ಕಿಂಗ್‌ಸ್ಟನ್: ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮತ್ತು ಆಲ್‌ರೌಂಡರ್ ಮಾರ್ಲಾನ್ ಸಾಮ್ಯುಯೆಲ್ಸ್ ವೆಸ್ಟ್ ಇಂಡೀಸ್ ಏಕದಿನ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಲಾಗುವ ಏಕದಿನ ಸರಣಿಗಾಗಿ ಪ್ರಕ ಟಿಸಲಾದ ತಂಡದಲ್ಲಿ ಈ ಅನುಭವಿ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.
ಕ್ರಿಸ್ ಗೇಲ್ ಕಳೆದ 3 ವರ್ಷಗಳಿಂದ ವಿಂಡೀಸ್ ಏಕದಿನ ತಂಡ ದಿಂದ ಹೊರಗುಳಿದಿದ್ದರು. 2015ರ ವಿಶ್ವಕಪ್‌ನಲ್ಲಿ ಕೊನೆಯ ಸಲ ಆಡಿದ್ದರು. ಸಾಮ್ಯುಯೆಲ್ಸ್ ಕೊನೆಯ ಸಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು 2016ರ ಅಕ್ಟೋಬರ್‌ನಲ್ಲಿ. ಇತ್ತೀಚಿನ ವರ್ಷಗಳಲ್ಲಿ ತೀರಾ ಶೋಚನೀಯ ಪ್ರದರ್ಶನ ನೀಡುತ್ತಿರುವ ವಿಂಡೀಸ್ ತಂಡಕ್ಕೆ ಇವರಿಬ್ಬರ ಸೇರ್ಪಡೆಯಿಂದ ಹೊಸ ಚೈತನ್ಯ ಲಭಿಸಬಹುದೆಂದು ಭಾವಿಸಲಾಗಿದೆ.
“ಗೇಲ್ ಮತ್ತು ಸಾಮ್ಯು ವೆಲ್ಸ್ ಅವರಿಗೆ ಸ್ವಾಗತ. ಇವ ರಿಬ್ಬರೂ ತಂಡದ ಕಿರಿಯ ಆಟಗಾರರಿಗೆ ಸ್ಫೂರ್ತಿ ಆಗಲಿದ್ದಾರೆ. ಇಬ್ಬರೂ ತಮ್ಮ ನೈಜ ಆಟದೊಂದಿಗೆ ಆಯ್ಕೆಗೆ ನ್ಯಾಯ ಸಲ್ಲಿಸಲಿದ್ದಾರೆ ಎಂದು ಭಾವಿಸಿದ್ದೇವೆ…’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಕೋರ್ಟ್ನಿ ಬ್ರೌನ್ ಹೇಳಿದ್ದಾರೆ.
ಸುನೀಲ್ ನಾರಾಯಣ್ ಮತ್ತು ಡ್ವೇನ್ ಬ್ರಾವೊ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ ಎಂದೂ ಬ್ರೌನ್ ಈ ಸಂದರ್ಭದಲ್ಲಿ ತಿಳಿಸಿದರು.
ಇಂಗ್ಲೆಂಡ್ ವಿರುದ್ಧ ಸೆ. 19-29ರ ಅವಧಿಯಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ವೆಸ್ಟ್ ಇಂಡೀಸ್, ಇದಕ್ಕೂ ಮುನ್ನ ಸೆ. 13ರಂದು ಅಯರ್‌ಲ್ಯಾಂಡ್ ವಿರುದ್ಧ ಸ್ಟೋರ್ಮಂಟ್‌ನಲ್ಲಿ ಒಂದು ಏಕದಿನ ಪಂದ್ಯ ಆಡಲಿದೆ.
ವೆಸ್ಟ್ ಇಂಡೀಸ್ ತಂಡ
ಜಾಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಮಾರ್ಲಾನ್ ಸಾಮ್ಯುಯೆಲ್ಸ್, ಸುನೀಲ್ ಆ್ಯಂಬ್ರಿಸ್, ದೇವೇಂದ್ರ ಬಿಶೂ, ಮಿಗ್ಯುಯೆಲ್ ಕಮಿನ್ಸ್, ಕೈಲ್ ಹೋಪ್, ಶೈ ಹೋಪ್, ಅಲ್ಜಾರಿ ಜೋಸೆಫ್, ಎವಿನ್ ಲೆವಿಸ್, ಜಾಸನ್ ಮೊಹಮ್ಮದ್, ಆ್ಯಶೆÉ ನರ್ಸ್, ರೋವ¾ನ್ ಪೊವೆಲ್, ಜೆರೋಮ್ ಟಯ್ಲರ್, ಕೆಸ್ರಿಕ್ ವಿಲಿಯಮ್ಸ್.