Advertisement

ತಾರಕಕ್ಕೇರಿದ ಇಸ್ರೇಲ್, ಪ್ಯಾಲೆಸ್ತೀನ್‌ ಕದನ

01:47 AM May 06, 2019 | Sriram |

ಗಾಜಾ:ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ ನಡುವೆ ಶನಿವಾರ ಆರಂಭವಾಗಿದ್ದ ಕ್ಷಿಪಣಿ ದಾಳಿ ಭಾನುವಾರವೂ ಮುಂದುವರಿದಿದೆ. ಪರಸ್ಪರ ಎರಡೂ ದೇಶಗಳು ಕ್ಷಿಪಣಿ ದಾಳಿ ಮಾಡಿದ್ದು ಸುಮಾರು 400 ರಾಕೆಟ್‌ಗಳು ಹಾರಾಡಿವೆ. ಇಸ್ರೇಲ್ನ ದಾಳಿಯಿಂದಾಗಿ ಪ್ಯಾಲೆಸ್ತೀನ್‌ನಲ್ಲಿ ಗರ್ಭಿಣಿ ಹಾಗೂ ಆಕೆಯ ಮಗು ಸಹಿತ 6 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಗರ್ಭಿಣಿ ಹಾಗೂ ಮಗು ದಾಳಿಯಿಂದಾಗಿ ಸತ್ತಿಲ್ಲ ಎಂದು ಇಸ್ರೇಲ್ ಹೇಳಿಕೊಂಡಿದೆ. ಇನ್ನು 40 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗರ್ಭಿಣಿ ಮತ್ತು ಮಗು ಸತ್ತಿದ್ದು ಪ್ಯಾಲೆಸ್ತೀನ್‌ ದಾಳಿಯಿಂದ, ನಾವು ಕೇವಲ ಸೇನಾ ನೆಲೆಗಳನ್ನಷ್ಟೇ ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.

Advertisement

ಗಾಜಾ ಬಂಡುಕೋರರು ನಡೆಸಿದ ದಾಳಿಗೆ ಪ್ರತಿಯಾಗಿ ನಾವು ಗಾಜಾ ಪಟ್ಟಿಯಲ್ಲಿನ ಸುಮಾರು 200 ಉಗ್ರ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಕ್ಷಿಣ ಗಾಜಾದಿಂದ ಇಸ್ರೇಲ್ ಮುಖ್ಯ ಭಾಗಕ್ಕೆ ಸಂಪರ್ಕ ಕಲ್ಪಿಸಿರುವ ಸುರಂಗದ ಮೇಲೂ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಗಾಜಾ ಪಟ್ಟಿಯಲ್ಲಿನ ಬಹು ಅಂತಸ್ತಿನ ಎರಡು ಕಟ್ಟಡಗಳು ಧ್ವಂಸಗೊಂಡಿವೆ. ಹಮಾಸ್‌ ಬಂಡುಕೋರರು ಹಾಗೂ ಜಿಹಾದಿ ಸಂಘಟನೆಗಳ ಕಚೇರಿ ಇದರಲ್ಲಿತ್ತು ಎಂದು ಇಸ್ರೇಲ್ ಹೇಳಿದೆ. ಘಟನೆ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಭದ್ರತಾ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲದೆ, ಗಾಜಾ ಪಟ್ಟಿಯಲ್ಲಿ ಬಂಡುಕೋರರ ಮೇಲೆ ದಾಳಿ ತೀವ್ರಗೊಳಿಸುವಂತೆ ಸೇನೆಗೆ ಸೂಚಿಸಿದ್ದಾರೆ. ಇನ್ನೊಂದೆಡೆ ಈಜಿಪ್ಟ್ ಹಾಗು ವಿಶ್ವಸಂಸ್ಥೆ ಅಧಿಕಾರಿಗಳು ಶಾಂತಿ ಮಾತುಕತೆಗೆ ಯತ್ನ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next