Advertisement

ಅನಾರೋಗ್ಯದಿಂದ ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆ ಗೀತಾ ಸಾವು

01:02 PM Dec 13, 2020 | Mithun PG |

ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆ ಗೀತಾ(85) ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

Advertisement

ಅನಾರೋಗ್ಯದಿಂದ ಕಳೆದ ಮೂರು ನಾಲ್ಕು ದಿನದಿಂದ ಆಹಾರ ತ್ಯಜಿಸಿದ್ದ ಆನೆ ಇಂದು  ಬೆಳಗ್ಗೆ ಸಕ್ರೆಬೈಲಿನ ಕ್ರಾಲ್ ಸಮೀಪ ಮೃತಪಟ್ಟಿದೆ.

ರಾಜ್ಯದ ಆನೆ ಬಿಡಾರಗಳಲ್ಲೇ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಗೀತಾ ಆನೆ ಪಾತ್ರವಾಗಿತ್ತು. 1968ರಲ್ಲಿ ಕಾಕನಕೋಟೆಯಲ್ಲಿ ಈ ಆನೆಯನ್ನು ಸೆರೆಹಿಡಿದು ಪಳಗಿಸಲಾಗಿತ್ತು, ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ‌ ಕಳುಹಿಸಿಕೊಡಲಾಗಿತ್ತು.

ಇದನ್ನೂ ಓದಿ:  ಶೌಚಗೃಹದಲ್ಲಿ ಮೊಬೈಲ್‌ ಇರಿಸಿ, ಪ್ರಿಯಕರನಿಗೆ ವಿಡಿಯೋ ರವಾನೆ : ನರ್ಸ್‌ ಬಂಧನ

ಇದನ್ನೂ ಓದಿ: ಲಾರಿಗೆ ಢಿಕ್ಕಿ ಹೊಡೆದ ಬೈಕ್: ಸ್ನೇಹಿತರಿಬ್ಬರು ಸಾವು

Advertisement
Advertisement

Udayavani is now on Telegram. Click here to join our channel and stay updated with the latest news.

Next