Advertisement

ಭಾರತ ವಿರುದ್ಧದ ಸರಣಿಗೆ ಗೇಲ್‌

11:51 PM Jul 27, 2019 | Sriram |

ಕಿಂಗ್‌ಸ್ಟನ್‌: ಪ್ರವಾಸಿ ಭಾರತದೆದುರಿನ ಏಕದಿನ ಸರಣಿಗೆ ವೆಸ್ಟ್‌ ಇಂಡೀಸ್‌ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್‌ ಕೂಡ ಇದ್ದಾರೆ. ಇದು ಗೇಲ್‌ ಅವರ ವಿದಾಯ ಸರಣಿಯಾಗಲಿದೆ.

Advertisement

39ರ ಹರೆಯದ ಕ್ರಿಸ್‌ ಗೇಲ್‌ ಏಕದಿನದಲ್ಲಿ 10,393 ರನ್‌ ಬಾರಿಸಿದ್ದಾರೆ. ಇನ್ನು 13 ರನ್‌ ಮಾಡಿದರೆ ಲಾರಾ ಅವರ ವೆಸ್ಟ್‌ ಇಂಡೀಸ್‌ ದಾಖಲೆ ಮುರಿಯ ಲಿದ್ದಾರೆ. ಸರಣಿಯ ಮೂರೂ ಪಂದ್ಯಗಳನ್ನಾಡಿದರೆ ಗೇಲ್‌ ಭರ್ತಿ 300 ಏಕದಿನಗಳಲ್ಲಿ ವಿಂಡೀಸನ್ನು ಪ್ರತಿನಿಧಿಸಿದಂತಾಗುತ್ತದೆ.

ಹೋಲ್ಡರ್‌ ಅವರನ್ನೇ ನಾಯಕ ನನ್ನಾಗಿ ಮುಂದುವರಿಸಲಾಗಿದೆ. ವಿಶ್ವಕಪ್‌ಗೆ ಕಡೆಗಣಿಸಲ್ಪಟ್ಟಿದ್ದ ಓಪನರ್‌ ಜಾನ್‌ ಕ್ಯಾಂಬೆಲ್‌, ಆಲ್‌ರೌಂಡರ್‌ ರೋಸ್ಟನ್‌ ಚೇಸ್‌, ಕೀಮೊ ಪೌಲ್‌ ತಂಡಕ್ಕೆ ಮರಳಿದ್ದಾರೆ. ಆ್ಯಂಡ್ರೆ ರಸೆಲ್‌, ಸುನೀಲ್‌ ಆ್ಯಂಬ್ರಿಸ್‌, ಆ್ಯಶೆÉ ನರ್ಸ್‌, ಶಾನನ್‌ ಗ್ಯಾಬ್ರಿಯಲ್‌ ಅವರನ್ನು ಕೈಬಿಡಲಾಗಿದೆ. ಮೊದಲ ಏಕದಿನ ಆ. 8ರಂದು ನಡೆಯಲಿದೆ.

ವಿಂಡೀಸ್‌ ತಂಡ
ಜಾಸನ್‌ ಹೋಲ್ಡರ್‌ (ನಾಯಕ), ಕ್ರಿಸ್‌ ಗೇಲ್‌, ಜಾನ್‌ ಕ್ಯಾಂಬೆಲ್‌, ಎವಿನ್‌ ಲೆವಿಸ್‌, ಶೈ ಹೋಪ್‌, ಶಿಮ್ರನ್‌ ಹೆಟ್‌ಮೈರ್‌, ನಿಕೋಲಸ್‌ ಪೂರನ್‌, ರೋಸ್ಟನ್‌ ಚೇಸ್‌, ಫ್ಯಾಬಿಯನ್‌ ಅಲನ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಕೀಮೊ ಪೌಲ್‌, ಶೆಲ್ಡನ್‌ ಕಾಟ್ರೆಲ್‌, ಒಶೇನ್‌ ಥಾಮಸ್‌, ಕೆಮರ್‌ ರೋಚ್‌.

Advertisement

Udayavani is now on Telegram. Click here to join our channel and stay updated with the latest news.

Next