ತೀರ್ಥಹಳ್ಳಿ : ಬಿ.ವೈ ರಾಘವೇಂದ್ರ ಅವರಿಗಿಂತ ಜಾಸ್ತಿ ಬಂಗಾರಪ್ಪನವರ ಕೊಡುಗೆ ಜಿಲ್ಲೆಗೆ ಇದೆ. ಮುಳುಗಡೆ ಪ್ರದೇಶಕ್ಕೆ ರಾಘವೇಂದ್ರ ಏನು ಮಾಡಿದ್ದಾರೆ? ಕೇಂದ್ರ ಸರ್ಕಾರ ಅವರದ್ದೇ ಇತ್ತು, ರಾಜ್ಯ ಸರ್ಕಾರ ಕೂಡ ಅವರ ಕೈಲಿ ಇತ್ತು. ಅಡಿಕೆ ಬೆಳೆಗಾರರಿಗೆ ಮೋಸ ಮಾಡಿದ್ದಾರೆ. ಎಲ್ಲೋ ಒಂದೆರಡು ಕಾಮಗಾರಿ ಆಗಿದೆ. ಆದರೆ ಈ ಬಾರಿ ಜನ ತಿರುಗಿ ಬಿದ್ದಿದ್ದಾರೆ ಎಂದು ಒಬಿಸಿ ಜಿಲ್ಲಾಧ್ಯಕ್ಷರಾದ ರಮೇಶ್ ಹೇಳಿದರು.
ಶನಿವಾರ ತೀರ್ಥಹಳ್ಳಿಯಲ್ಲಿ ಒಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಈ ಬಾರಿ ಗೀತಾ ಶಿವರಾಜ್ ಕುಮಾರ್ ಗೆಲ್ಲುವುದು ಖಚಿತ. ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು ಗೆದ್ದಿರಲಿಲ್ಲ. ಆದ್ರೆ ಈ ಬಾರಿ ಕಾಂಗ್ರೆಸ್ ಪಕ್ಷ ಅವರನ್ನು ನೂರಕ್ಕೆ ನೂರು ಅವರನ್ನು ಗೆಲ್ಲಿಸುತ್ತದೆ. ಹಸ್ತದ ಚಿಹ್ನೆ ಯಾವತ್ತೂ ಅವರನ್ನು ಕೈ ಬಿಡುವುದಿಲ್ಲ ಎಂದರು.
ಈಶ್ವರಪ್ಪನವರ ಸ್ಪರ್ಧೆ ಬಗ್ಗೆ ಮಾತನಾಡಿ ಒಂದು ರೀತಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ. ಆದರೆ ಇನ್ನು ನಾಮಪತ್ರ ವಾಪಾಸ್ ಪಡೆಯಲು ಸಮಯ ಇರುವುದರಿಂದ ವಾಪಾಸ್ ತೆಗೆದುಕೊಂಡರು ತೆಗೆದುಕೊಳ್ಳಬಹುದು ಎಂಬ ಭರವಸೆ ಇದೆ. ಅವರು ಚುನಾವಣೆಗೆ ಸ್ಪರ್ಧೆ ಮಾಡಿದರೂ ನಮಗೆ ಒಳ್ಳೆಯದಾಗುತ್ತದೆ ಎಂದರು.
ಗೀತಾ ಶಿವರಾಜ್ ಕುಮಾರ್ ಇಲ್ಲಿಯವರೆಗೆ ಶಿವಮೊಗ್ಗಕ್ಕೆ ಬಂದಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿ ಎಲ್ಲಾ ಸಮಯದಲ್ಲಿ ಬಂದರೆ ಸರಿ ಹೋಗುವುದಿಲ್ಲ. ಶಿವಮೊಗ್ಗ, ಸಾಗರ, ಸೊರಬಕ್ಕೆ ಬಂದು ಜನರ ಕಷ್ಟ ವಿಚಾರಿಸಿ ಕೆಲಸ ಮಾಡಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾ ನಟ ಆಗಿದ್ದ ಕಾರಣ ಓಪನ್ ಆಗಿ ಬರುತ್ತಿರಲಿಲ್ಲ. ಎಂ ಪಿ ಆದ ನಂತರ ಜನರ ಜೊತೆಗೆ ಶಿವಮೊಗ್ಗದಲ್ಲೇ ಇರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪ. ಪಂ ಅಧ್ಯಕ್ಷೆ ಗೀತಾ ರಮೇಶ್,ಬಸವಾನಿ ಉದಯ್ ಕುಮಾರ್ ,ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ