Advertisement

Gaza; ಜು.13ರ ದಾಳಿಯಲ್ಲೇ ಹಮಾಸ್‌ ಸೇನಾ ಮುಖ್ಯಸ್ಥನ ಕೊಂದಿದ್ದೇವೆ: ಇಸ್ರೇಲ್‌

12:56 AM Aug 02, 2024 | Team Udayavani |

ಜೆರುಸಲೇಂ: ಹಮಾಸ್‌ ಮಿಲಿಟರಿ ಪಡೆಯ ಮುಖ್ಯಸ್ಥ ಮೊಹಮ್ಮದ್‌ ಡೈಫ್ ಜುಲೈಯಲ್ಲಿ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲೇ ಹತ್ಯೆಗೈಯ್ಯಲಾಗಿದೆ ಎಂದು ಇಸ್ರೇಲ್‌ ಮಿಲಿಟರಿ ಗುರುವಾರ ದೃಢಪಡಿಸಿದೆ. ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆನ ಹತ್ಯೆಯಾದ ಬೆನ್ನಲ್ಲೇ ಡೀಫ್ ಹತ್ಯೆಯನ್ನೂ ದೃಢ ಪಡಿಸಿರುವುದು ಮಹತ್ವ ಪಡೆದಿದೆ.

Advertisement

ದಕ್ಷಿಣ ಗಾಜಾದ ಖಾನ್‌ ಯೂನಿಸ್‌ ನಗರದ ಹೊರವಲಯದಲ್ಲಿ ಡೈಫ್ ಉಪ ಸ್ಥಿತಿಯನ್ನು ಖಾತರಿಪಡಿಸಿ ಕೊಂಡು ಆತನನ್ನು ಗುರಿಯಾಗಿಸಿಯೇ ಜು.13 ರಂದು ಇಸ್ರೇಲ್‌ ಪಡೆಗಳು ದಾಳಿ ನಡೆಸಿ ದ್ದವು. ಆದರೆ ಆ ದಾಳಿಯಲ್ಲಿ ಡೈಫ್ ಮೃತಪಟ್ಟಿಲ್ಲ ಎಂದು ಹಮಾಸ್‌ ವಾದಿಸಿತ್ತು.

ಆ ಬಳಿಕ ನಿಜವಾಗಿಯೂ ದಾಳಿಯಲ್ಲಿ ಡೈಫ್ ಮೃತ ಪಟ್ಟಿದ್ದಾನೋ? ಇಲ್ಲವೋ ಎಂಬು  ದನ್ನು ಪತ್ತೆ ಹಚ್ಚಲು ಇಸ್ರೇಲ್‌ ಗುಪ್ತಚರ ಮೂಲಗಳು ಕಾರ್ಯ  ನಿರ್ವ ಹಿಸಿದ್ದು, ಇದೀಗ ಆತ ದಾಳಿಯಲ್ಲಿ ಮೃತ ಪಟ್ಟಿದ್ದು ಸತ್ಯ ಎಂದು ದೃಢಪಡಿಸಿವೆ. ಡೈಫ್ 2023 ಅ.7ರ ಇಸ್ರೇಲ್‌ ದಾಳಿಯ ರೂವಾರಿ ಎನ್ನ ಲಾಗಿದೆ. ಬುಧ ವಾರ ಇಸ್ರೇಲ್‌ ಇರಾನ್‌ ನಲ್ಲಿ ನಡೆಸಿದ್ದ ದಾಳಿಯಲ್ಲಿ ಹಮಾಸ್‌ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆನನ್ನು ಕೊಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next