Advertisement

Udupi: ಗೀತಾರ್ಥ ಚಿಂತನೆ-111: ಇಲ್ಲದ್ದು ಬರುವುದೂ ಇಲ್ಲ, ಇದ್ದದ್ದು ಹೋಗೂದೂ ಇಲ್ಲ

10:04 PM Dec 01, 2024 | Team Udayavani |

ಸತ್ತಾಗ ಪ್ರಾಜ್ಞರು ದುಃಖ ಪಡುವವರನ್ನು ಕಂಡು ನಗುತ್ತಾರೆ. ಏಕೆಂದರೆ ಆತ ಹೊರಟಲ್ಲಿಗೆ (ಗುರಿ) ತಲುಪಿದ ಎಂಬ ಕಾರಣಕ್ಕೆ.
ನತ್ವೇವಾಹಂ ಜಾತು ನಾಸಂ ನ ತ್ವಂ ನೇಮೇ ಜನಾಧಿಪಾಃ|
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ್‌|| (ಗೀತೆ 2-12) ನಾಟಕದಲ್ಲಿ ಸಾಯುವ ದೃಶ್ಯ ನೋಡಿ ಅಳುವವರನ್ನು ಕಂಡು “ಅದು ನಾಟಕ ಮಾರಾಯ, ನಿಜವಲ್ಲ’ ಎನ್ನುವುದಿಲ್ಲವೆ? ವಾಸ್ತವದಲ್ಲಿ ಹುಟ್ಟುವುದೂ ನಿಜವಲ್ಲ, ಸಾಯುವುದೂ ನಿಜವಲ್ಲ. “ಹುಟ್ಟುವುದು ಅಂದರೆ ಇಲ್ಲದೆ ಇದ್ದದ್ದು ಬಂತು, ಸಾಯುವುದೆಂದರೆ ಇದ್ದದ್ದು ಹೋಯಿತು’ ಎಂದು ತಿಳಿದಿದ್ದೇವೆ.

Advertisement

ಇಲ್ಲದೆ ಇದ್ದದ್ದು ಬರುವುದೂ ಇಲ್ಲ, ಇದ್ದದ್ದು ಹೋಗುವುದೂ ಇಲ್ಲ. ಎಲ್ಲಿಯೋ ಇದ್ದದ್ದು ಬಂತು. ಇತ್ತು ಹೋಯಿತು. ಎಲ್ಲಿಯೂ ಇಲ್ಲದ್ದು ಬಂದದ್ದೂ ಅಲ್ಲ, ಇದ್ದದ್ದು ಹೋಗೂದೂ ಅಲ್ಲ. ನಾನಾಗಲೀ, ನೀನಾಗಲೀ ಸಾಯುವವರಲ್ಲ, ಅನಾದಿ ಕಾಲದಿಂದ ಇದ್ದವರು. ಇಲ್ಲ ಅಂತಾದಾಗ ಅಳಬೇಕು. ಇಲ್ಲ ಅಂತ ಆಗುವುದೇ ಇಲ್ಲವಲ್ಲ? ಮಗ ಎಲ್ಲಿಯೋ ಇದ್ದ ಅಂದರೆ ಅಳುತ್ತೇವೋ? ಸತ್ತ ಅಂದರೂ ಎಲ್ಲಿಯೋ ಇದ್ದಾನೆಂದರ್ಥ. ಇಲ್ಲ ಅಂತಾದರೆ ಮಾತ್ರ ದುಃಖೀಸಬೇಕು. ನಮ್ಮ ಕಣ್ಣೆದುರು ಇಲ್ಲ ಎಂದರ್ಥ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next