Advertisement
ಪ್ರತೀ ಬಾರಿಯೂ ಭಾರತದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎನ್ನುವಾಗ, ಒಂದಿಲ್ಲೊಂದು ಕಾರಣಗಳಿಂದಾಗಿ ಪೆಟ್ಟು ಬೀಳುತ್ತದೆ. ಮೋದಿ ಸರಕಾರದ ಎರಡನೇ ಅವಧಿ ಶುರುವಾದಾಗ, ಭಾರತದ ಅಭಿವೃದ್ಧಿ ದರ ಏರಿಕೆಯ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ಜಗತ್ತಿನಾದ್ಯಂತ ಕಾಣಿಸಿಕೊಂಡ ಕೊರೊನಾ ಮಹಾಮಾರಿ, ಜನರಿಗಷ್ಟೇ ಅಲ್ಲ, ಎಲ್ಲಾ ದೇಶಗಳ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿತು. ಆರ್ಥಿಕ ತಜ್ಞರ ಪ್ರಕಾರ, ಕೊರೊನಾ ವೇಳೆಯಲ್ಲಿ ಆಗಿರುವ ಹೊಡೆತ ಸರಿಯಾಗಬೇಕು ಎಂದರೆ, ಇನ್ನೂ ಹತ್ತಾರು ವರ್ಷಗಳು ಬೇಕು. ಅಂದರೆ, 2035ರ ವೇಳೆಗೆ ಜಗತ್ತಿನ ಆರ್ಥಿಕತೆ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ.
Related Articles
Advertisement
ಇನ್ನು ವ್ಯಾಪಾರ, ಹೊಟೇಲ್ ಮತ್ತು ಸಾರಿಗೆ ವಲಯಗಳಲ್ಲಿಯೂ ಉತ್ತಮ ಸುಧಾರಣೆಯಾಗಿದೆ. ಇಲ್ಲಿ ಶೇ. 11.1ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ವೇಳೆಗೆ ಶೇ.20ರಷ್ಟು ನೇತ್ಯಾತ್ಮಕ ಪ್ರಗತಿಯಾಗಿತ್ತು. ಹಾಗೆಯೇ ಉತ್ಪಾದನಾ ವಲಯವೂ ಶೇ. 9.9ರಷ್ಟು ಪ್ರಗತಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.0.6ರಷ್ಟು ನೇತ್ಯಾತ್ಮಕ ಬೆಳವಣಿಗೆಯಾಗಿತ್ತು. ಆದರೆ ಕಳೆದ ವರ್ಷ ಕೃಷಿ ವಲಯ ಶೇ.3.3ರಷ್ಟು ಬೆಳವಣಿಗೆ ಸಾಧಿಸಿದ್ದು, ಈ ವರ್ಷ ಶೇ. 3ಕ್ಕೆ ಕುಸಿತವಾಗಿದೆ. ಈ ಎಲ್ಲ ಅಂಕಿ ಅಂಶಗಳು, ಆರ್ಥಿಕತೆಯ ಬಗ್ಗೆ ಆಶಾವಾದ ಮೂಡಿಸುವಂತಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಬಂಧಿತ ವಲಯಗಳ ಉತ್ತೇಜನಕ್ಕೆ ಮತ್ತಷ್ಟು ಸಹಕಾರ ನೀಡಬೇಕು. ಎಲ್ಲೆಲ್ಲಿ ಕಡಿಮೆ ಬೆಳವಣಿಗೆ ದರವಾಗಿದೆಯೋ ಅಲ್ಲಿ, ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಲ್ಲದೆ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಂಡು ಹಣದುಬ್ಬರ ಸಮಸ್ಯೆಯನ್ನೂ ಹೋಗಲಾಡಿಸಬೇಕು. ಆಗಷ್ಟೇ ಮುಂದಿನ ಹಣಕಾಸು ವರ್ಷದಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ.