Advertisement

Tomato: ನೇಪಾಲದಿಂದ ದೀರ್ಘಾವಧಿಗೆ ಟೊಮೇಟೊ ಪೂರೈಕೆಗೆ ಸಜ್ಜು

12:12 AM Aug 13, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಟೊಮೇಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆ ಬೆಲೆ ಸುಧಾರಿಸುವ ನಿಟ್ಟಿನಲ್ಲಿ ನೆರೆ ರಾಷ್ಟ್ರ ನೇಪಾಲದಿಂದ ಟೊಮಾಟೊ ಖರೀದಿಗೆ ಭಾರತ ಮುಂದಾಗಿದೆ. ನೇಪಾಲವೂ ಕೂಡ ದೀರ್ಘಾವಧಿಯಲ್ಲಿ ಟೊಮೆಟೊ ಪೂರೈಕೆಗೆ ಸಿದ್ಧವಿದ್ದು, ಸರಿಯಾದ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡುವಂತೆ ಭಾರತ ಸರಕಾರವನ್ನು ಕೇಳಿದೆ.

Advertisement

ಕೃಷಿ ಸಚಿವಾಲಯದ ವಕ್ತಾರ ಶಬನಮ್‌ ಶಿವಕೋಟಿ ಈ ಕುರಿತು ಮಾಹಿತಿ ನೀಡಿದ್ದು, ಈಗಾಗಲೇ ಕಳೆದ 1 ವಾರದ ಹಿಂದಿನಿಂದಲೂ ಭಾರತಕ್ಕೆ ನೇಪಾಲ ಟೊಮೇಟೊ ಪೂರೈಸುತ್ತಿದೆ. ಇದನ್ನು ದೀರ್ಘಾವಧಿಗೆ ವಿಸ್ತರಿಸಲು ಅಗತ್ಯವಾದ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳನ್ನು ನಾವು ಕಲ್ಪಿಸಬೇಕಿದೆ ಅದಕ್ಕಾಗಿ ಕಾರ್ಯಪ್ರವೃತ್ತರಾಗಿದ್ದೇವೆ ಶೀಘ್ರವೇ ಟೊಮೇಟೊ ಸಾಮಾನ್ಯ ಬೆಲೆಯಲ್ಲಿ ದೊರಕಲಿದೆ ಎಂದಿದ್ದಾರೆ. ಮತ್ತೂಂದೆಡೆ ತಮಿಳುನಾಡಿನ ಈರೋಡ್‌ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 150ರೂ. ಗಡಿದಾಟಿದ್ದ ಟೊಮೇಟೊ ಈಗ 80 ರೂ.ಗಳಿಗೆ ಇಳಿಕೆಯಾಗಿದೆ. ಕರ್ನಾಟಕದ ಚಾಮರಾಜ ನಗರದಿಂದ ಪೂರೈಕೆ ಹೆಚ್ಚಳವಾದ ಬಳಿಕ ಈ ಬೆಳವಣಿಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next