani |

ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಪಕ್ಷದೊಳಕ್ಕೆ ಭಾರೀ ಒಳಜಗಳವಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ರನ್ನು ಹೇಗಾದರೂ ಮಾಡಿ ಆ ಸ್ಥಾನದಿಂದ ಕೆಳಕ್ಕಿಳಿಸಿ, ತಾನು ಆ ಪಟ್ಟ ಪಡೆಯಬೇಕೆಂದು ಸಚಿನ್‌ ಪೈಲಟ್‌ ಎಲ್ಲ ತಂತ್ರಗಳನ್ನೂ ಮಾಡಿದ್ದಾರೆ. ಅವು ಯಾವುದಕ್ಕೂ ಗೆಹ್ಲೋಟ್‌ ಜಗ್ಗಿಲ್ಲ. ವಿಶೇಷವೆಂದರೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸಾರಥಿಯಾಗಿರುವ ಗೆಹ್ಲೋಟ್‌ ನಿರಾಳವಾಗಿದ್ದಾರೆ. ಸಾಮಾನ್ಯವಾಗಿ ನೇತಾರರನ್ನು ಅವರವರ ಕ್ಷೇತ್ರಗಳಲ್ಲೇ ಕಟ್ಟಿ ಹಾಕುವುದು ಮಾಮೂಲಿ. ಇಲ್ಲಿ ಆ ತಂತ್ರ ಕೆಲಸ ಮಾಡುವುದಿಲ್ಲ. ಕಾರಣ ಜೋಧಪುರದ ಸರ್ದಾರಪುರ ಕ್ಷೇತ್ರದಲ್ಲಿ ಗೆಹ್ಲೋಟ್‌ ಸೋಲಿಲ್ಲದ ಸರ್ದಾರ.

Advertisement

ಮೊದಲು ಜೋಧಪುರ ಲೋಕಸಭಾ ಕ್ಷೇತ್ರದಿಂದ ಗೆಲ್ಲುತ್ತಿದ್ದ ಗೆಹ್ಲೋಟ್‌ , 1998ರ ಅನಂತರ ವಿಧಾಸಭೆಗಿಳಿದರು. ಅಲ್ಲಿಂದ ಇಲ್ಲಿಯವರೆಗೆ 5 ಬಾರಿ ಗೆದ್ದಿದ್ದಾರೆ. ರಾಜಸ್ಥಾನಕ್ಕೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರತೀ ಬಾರಿ ಅವರು ಸ್ಪರ್ಧಿಸಿದಾಗಲೂ ಗೆಲುವಿನ ಅಂತರ ಹೆಚ್ಚಾಗಿದೆ. ಹಾಗಾಗಿ ಗೆಹ್ಲೋಟ್‌ ನಿರಾಳ. ಇದು ಸಚಿನ್‌ ಪೈಲಟ್‌ಗೆ ತಲೆನೋವು ಎನ್ನದೇ ವಿಧಿಯಿಲ್ಲ. ಮತ್ತೂಂದು ಕಡೆ ಬಿಜೆಪಿಗೂ ಕಷ್ಟವಾಗಲಿದೆ.

ಜೋಧಪುರದಲ್ಲಿ ಗೆಹ್ಲೋಟ್‌ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು ಅವರ ಕ್ಷೇತ್ರದ ಜನತೆ ಮಾತಾಡಿಕೊಳ್ಳುತ್ತಾರೆ. ಅವರಿಂದಲೇ ಏಮ್ಸ್‌, ಐಐಟಿ, ಎನ್‌ಐಎಫ್ಟಿ, ಕಾನೂನು ವಿಶ್ವವಿದ್ಯಾನಿಲಯಗಳು ಬಂದಿವೆ. ಅತ್ಯುತ್ತಮ ರಸ್ತೆಗಳು, ಮೂಲಸೌಕರ್ಯಗಳು ಲಭಿಸಿವೆ ಎಂದು ಜನತೆ ಹೇಳುತ್ತಾರೆ. ಹೀಗಾಗಿ ನ.25ರಂದು ನಡೆಯುವ ಮತದಾನದ ಫ‌ಲಿತಾಂಶ ಏನಿ ರಲಿದೆ ಎನ್ನುವುದು ಗೆಹ್ಲೋಟ್‌ ಗೆ ಈಗಾಗಲೇ ಖಚಿತವಾದಂತಿದೆ!

Advertisement

Udayavani is now on Telegram. Click here to join our channel and stay updated with the latest news.

Next