Advertisement

ಗೋಲ್ಡನ್ ಗೀತಾಗೆ ಗೋಕಾಕ್ ಚಳುವಳಿಯ ನಂಟು!

08:46 AM Sep 24, 2019 | Team Udayavani |

ಐತಿಹಾಸಿಕ ಘಟನೆಗಳನ್ನು ಕಮರ್ಶಿಯಲ್ ಸಿನಿಮಾಗಳ ಚೌಕಟ್ಟಿಗೆ ಒಗ್ಗಿಸೋದು ಕಷ್ಟದ ಕೆಲಸ. ಅದರಲ್ಲಿಯೂ ಕನ್ನಡಿಗರೆಲ್ಲರ ಅಸ್ಮಿತೆಯಂತಿರೋ ಗೋಕಾಕ್ ಚಳುವಳಿಯನ್ನು ಮರುಸೃಷ್ಟಿಸೋದೆಂದರೆ ಅದೊಂದು ಸಾಹಸ. ನಿರ್ದೇಶಕ ವಿಜಯ್ ನಾಗೇಂದ್ರ ಅಂಥಾ ಸವಾಲನ್ನು ತಮ್ಮ ಚೊಚ್ಚಲ ನಿರ್ದೇಶನದ ಗೀತಾ ಮೂಲಕವೇ ಸ್ವೀಕರಿಸಿದ್ದಾರೆ. ಇಂಥಾ ಸಾಹಸ ನಿರ್ಮಾಪಕರ ಸಾಥ್ ಇಲ್ಲದೆ ಸಾಧ್ಯವಾಗುವಂಥಾದ್ದಲ್ಲ. ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಸಂಪೂರ್ಣ ಸಹಕಾರದಿಂದಲೇ ಅದು ನೆರವೇರಿಕೊಂಡಿದೆ.

Advertisement

ಈ ಚಿತ್ರದಲ್ಲಿ ಗಣೇಶ್ ಕನ್ನಡ ಪ್ರೇಮಿಯಾಗಿ, ಕನ್ನಡದ ಪರವಾಗಿ ಧ್ವನಿಯೆತ್ತುವ ಹೋರಾಟಗಾರನಾಗಿ ನಟಿಸಿದ್ದಾರೆ. ಈ ವಿಚಾರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರಲರ್ ಮೂಲಕವೇ ಸಾಬೀತಾಗಿದೆ. ಇಲ್ಲಿ ಗೋಕಾಕ್ ಚಳವಳಿಯ ಚಿತ್ರಣವಿದೆ ಎಂದಾಕ್ಷಣ ಅದರದ್ದೊಂದಷ್ಟು ಝಲಕುಗಳನ್ನು ತೋರಿಸಲಾಗಿದೆ ಎಂದೇ ಅನೇಕರು ಅಂದುಕೊಂಡಿರಬಹುದು. ಆದರೆ ಗೋಕಾಕ್ ಚಳವಳಿಯನ್ನಿಲ್ಲಿ ಮರು ಸೃಷ್ಟಿಸಲಾಗಿದೆ. ಅದೆಷ್ಟೋ ಕಾಲ ಇಡೀ ಚಿತ್ರತಂಡ ಇದಕ್ಕಾಗಿಯೇ ಶ್ರಮವಹಿಸಿದೆ.

ಗೋಕಾಕ್ ಚಳುವಳಿಗಾಗಿ ಎಂಭತ್ತರ ದಶಕವನ್ನು ಈ ಸಿನಿಮಾ ದೃಶ್ಯಗಳಲ್ಲಿ ಮತ್ತೆ ಸೃಷ್ಟಿಸಲಾಗಿದೆ. ಇದು ನಿಜಕ್ಕೂ ಕಷ್ಟದ ಕೆಲಸ. ದೃಶ್ಯಗಳಲ್ಲಿ ಬ್ಲಾಕ್ ಆಂಡ್ ವೈಟ್ ಜಮಾನವನ್ನು ಪ್ರಚುರ ಪಡಿಸೋದೆಂದರೆ ಉಡುಗೆ ತೊಡುಗೆಯಿಂದ ಮೊದಲ್ಗೊಂಡು ಪ್ರತಿಯೊಂದು ಸೂ ಕ್ಷ್ಮ ವಿಚಾರಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ರೂಪಿಸಬೇಕು. ಅದನ್ನು ಗೀತಾ ಚಿತ್ರತಂಡ ಸಮರ್ಥವಾಗಿಯೇ ನಿಭಾಯಿಸಿದೆಯಂತೆ. ಇದರ ಜೊತೆಗೆ ಈವತ್ತಿನ ಕಥೆಗೂ ಜೊತೆ ಸಾಗುತ್ತದೆ. ಇಂಥಾದ್ದೊಂದು ಸಂಕೀರ್ಣವಾದ ಕಥಾನಕವನ್ನು ಮೊದಲ ಹೆಜ್ಜೆಯಲ್ಲಿಯೇ ಆರಿಸಿಕೊಂಡಿರೋ ವಿಜಯ್ ನಾಗೇಂದ್ರರ ಧೈರ್ಯದ ಬಗ್ಗೆ ಎಲ್ಲರೂ ಬೆರಗಾಗಿದ್ದಾರೆ. ಅಂಥಾ ಬೆರಗು ನೋಡುಗರ ಕಣ್ಣಲ್ಲಿಯೂ ಪ್ರತಿಫಲಿಸುವಂತೆ ಗೀತಾ ಮೂಡಿ ಬಂದಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next