Advertisement

ಗೀತಾ: ಇಲ್ಲಿರೋದು ಕನ್ನಡ ಪ್ರೇಮ ಪರಭಾಷಾ ದ್ವೇಷವಲ್ಲ!

09:19 AM Sep 26, 2019 | Naveen |

ನಮ್ಮದು ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲ ಭಾಷಿಕರನ್ನೂ ಭಾಷೆಗಳನ್ನೂ ಆಧರಿಸಿ ಗೌರವಿಸೋ ಪರಿಪಾಠ ಬೆಳೆದು ಬಂದಿದೆ. ಆದರೂ ಕೂಡಾ ಇಲ್ಲಿ ಭಾಷೆಗಳ ವಿಚಾರದಲ್ಲಿಯೇ ಆಗಾಗ ತಿಕ್ಕಾಟಗಳು ನಡೆಯುತ್ತವೆ. ಕೆಲವೊಮ್ಮೆ ಪರಭಾಷಾ ಹಾವಳಿಯಿಂದ ಕನ್ನಡದಂಥಾ ಭಾಷೆಗಳಿಗೆ ಕುತ್ತುಂಟಾಗೋದೂ ಇದೆ. ಅಂಥಾ ಯಾವ ಪಲ್ಲಟಗಳಿಗೂ ಕನ್ನಡವೆಂಬುದು ನೆಲೆ ಕಳೆದುಕೊಳ್ಳಬಾರದೆಂಬ ಆಶಯದೊಂದಿಗೆ ಹುಟ್ಟಿಕೊಂಡಿದ್ದ ಗೋಕಾಕ್ ಚಳುವಳಿಗೇ ಗೀತಾ ಚಿತ್ರದ ಜೀವಾಳ. ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಇಲ್ಲಿ ಅಪ್ಪಟ ಕನ್ನಡ ಪ್ರೇಮಿಯಾಗಿ, ಕನ್ನಡಪರ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ.

Advertisement

ವಿಜಯ್ ನಾಗೇಂದ್ರ ನಿರ್ದೇಶನದ ಈ ಚಿತ್ರದ ಟ್ರೈಲರ್  ಇತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ಗಣೇಶ್ ಕನ್ನಡ ಪ್ರೇಮದ ವಿರಾಟ್ ರೂಪದ ಅನಾವರಣವಾಗಿದೆ. ಇದೇ ಟ್ರೈಲರಿನಲ್ಲಿ ಗಣೇಶ್ ತಮಿಳು ಭಾಷಿಕನಿಗೆ ಎಚ್ಚರಿಕೆ ಕೊಡೋ ತುಣುಕೂ ಇದೆ. ಆದರೆ ಇದುವೇ ಈ ಚಿತ್ರದ ಕಥೆ ಕನ್ನಡಿಗರು ಮತ್ತು ತಮಿಳು ಭಾಷಿಕರ ಸಂಘರ್ಷದ ಕಥೆ ಹೊಂದಿದೆಯಾ ಅನ್ನೋ ಚರ್ಚೆಗೂ ಕಾರಣವಾಗಿದೆ. ಚಿತ್ರತಂಡವೇ ಇಲ್ಲಿ ಆ ಥರದ ಕಥೆ ಇಲ್ಲವೇ ಇಲ್ಲ ಎಂಬ ಸ್ಪಷ್ಟನೆ ನೀಡಿದೆ.

ಇದರ ನಾಯಕ ಅಪ್ಪಟ ಕನ್ನಡ ಪ್ರೇಮಿ. ಆದರೆ ಪರಭಾಷಾ ದ್ವೇಷಿಯಲ್ಲ. ಅಂಥಾ ದ್ವೇಷದ ಸಣ್ಣ ಅಂಶವೂ ಈ ಚಿತ್ರದಲ್ಲಿಲ್ಲವಂತೆ. ಆದರೆ ಭಾಷೆಯ ವಿಚಾರ ಬಂದಾಗ ಆ ಅಭಿಮಾನವನ್ನೇ ಹೋರಾಟವಾಗಿ ಬದಲಾಯಿಸುವಂಥಾ ಸೂಕ್ಷ್ಮ ಶಕ್ತಿಯ ಕಥೆ ಇಲ್ಲಿದೆ. ಸೈಯದ್ ಸಲಾಂ ಮತ್ತು ಶಿಲ್ಪಾ ಗಣೇಶ್ ಇಂಥಾ ಸಂಕೀರ್ಣ ಕಥೆಯ ಚಿತ್ರಕ್ಕೆ ಯಾವ ರೀತಿಯ ಕೊರತೆಯೂ ಆಗದಂತೆ ನೋಡಿಕೊಂಡು ನಿರ್ದೇಶಕರ ಕನಸಿಗೆ ಒತ್ತಾಸೆಯಾಗಿದ್ದಾರಂತೆ. ಹೀಗೆ ಕನ್ನಡ ಪ್ರೇಮ ಮತ್ತು ಪ್ರೀತಿಯ ಕಥೆ ಹೊಂದಿರೋ ಈ ಚಿತ್ರ ಇದೇ ತಿಂಗಳ ಇಪ್ಪತ್ತೇಳರಂದು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next