Advertisement
ಕಳೆದ 13 ವರ್ಷಗಳಿಂದ ವಿಚಾರಣೆಯಲ್ಲಿದ್ದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಒಳಗೊಂಡಿದ್ದ ಪೀಠ ವಿಚಾರಣೆ ನಡೆಸಿತು. ಗೆಹಲೋಟ್ ಆಜೀವ ಅಧ್ಯಕ್ಷ ಸ್ಥಾನ ಹೊಂದಿರುವುದು ಕಾನೂನು ಬಾಹಿರ. ಬದೌರಿಯಾ ಅವರು ಮೇ 19, 2013 ಮತ್ತು ಎ. 23, 2017ರಲ್ಲಿ ನಡೆಸಿದ ಆಡಳಿತ ಸಂಪೂರ್ಣವಾಗಿ ಅಸಿಂಧು. ಈ ಅವಧಿಯಲ್ಲಿ ಸರಕಾರದಿಂದ ಪಡೆದ ಅನುದಾನವನ್ನೆಲ್ಲ ಮತ್ತೆ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ. ಜನಾರ್ಧನ್ ಸಿಂಗ್ ಗೆಹಲೋಟ್ ಮತ್ತು ಅವರ ಕುಟುಂಬ ದೇಶದ ಕಬಡ್ಡಿಯನ್ನು 28 ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದರು. ತಮಗೆ ಹೇಗೆ ಬೇಕೋ ಹಾಗೆ ಕಬಡ್ಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು.
ಬಿಸಿಸಿಐನಲ್ಲಿ ಅರಾಜಕತೆ ಸೃಷ್ಟಿಯಾಗಿದ್ದಾಗ ಸುಪ್ರೀಂ ಕೋರ್ಟ್ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಇದೇ ಮಾದರಿಯಲ್ಲಿ ದಿಲ್ಲಿ ಹೈಕೋರ್ಟ್ ಕಬಡಿಡೂ ಆಡಳಿತಾಧಿಕಾರಿ ನೇಮಕ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಸನತ್ ಕೌಲ್ ಮುಂದಿನ ಎಕೆಎಫ್ಐ ಜವಾಬ್ದಾರಿಯನ್ನು ಹೊತ್ತಿದ್ದಾರೆ.